ನಟಿ ಹರ್ಷಿಕಾ ಪೂಣಚ್ಚ ಕಂಬ್ಯಾಕ್ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶಕ ನಿರ್ದೇಶನ
ನಟ ಹಾಗು ಪತಿ ಭುವನ್ ಪೊನ್ನಣ್ಣಗೆ “ ಹಲೋ 123” ಸಿನಿಮಾ ಮಾಡುವುದಾಗಿ ಪ್ರಕಟಿಸಿರುವ ನಿರ್ದೇಶಕ ಯೋಗರಾಜ್ ಭಟ್, ಇದೀಗ ನಟಿ ಹರ್ಷಿಕಾ ಪೂಣಚ್ಚಗೂ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ, ಈ ಮೂಲಕ ಪತಿ, ಪತ್ನಿ ಇಬ್ಬರಿಗೂ ನಿರ್ದೇಶನ ಮಾಡುವ ಅವಕಾಶ ಭಟ್ಟರ ಪಾಲಾಗಿದೆ.

ಮದುವೆ, ಮಗಳು ಆದ ಮೇಲೆ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಹರ್ಷಿಕಾ ಪೂಣಚ್ಚ ಕಮ್ ಬ್ಯಾಕ್ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ, ಹೀಗಾಗಿ ಚಿತ್ರ ಒಂದಷ್ಟು ಕುತೂಹಲ ಕೆರಳಿಸಿದೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ನಟಿ ಹರ್ಷಿಕಾ ಪೂಣಚ್ಚ ಸಿನಿಮಾ ಅನೌನ್ಸ್. ಅಮ್ರಿತಾ ಸಿನಿ ಕ್ರಾಫ್ಟ್ ಬ್ಯಾನರ್ ನಡಿಯಲ್ಲಿ ವಿಜಯ್ ಟಾಟಾ ಹಾಗೂ ಅಮ್ರಿತಾ ಟಾಟಾ ನಿರ್ಮಾಣದಲ್ಲಿ ಮಹಿಳಾ ಪ್ರಧಾನ ಚಿತ್ರ ಸೆಟ್ಟೇರಲು ಸಜ್ಜಾಗಿದೆ.
ಹರ್ಷಿಕಾ -ಪೂಣಚ್ಚ ಭುವನ್ ಪೊನ್ನಣ್ಣ ದಂಪತಿಯ ಮಗಳು ತ್ರಿದೇವಿ ಪೊನ್ನಕ್ಕ ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾಗೆ ಅಚ್ಚರಿ ಉಡುಗೊರೆಯನ್ನು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ವಿಜಯ್ ಟಾಟಾ ನೀಡಿದ್ದಾರೆ.
ಚಿತ್ರದ ಇನ್ನಿತರೆ ವಿವರಗಳನ್ನು ಚಿತ್ರತಂಡ ಸದ್ಯದಲ್ಲಿಯೇ ಹಂಚಿಕೊಳ್ಳಲಿದೆ ಎಂಡು ತಂಡ ತಿಳಿಸಿದೆ

