ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನದ ಕಿರುಚಿತ್ರ “ ಶರತ್ ಮತ್ತು ಶರಧಿ” - CineNewsKannada.com

ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನದ ಕಿರುಚಿತ್ರ “ ಶರತ್ ಮತ್ತು ಶರಧಿ”

ಬಣ್ಣದ ಲೋಕದಲ್ಲಿ ಆಗಾಗ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವು ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿ ಹಣ,ಕೀರ್ತಿ ಎಲ್ಲವನ್ನೂ ತಂದುಕೊಡುತ್ತವೆ. ಹೊಸಬರ ಪ್ರಯತ್ನದ ಮತ್ತೊಂದು ಕಿರುಚಿತ್ರ “ ಶರತ್ ಮತ್ತು ಶರಧಿ” ತಯಾರಾಗಿದೆ.

ನಿಜಜೀವನದಲ್ಲಿ ಅಂದ ದಂಪತಿಗಳಾಗಿರುವ ಅಶ್ವಿನಿ ಮತ್ತು ವೀರೇಶ್ ಚಿತ್ರದಲ್ಲಿ ನಾಯಕ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ. ಕಿರುಚಿತ್ರ ಸಿದ್ದಗೊಂಡಿರುವ ಹಿನ್ನೆಲೆಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಈ ಹಿಂದೆ ‘ಏಪ್ರಿಲ್‍ನ ಹಿಮಬಿಂದು’ ಚಿತ್ರ ನಿರ್ದೇಶನ ಮಾಡಿದ್ದ ಎಂ.ಜಗದೀಶ್ ಕತೆ ಬರೆದು ಆಕ್ಷನ್ ಕಟ್ ಹೇಳುವುದರ ಜತೆಗೆ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಗಣೇಶ್.ಬಿ.ಎಂ. ಬಂಡವಾಳ ಹೂಡಿ ಬೆನ್ನೆಲುಬಾಗಿದ್ದಾರೆ

ಈ ವೇಳೆ ಮಾತಿಗಿಳಿದ ನಿರ್ದೇಶಕ ಎಂ. ಜಗದೀಶ್, ಕಿರುಚಿತ್ರದ ಒಂದು ಸನ್ನಿವೇಶದಲ್ಲಿ ಕರೆಂಟ್ ಬಿಲ್ ದುಡ್ಡು ಉಳಿಸಬಹುದು ಎಂಬ ಸಂಭಾಷಣೆ ಇತ್ತು. ಆಗ ಅಶ್ವಿನಿ ಇದನ್ನು ತೆಗೆದುಬಿಡಿ. ನಮಗೆ ಕತ್ತಲೆ ಇರಬಹುದು. ನಮ್ಮಲ್ಲಿ ಕತ್ತಲಿರಬಾರದು. ಹಾಗೆನಾದರೂ ಇದ್ದರೆ ರಸ್ತೆಯಲ್ಲಿ ಕತ್ತಲೆ ಮನೆ ಆಂತ ಆಗೋಗುತ್ತೆ. ಇಬ್ಬರು ಬದುಕನ್ನು ಸಕರಾತ್ಮಕವಾಗಿ ನೋಡುತ್ತಿದ್ದಾರೆ. ಕಣ್ಣು ಮುಚ್ಚಿಕೊಂಡು ನೋಡಿದರೆ ಸಾಮಾನ್ಯ ಸಿನಿಮಾ ಅನಿಸುತ್ತದೆ. ಕೇವಲ ಮೂರು ಗಂಟೆಗಳಲ್ಲಿ ಡಬ್ಬಿಂಗ್ ಮುಗಿಸಿಕೊಟ್ಟರು ಎಂದರು

ಹಿರಿಯ ಕಲಾವಿದ ದತ್ತಣ್ಣ ಸರ್ ಕಿರುಚಿತ್ರ ಒಪ್ಪಿಕೊಳ್ಳುವುದಿಲ್ಲ. ಆದರೆ ವಿಷಯಗಳು ಚೆನ್ನಾಗಿರುವುದರಿಂದ ಯಾವುದೇ ಸಂಭಾವನೆ ಪಡೆಯದೆ ನಟಿಸಿ ಪ್ರೋತ್ಸಾಹ ಕೊಟ್ಟರು. ಬೇರೆ ಭಾಷೆಗಳಿಗೆ ಡಬ್ಬಂಗ್ ಮಾಡಿ ಬಿಡುಡಗೆ ಮಾಡುವ ಉದ್ದೇಶವಿದೆ ಎಂದು ಹೇಳಿದರು

ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಬ್ರಿಟನ್ ರಾಣಿಯಿಂದ ಗೌರವ ಸ್ವೀಕರಿಸಿರುವ ನಾಯಕಿ ಅಶ್ವನಿ ಅಂಗಡಿ ಮಾತನಾಡಿ ಇದೊಂತರ ಹೊಸ ಪ್ರಯತ್ನ.ಎಲ್ಲರಂತೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದೇವೆ. ದಿವ್ಯಾಂಗದ ಪೆÇೀಷಕರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಕ್ಕಳನ್ನು ಚೆನ್ನಾಗಿ ಬೆಳಸಿ ಎಂದರು

ಸರ್ಕಾರಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ದಾವಣಗೆರೆ ಮೂಲದ ನಾಯಕನಾಗಿ ಅಭಿನಯಿಸಿರುವ ವೀರೇಶ್.ಎಂ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡರು.

ಹಿರಿಯ ನಟ ದತ್ತಣ್ಣ ಮಾತನಾಡಿ ವೀರೇಶ್ ಹಾಗೂ ಅಶ್ವನಿ ಎಲ್ಲರ ಮಧ್ಯೆ ಸುಖದಿಂದ ಬದುಕಿನ ಪಯಣ ಸಾಗಿಸುತ್ತಿದ್ದಾರೆ. ಅವರಿಗೂ ದೊಡ್ಡ ವ್ಯತ್ಯಾಸ ಏನು ಇಲ್ಲ. ಸಮಾಜ ಕೂಡ ಅವರನ್ನು ಬೇರೆ ರೀತಿಯಲ್ಲಿ ನೋಡಬೇಕಾದ ಅಗತ್ಯ ಇಲ್ಲ. ವಿಭಿನ್ನವಾಗಿ ಸಬಲರಾಗಿದ್ದೇವೆ.ಅಂಗವಿಕಲರಲ್ಲ ಎಂಬ ಅರ್ಥಪೂರ್ಣ ಸಂದೇಶ ಹೇಳಿದ್ದಾರೆ. ಇಂತಹ ಚಿತ್ರಕ್ಕೆ ಮಾನ್ಯತೆ ಸಿಗಬೇಕಾಗಿದೆ ಎಂದು

ಅನುಬಂಧದ ಮೇಲೆ ಮದುವೆ ಆಗಬೇಕು ಹೊರತು ಅನುಕಂಪದ ಮೇಲೆ ಮದುವೆ ಆಗಬಾರದು. ದುಖ: ಪಡೋದಕ್ಕೆ ಸಾಕಷ್ಟು ಕಾರಣ ಇರುತ್ತವೆ. ಅದೇ ಸುಖವಾಗಿ ಇರೋದಕ್ಕೆ ಕಾರಣಗಳು ಬೇಕಾಗಿಲ್ಲ. ಸಂತೋಷವಾಗಿ ಇದ್ದೇವೆ ಅಂತ ಮನಸ್ಥಿತಿ ಇದ್ದರೆ ಸಾಕು. ಇಂತಹ ಹಲವು ಮನಸ್ಸು ಕದಡುವ ಡೈಲಾಗ್‍ಗಳು ಮನಮಿಡಿಯುವಂತಿವೆ

ಸಂಗೀತ ಸತೀಶ್ ಪದ್ಮನಾಬನ್, ಛಾಯಾಗ್ರಹಣ ವಿನಯ್ ಹೊಸಗೌಡರ್, ಕೋ ಡೈರಕ್ಟರ್ ಚೇತನ್ ತ್ರಿವೇಣ್,ಸುಪ್ರೀತ್.ಬಿ.ಕೆ ಸಂಕಲವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin