“ಶ್ರೀಮತಿ ಸಿಂಧೂರ’ ಚಿತ್ರಕ್ಕೆ “ಗ್ರೀನ್ ಸಿಗ್ನಲ್” ಕೊಟ್ಟ ನಿರ್ಮಾಪಕ ನಾಗೀರೆಡ್ಡಿ
ನಟ ಅಜಯ್ ರಾವ್ ಅವರಿಗೆ ‘ಗ್ರೀನ್ ಸಿಗ್ನಲ್’ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಡಿ.ಎನ್.ನಾಗೀರೆಡ್ಡಿ ಬಹಳ ವರ್ಷಗಳ ನಂತರ ಮರಳಿ ಚಿತ್ರರಂಗಕ್ಕೆ ಬಂದಿದ್ಧಾರೆ. ಈ ಬಾರಿ ಚಿನ್ನಾರಿ ಮುನ್ನ ವಿಜಯ್ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ “ಶ್ರೀಮತಿ ಸಿಂಧೂರ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರ ನೀಡಿ ಗಮನ ಸೆಳೆದಿರುವ ನಿರ್ದೇಶಕ ಅನಂತರಾಜು ಈ ಚಿತ್ರಕ್ಕೆ ಆಕ್ಷನ್ಕಟ್ ಹೇಳುತ್ತಿದ್ದು, ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರಿಯಾಹೆಗಡೆ ನಾಯಕಿ ರೇಷ್ಮಾ.ವಿ.ಗೌಡ, ಗಣೇಶ್ ರಾವ್ ಕೇಸರ್ ಕರ್, ಮಾನಸಿ ಸುಧೀರ್. ಮನೋಜ್, ರಿತೇಶ್, ಸ್ನೇಹಜಾದವ್ ಸೇರಿದಂತೆ ಹಲವು ಮಂದಿ ಕಲಾವಿದರು ಚಿತ್ರದಲ್ಲಿದ್ಧಾರೆ.
ಶ್ರೀಮತಿ ಸಿಂಧೂರ ಚಿತ್ರದ ಮೂಲಕ ಒಂದಷ್ಟು ಗ್ಯಾಪ್ನ ನಂತರ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರಕ್ಕೆ ಸಂಗೀತ ನೀಡಿತ್ತಿದ್ದಾರೆ. ಹಲವು ವಿಶೇಷತೆಗಳಿಂದು ಕೂಡಿರುವ ಚಿತ್ರಕ್ಕೆ ನಿರ್ಮಾಪಕ ನಾಗೀರೆಡ್ಡಿ ಅವರ ಪತ್ನಿ ಮಾರಮ್ಮ ದೇವಿ ಸನ್ನಿದಿಯಲ್ಲಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಅನಂತ್ ರಾಜ್, ಕಥೆ ಎಳೆಯ ಕತೆಯನ್ನು ನಿರ್ಮಾಪಕರು ಹೇಳಿದ್ದನ್ನು, ವಿಸ್ತಾರ ಮಾಡಿಕೊಂಡು ಸನ್ನಿವೇಶಗಳನ್ನು ಸಿದ್ದಪಡಿಸಲಾಗಿದೆ. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ ಎಂದು ಹೇಳಿದರು
ಬೀದರ್ ಮೂಲದ ಮಾರುತಿ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು
ನಾಯಕ ವಿಜಯರಾಘವೇಂದ್ರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ತರಹದ ಚಿತ್ರಗಳು ಬರುತ್ತಿದೆ. ಫ್ಯಾಮಿಲಿ ಕಥೆಗಳು ತುಂಬಾ ವಿರಳವಾಗಿದೆ. ಯಾವುದು ಅರ್ಥವಾಗುವುದಿಲ್ಲವೋ ಅದರ ಕಡೆ ಒಲವು ಜಾಸ್ತಿ ಆಗುತ್ತದೆ. ಇದನ್ನು ಪವಾಡ, ಅದೃಷ್ಟ ಎನ್ನಬೇಕೋ ತಿಳಿಯದು. ಒಳ್ಳೆ ಸ್ಕ್ರಿಪ್ಟ್, ಪಾತ್ರ ಇದ್ದರೆ ಖಂಡಿತ ಓಕೆ ಎನ್ನುತ್ತೇನೆ. ಆ ಸಾಲಿಗೆ ಈ ಚಿತ್ರವೂ ಸೇರಲಿದ್ದು ಜವಬ್ದಾರಿಯುತ ಕುಟುಂಬದ ಮಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು

ನಿರ್ಮಾಪಕ ನಾಗೀರೆಡ್ಡಿ ಮಾತನಾಡಿ ಗ್ರೀನ್ ಸಿಗ್ನಲ್ ಚಿತ್ರದ ಬಳಿಕ ಶ್ರೀಮತಿ ಸಿಂಧೂರಗೆ ಬಂಡವಾಳ ಹೂಡುತ್ತಿದ್ದೇನೆ. ಚಿನ್ನಾರಿ ಮುತ್ತ ವಿಜಯರಾಘವೇಂದ್ರ ಅವರಿಂದ ಸಿನಿಮಾಗೆ ವಜ್ರ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು
ಕವಿರಾಜ್, ಕೆ.ಕಲ್ಯಾಣ್ ಸಾಹಿತ್ಯಕ್ಕೆ ರಾಜೇಶ್ರಾಮನಾಥ್ ಸಂಗೀತವಿದೆ.ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್, ನೃತ್ಯ ಫೈವ್ಸ್ಟಾರ್ ಗಣೇಶ್ ಅವರದಾಗಿದೆ. ಇದೇ 23ರಿಂದ ಶೂಟಿಂಗ್ಗೆ ತೆರೆಳಲು ತಂಡ ಸಿದ್ದತೆ ಮಾಡಿಕೊಂಡಿದೆ.

