“ಮಹಾಲಯ”ದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಕಂಟೆಂಟು ಇದೆ- ನಿರ್ದೇಶಕ ಮೋಹನ್ ಮಾಯಣ್ಣ
“ಸೀತಾರಾಮ ಕಲ್ಯಾಣ”, “ಭಜರಂಗಿ-2” ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿರು ಮೋಹನ್ ಮಾಯಣ್ಣ’ ಮಹಾಲಯ” ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ, ಅವರಿಗೆ ಗಣೇಶ್ ಪಾಪಣ್ಣ ಮತ್ತು ಯತೀಶ್ ವೆಂಕಟೇಶ್ ಬೆನ್ನೆಲುಬಾಗಿ ನಿಂತಿದ್ದಾರೆ.

ಚಿತ್ರದ ಮುಹೂರ್ತಕ್ಕೆ ನಟ ಶ್ರೀಮುರುಳಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಈ ವೇಳೆ ಮಾತಿಗಳಿದ ನಿರ್ದೇಶಕ ಮೋಹನ್ ಮಾಯಣ್ಣ, ಸಿನಿಮಾ ಜೊತೆಗೆ ನಾಲ್ಕೈದು ಕಿರುಚಿತ್ರ ನಿರ್ದೇಶಿಸಿದ್ದೇನೆ. ಅದನ್ನು ನೋಡಿ ನಿರ್ಮಾಪಕರು ದೊಡ್ಡ ಅವಕಾಶ ನೀಡಿದ್ದಾರೆ. 1990ರ ಸಮಯದಲ್ಲಿ ನಡೆಯುವ ಕಥೆ, ಮಹಾಲಯ ಚಿತ್ರದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಕಂಟೆಂಟ್ ಇದೆ ಎಂದು ಹೇಳಿದರು
ನಿರ್ಮಾಪಕ ಗಣೇಶ್ ಪಾಪಣ್ಣಮಾತನಾಡಿ, , ಎಲ್ಲಾ ವರ್ಗದ ಪ್ರೇಕ್ಷಕರಿಗೂ ಅರ್ಥವಾಗುವ ವಿಭಿನ್ನ ಕಂಟೆಂಟ್ ಚಿತ್ರದಲ್ಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ರಷ್ಯಾದ ಅರ್ಮೇನಿಯಾದಲ್ಲಿ 7 ರಿಂದ 10 ದಿನಗಳ ದಿನಗಳ ಕಾಲ ಚಿತ್ರೀಕರಣ, ನಂತರ ಬೆಂಗಳೂರು, ಆನಂತರ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸೇರಿ 40 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಈ ಚಿತ್ರಕ್ಕೆ ಕಥೆಯೇ ನಾಯಕ ಎಂದರು
ಜೊತೆಗೆ 20 ಕ್ಕೂ ಹೆಚ್ಚು ಪ್ರಮುಖ ಪಾತ್ರಗಳಿದ್ದು, ಆ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು ಅಭಿನಯಿಸಲಿದ್ದಾರೆ. ಆಡಿಷನ್ ಮೂಲಕವೂ ಕಲಾವಿದರ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇವೆ. ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಂಟೆಂಟ್ ಚಿತ್ರದಲ್ಲಿದ್ದು, ಪ್ರತಿಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆಯಿದೆ. ಡಾ.ಸೂರಿ ಕ್ರಿಯೇಟಿವ್ ಹೆಡ್ ಆಗಿ ನಮ್ಮ ಜತೆ ನಿಂತಿದ್ದಾರೆ ಎಂದು ಹೇಳಿದರು.

ಮತ್ತೊಬ್ಬ ನಿರ್ಮಾಪಕ ಯತೀಶ್ ವೆಂಕಟೇಶ್ ಮಾತನಾಡಿ, ಮೊದಲ ಬಾರಿಗೆ ನಮ್ಮ ಚಿತ್ರಕ್ಕಾಗಿ ಅರ್ಮಾನಿಯಾದಿಂದ ಕಲಾವಿದರನ್ನು ಕರೆತರುತ್ತಿದ್ದೇವೆ. ಮೂರು ಭಾಗಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಅದರ ಒಂದು ಭಾಗದಲ್ಲಿ ಕಲಾವಿದರು ಇರುತ್ತಾರೆ. ನಿರ್ದೇಶಕ ಮೋಹನ್ ಮಾಯಣ್ಣ ಅವರ ಹತ್ತಿರ 3 ರಿಂದ 4 ಕಥೆಗಳನ್ನು ಕೇಳಿದ್ದೇನೆ. ಎಲ್ಲವೂ ನಮ್ಮ ಮಣ್ಣಿನ ಕಥೆಗಳೇ ಆಗಿದ್ದವು ಅದರಲ್ಲಿ ಈ ಕಥೆ ಕೈಗೆತ್ತಿಕೊಂಡಿದ್ದೇವೆ ಎಂದರು
ಪವನ್ ಸಾಯಿಕುಮಾರ್ ಛಾಯಾಗ್ರಹಣ, ಭುವನ್ ಚಂದ್ ಸಂಗೀತ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಅದ್ದೂರಿ ಗಿರೀಶ್ ಅವರ ನಿರ್ಮಾಣ ನಿರ್ವಹಣೆ “ಮಹಾಲಯ” ಚಿತ್ರಕ್ಕಿದೆ.

