Rap song from Dolly Pictures’ “JC” released

ಡಾಲಿ ಪಿಕ್ಚರ್ಸ್ ನಿರ್ಮಾಣದ “ಜೆಸಿ” ಚಿತ್ರದ ರಾಪ್ ಹಾಡು ಬಿಡುಗಡೆ - CineNewsKannada.com

ಡಾಲಿ ಪಿಕ್ಚರ್ಸ್ ನಿರ್ಮಾಣದ “ಜೆಸಿ” ಚಿತ್ರದ ರಾಪ್ ಹಾಡು ಬಿಡುಗಡೆ

ನಟ ರಾಕ್ಷಸ ಡಾಲಿ ಧನಂಜಯ ಅವರ `ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ತಯಾರಾದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೆ “ಜೆಸಿ” ಸಿನಿಮಾದ ರಾಪ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಹಾಡಿನ ಮೂಲಕ ಪ್ರಮೋಷನ್ ಪ್ರಾರಂಭ ಮಾಡಿರುವ ಜೆಸಿ ಸಿನಿಮಾತಂಡ ಟ್ರೈಲರ್ ರಿಲೀಸ್‍ಗೆ ಪ್ಲಾನ್ ಮಾಡುತ್ತಿದೆ. ಅಂದಹಾಗೆ ಜೆಸಿ ಎಂದರೆ ಈಗಾಗಲೇ ಗೊತ್ತಿರುವ ಹಾಗೆ “ಜುಡಿಷಿಯಲ್ ಕಸ್ಟಡಿ”.. ಜೈಲಿಂದ ಹೊರಗೆ ಬಂದಿರುವ ಯುವಕನ ಕಹಾನಿ ಸಿನಿಮಾದಲ್ಲಿ ಇರಲಿದೆ.

ಪ್ರಖ್ಯಾತ್ ನಾಯಕನಾಗಿ ನಟಿಸಿದ್ದಾರೆ. `ನಡುವೆ ಅಂತರವಿರಲಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಪ್ರಖ್ಯಾತ್ ದೊಡ್ಡ ಗ್ಯಾಒ ನ ನಂತರ ಮತ್ತೆ ಸಿನಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.’ವ್ರೂಮ್…ವ್ರೂಮ್…ರೋಡ್ ಮೇಲೆ ಬೀಸ್ಟ್ ಬಂತು ಸೈಡ್ ಕೊಡು…’ ಎನ್ನುವ ರಾಪ್ ಸಾಂಗ್ ಅನ್ನು ರಾಪರ್‍ಗಳಾದ ಎಮ್ ಸಿ ಬಿಜ್ಜು ಮತ್ತು ರಾಹುಲ್ ಡಿಟ್ಟೋ ಬರೆದು, ಸಂಗೀತ ನೀಡಿ ಅವರೇ ಹಾಡಿದ್ದಾರೆ.

ಚೇತನ್ ಜೈರಾಮ್ ಆಕ್ಷನ್-ಕಟ್ ಹೇಳಿದ್ದಾರೆ. ಪ್ರಖ್ಯಾತ್ ಜೊತೆಯಾಗಿ ನವ ನಾಯಕಿ ಭಾವನ ನಟಿಸಿದ್ದಾರೆ ಚೇತನ್ ಅವರಿಗೆ ಇದು ಮೊದಲ ಸಿನಿಮಾ. ಮಾಸ್ತಿ `ಜೆಸಿ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಪಕ್ಕಾ ಮಾಸ್ ಕಥಾಹಂದರ ಇರುವ ಸಿನಿಮಾವಾಗಿದೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin