The country drama film "Rona" is all set to hit the screens on November 7

ಹಳ್ಳಿಗಾಡಿನ ಸೊಗಡಿನ ಚಿತ್ರ” ರೋಣ” ನವಂಬರ್ 7ಕ್ಕೆ ತೆರೆಗೆ ಬರಲು ಸಜ್ಜು - CineNewsKannada.com

ಹಳ್ಳಿಗಾಡಿನ ಸೊಗಡಿನ ಚಿತ್ರ” ರೋಣ” ನವಂಬರ್ 7ಕ್ಕೆ ತೆರೆಗೆ ಬರಲು ಸಜ್ಜು

ಯುವ ನಟ ನಿರ್ಮಾಪಕ ರಘು ರಾಜನಂದ ನಿರ್ಮಿಸಿ,ನಾಯಕನಾಗಿ ಕಾಣಿಸಿಕೊಂಡಿರುವ “ರೋಣ”ಚಿತ್ರದ ಟ್ರೈಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿ ಚಿತ್ರ ಯಶಸ್ವಿಯಾಗಲಿ ಎಂದು ಬೆನ್ನುತಟ್ಟಿದ್ದಾರೆ, ಇದೇ ಖುಷಿಯಲ್ಲಿ ಚಿತ್ರದ ಟ್ರೈಲರ್ ಅನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ,ವಿ ಪ್ರಭಾಕರ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ

ನಿರ್ದೇಶಕ ಸತೀಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು ರಗುರಾಜ ನಂದ ಅವರಿಗೆ ನಾಯಕಿಯಾಗಿ ಪ್ರಕೃತಿ ಪ್ರಸಾದ್ ಕಾಣಿಸಿಕೊಂಡಿದ್ದಾರೆ, ಚಿತ್ರ ನವಂಬರ್ 7 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

ನಿರ್ದೇಶಕ ಸತೀಶ್ ಕುಮಾರ್ ಮಾತನಾಡಿ “ರೋಣ” ಚಿತ್ರ ಅಪ್ಪ-ಮಗನ ಕಥೆ ಒಳಗೊಂಡಿದ್ದು , ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ , ಧಾರ್ಮಿಕ, ರಾಜಕೀಯ, ಸ್ನೇಹ , ಪ್ರೀತಿ ಸೇರಿದಂತೆ ಮನೋರಂಜನೆಯ ಎಲ್ಲಾ ಅಂಶಗಳು ಚಿತ್ರವನ್ನು 65 ದಿನಗಳ ಕಾಲ ಹೊಸಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಂದುಕೊಂಡಂತೆ ಚಿತ್ರ ಮೂಡಿ ಬಂದಿದೆ ಸಹಕಾರವಿರಲಿ ಎಂದು ಕೇಳಿಕೊಂಡರು

ನಟ ಹಾಗೂ ನಿರ್ಮಾಪಕ ರಘು ರಾಜ ನಂದ ಮಾತನಾಡಿ ನಾಯಕನಾಗುವುದಕ್ಕೂ ಮುನ್ನ ಕೆರೆಬೇಟೆ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ ನಂತರ , ಚಿತ್ರª ಮಾಡಬೇಕೆಂದು ತೀರ್ಮಾನ ಮಾಡಿಕೊಂಡೆ. ಈಗ ರೋಣ ಚಿತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದೇನೆ. ಉತ್ತಮವಾಗಿ ಚಿತ್ರ ಮೂಡಿಬಂದಿದೆ.ಚಿತ್ರದ ದೇವಿ ಹಾಡು ಕೂಡ ಬಹಳ ಸೊಗಸಾಗಿ ಬಂದಿದೆ. ಕಥೆಗೆ ಪೂರಕವಾಗಿ ಎಲ್ಲಾ ಕಲಾವಿದರು ಅಭಿನಯಿಸಿದ್ದಾರೆ, ಚಿತ್ರ ನವಂಬರ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು

ನಾಯಕಿ ಪ್ರಕೃತಿ ಪ್ರಸಾದ್ ಮಾತನಾಡಿ ಸೀರಿಯಲ್ ಗಳನ್ನ ಮಾಡುತ್ತಾ ಸಿನಿಮಾರಂಗಕ್ಕೆ ಬಂದವಳು ,ನನ್ನ ಎರಡನೇ ಚಿತ್ರ. ಈ ಚಿತ್ರದಲ್ಲಿ ಅಪ್ಪ ಮಗಳ ಬಾಂಧವ್ಯದ ಕುರಿತು ಹೇಳುವುದರ ಜೊತೆಗೆ ಧಾರ್ಮಿಕ , ವೈಜ್ಞಾನಿಕ ವಿಚಾರವೂ ಇದೆ ವಿದ್ಯಾವಂತ ಹುಡುಗಿ ಸಿಟಿಯಿಂದ ಹಳ್ಳಿಗೆ ಹೋಗಿ ಅಲ್ಲಿ ನಡೆಯುವ ಒಂದಷ್ಟು ಘಟನೆಗಳಿಗೆ ಹೇಗೆ ಸಾಕ್ಷಿಯಾಗಿ ಎದುರಿಸುತ್ತಾಳೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಮಾಹಿತಿ ನೀಡಿದರು

#PrakrutiPrasad

ಚಿತ್ರದಲ್ಲಿ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ನಾಯಕನ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ , ರಂಗಭೂಮಿ ಪ್ರತಿಭೆ ಗೀತಾ, ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ , ಮನೋಜ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಕನ್ನಡ ಪಿಕ್ಚರ್ಸ್ ಅರ್ಪಿಸಿದ್ದು ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯ ಸಂಗೀತ. ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್,ಕಿನ್ನಾಳ ರಾಜ್ ಸಾಹಿತ್ಯವಿದೆ. ರಮೇಶ್ ನೀಡಿರುವ ಕಥೆಗೆ ಚಿತ್ರಕಥೆ , ಸಂಭಾಷಣೆ ಆದೇಶ್ವರ್ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin