“ಸಾಲಗಾರರ ಸಹಕಾರ ಸಂಘ” ಕನ್ನಡ ಚಿತ್ರರಂಗದಲ್ಲಿ ಆರಂಭ: ಸಾಲ ಸಿಗುತ್ತಾ
ಕನ್ನಡದ ಚಿತ್ರರಂಗದಲ್ಲಿ “ಸಾಲಗಾರರ ಸಹಕಾರ ಸಂಘ” ಆರಂಭವಾಗಿದೆ, ಇನ್ನು ಮೇಲೆ ಸಿನಿಮಾ ನಿರ್ಮಾಣ ಮಾಡುವರಿಗೆ ಎಲ್ಲವೂ ನೀರು ಕುಡಿದಷ್ಟು ಸಲೀಲು, ಹಣಕಾಸು ಸುಲಭವಾಗಿ ಸಿಗಲಿದೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ““ಸಾಲಗಾರರ ಸಹಕಾರ ಸಂಘ” ಹೆಸರಲ್ಲಿ ಚಿತ್ರ ಸದ್ದಿಲ್ಲದೆ ಆರಂಭವಾಗಿ ಬಿಡುಗಡೆ ಹಂತಕ್ಕೆ ಬಂದಿದೆ.

ಪಂಟ್ರು, ಗೆಳೆಯ ಚಿತ್ರಗಳ ನಂತರ ನಿರ್ದೇಶಕ ವಿಕ್ರಂ ಧನಂಜಯ್ ಮತ್ತು ನಿರ್ಮಾಪಕರಾದ ಕುಮರೇಶ್ ಹಾಗು ಸುನೀಲ್ ಕುಮಾರ್ ಜೋಡಿ ಸತತ ಮೂರನೇ ಚಿತ್ರ ಮಾಡುತ್ತಿದ್ದಾರೆ, ತ್ರಿಮೂರ್ತಿಗಳಿಗೆ “ಸಾಲಗಾರರ ಸಹಕಾರ ಸಂಘ” ಮೂರನೇ ಕಾಂಬಿನೇಷನ್ ಚಿತ್ರ.
ಚಿತ್ರಕ್ಕಾಗಿ ನಟ ಶರಣ್ ಹಾಡಿರುವ ಹಾಡು ಬಿಡುಗಡೆ ಇತ್ತು, ಈ ವೇಳೆ ಶ್ರೀಧರ್ ಗುರೂಜಿ. ನಟಿ ಬೃಂದಾ ಆಚಾರ್ಯ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು. ಚಿತ್ರದ ನಾಯಕರಲ್ಲಿ ಒಬ್ಬರಾದ ಲೋಕೇಶ್ ಕಾಮಿಡಿ ಕಿಲಾಡಿಗಳಿಂದ ಬಂದ ಹಿನ್ನೆಲೆಯಲ್ಲಿ ಕಾಮಿಡಿ ಕಿಲಾಡಿಗಳಲ್ಲಿ ಕೆಲಸ ಮಾಡಿದ್ದ ಶಿವರಾಜ್ ಕೆ.ಆರ್ ಪೇಟೆ, ಗೋವಿಂದೇ ಗೌಡ ದಂಪತಿ, ಪ್ರವೀಣ್ ಜೊತೆಗೆ ಸೋನು ಶ್ರೀನಿವಾಸ ಗೌಡ ಸೇರಿದಂತೆ ಮತ್ತಿತರು ಆಗಮಿಸಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು
ನಿರ್ದೇಶಲಕ ವಿಕ್ರಂ ಧನಂಜಯ ಮಾತನಾಡಿ ನಿರ್ಮಾಪಕರ ಜೊತೆಗೆ ಸತತ ಮೂರನೇ ಚಿತ್ರ “ಸಾಲಗಾರರ ಸಹಕಾರ ಸಂಘ”. ಯಾರ ಬಳಿ ಹೋದರೂ ಇಎಂಇ ಕಟ್ಟೋದು ಸೇರಿದಂತೆ ಸಾಲದ ಬಗ್ಗೆಯೇ ಮಾತನಾಡುತ್ತಿದ್ದರು ಕಥೆ ಸಿದ್ದಪಡಿಸಿ ನಿರ್ಮಾಪಕರಿಗೆ ಹೇಲಿದ ತಕ್ಷಣ ನಿರ್ಮಾಣಕ್ಕೆ ಮುಂದಾದರು. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಶರಣ್ ಹಾಡಿರುವ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದನ್ನು ಚಿತ್ರೀಕರಣ ಮಾಡಿ ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದರು
ಚಿತ್ರದಲ್ಲಿ ನಟಿಸಿರುವ ಜಾಲಿ ಜಾಕ್, ಲೋಕೇಶ್, ಕೆಂಪೇಗೌಡ, ಪ್ರವೀಣ್ ಸಾಲ ಮಾಡಿ ಸುಸ್ತಾಗುತ್ತಾರೆ. ಸಾಮಾನ್ಯವಾಗಿ ಸಾಲ ಮಾಡಿದವರು ಊರು ಬಿಡ್ತಾರೆ, ಇಲ್ಲ ಸಾಲ ತೀರಿಸಲಾಗದೆ ಸಾಯ್ತಾರೆ, ಆದರೆ ಚಿತ್ರದಲ್ಲಿ ಸಾಲ ಮಾಡುವ ಯುವಕರ ತಂಡ, ಸಾಲ ಕೊಟ್ಟವರನ್ನೆಲ್ಲಾ ಒಂದುಕಡೆ ಸೇರಿಸಿ ಸಂಘ ಮಾಡ್ತಾರೆ. ಆ ನಂತರ ಸಾಲ ಮನ್ನಾ ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡುತ್ತಾರೆ, ಸರ್ಕಾರ ಇವರ ಬೇಡಿಕೆ ಈಡೇರಿಸುತ್ತಾ ಇಲ್ಲ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿ, ಸಂಪೂರ್ಣ ಹಾಸ್ಯದ ಹಿನ್ನೆಲೆಯಲ್ಲಿ ಚಿತ್ರವನ್ನು ಕಟ್ಟಿಕೊಲಾಗಿದೆ ಎಂದು ಹೇಳಿದರು

ಚಿತ್ರವನ್ನು ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು ಸೇರಿದಂತೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ, ಚಿತ್ರದಲ್ಲಿರಂಗಾಯಣ ರಘು, ಲಕ್ಷ್ಮಿ ಸಿದ್ದಯ್ಯ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ, ಈಗ ಶರಣ್ ಹಾಡಿರುವ ಹಾಡು ಬಿಡುಗಡೆ ಮಾಡಲಾಗಿದೆ, ಇನ್ನೂ ಜೋಗಿ ಪ್ರೇಮ್, ನವೀನ್ ಸಜ್ಜು, ವಿ ಹರಿಕೃಷ್ಣ ಹಾಡಿರುವ ಹಾಡು ಬಿಡುಗಡೆ ಮಾಡಬೇಕಾಗಿದೆ, ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲಾಗುವುದು ಎಂದರು
ನಿರ್ಮಾಪಕರಾದ ಕುಮರೇಶ್, ಸುನೀಲ್ ಕುಮಾರ್ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ನಾವು ಚಿತ್ರ ಮಾಡಲು ಸಾಲ ಮಾಡಿಲ್ಲ ಎಂದು ಹೇಳಿದರು
ಸಂಗೀತ ನಿರ್ದೇಶಕ ತ್ಯಾಗರಾಜ್ ಮಾತನಾಡಿ ಚಿತ್ರದಲ್ಲಿ 5 ಹಾಡುಗಳಿದ್ದು ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿದೆ, ಸಾಲ ಮಾಡದವರು ಹುಡುಕುವುದು ಕಷ್ಟ, ಸ್ವತಃ ನಾನೂ ಸಾಲ ಮಾಡಿ ಅದರ ಸಮಸ್ಯೆ ಎದುರಿಸಿದ್ದೇನೆ, ಆ ಕಾರಣಕ್ಕಾಗಿಯೇ ಸಾಲದ ಕುರಿತ ಹಾಡು ಚೆನ್ನಾಗಿ ಬಂದಿದೆ ಎಂದರು
ನಟಿ ಪೂಜಾ ಮಾತನಾಡಿ ಚಿತ್ರದಲ್ಲಿ ಹುಡುಗರು ನನಗಾಗಿ ಸಾಲ ಮಾಡ್ತಾರೆ, ಅದು ಯಾಕ್ಕಾಗಿ ಎನ್ನುವುದನ್ನು ಸಿನಿಮಾ ನೋಡಿ ಎಂದು ಹೇಳಿದರು
ನಟ ಲೋಕೇಶ್ ಮಾತನಾಡಿ ಚಿತ್ರಕ್ಕೆ ಪ್ರಚಾರವಿಲ್ಲ ಅನೇಕ ಚಿತ್ರಗಳು ಸೊರಗುತ್ತವೆ. ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಹಿರಿಯ ನಟರು ಸಹಕಾರ ನೀಡಿದರೆ ಯುವ ನಟರ ಚಿತ್ರಗಳು ಗೆಲ್ಲುತ್ತವೆ ಆ ಕೆಲಸ ಚಿತ್ರರಂಗದಲ್ಲಿ ಆಗಬೇಕು ಎಂದರು
ಇನ್ನೋರ್ವ ನಟ ಕೆಂಪೇಗೌಡ ಮಾತನಾಡಿ ಯುವಕರಿಗೆ ಸಾಲ ಕೊಡಿಸುವ ಪಾತ್ರ. ನನಗೆ ಏಎಲ್ಲಾ ತೊಂದರೆ ಆಗುತ್ತೆ ಎನ್ನುವುದು ಚಿತ್ರದಲ್ಲಿ ನೋಡಬೇಕು ಎಂದು ಹೇಳಿದರು

