ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮದ ಕುತೂಹಲಕಾರಿ “ಪೀಟರ್” ಚಿತ್ರ ಟೀಸರ್ ಬಿಡುಗಡೆ - CineNewsKannada.com

ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮದ ಕುತೂಹಲಕಾರಿ “ಪೀಟರ್” ಚಿತ್ರ ಟೀಸರ್ ಬಿಡುಗಡೆ

`ದೂರದರ್ಶನ’ ಚಿತ್ರ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಸಸ್ಪೆನ್ಸ್ ಡ್ರಾಮಾ ಕಥಾಹಂದ ಹೊಂದಿರುವ “ಪೀಟರ್” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಹಾಗೂ ಪ್ರೀತಿ- ಫ್ಯಾಮಿಲಿ ಕಂಟೆಂಟ್ ಜೊತೆಗೆ ಚೆಂಡೆ ಮೇಳ ಇಟ್ಟುಕೊಂಡು ಟೀಸರ್ ಕಟ್ ಮಾಡಲಾಗಿದೆ,ರಾಜೇಶ್ ಧ್ರುವ, ಪ್ರತಿಮಾ ನಾಯಕ್ , ಜಾನ್ವಿ ರಾಯಲ, ರಘು ಪಾಂಡೇಶ್ವರ ಇಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್ ಧ್ರುವ ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ ಪೀಟರ್ ಚಿತ್ರದಲ್ಲಿ ನಟಿ ನಿರೂಪಕಿ ಜಾನ್ವಿ ರಾಯಲ ನಾಯಕಿಯಾಗಿ ನಟಿಸಿದ್ದಾರೆ

ಚಿತ್ರದಲ್ಲಿ ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ. ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಭರವಸೆ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಬಹು ಭಾಷೆಯಲ್ಲಿ ಪೀಟರ್ ಸಿನಿಮಾ ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin