Review: The interesting story of Kolur "Kona

Review : ಕೋಳೂರಿನ ಕುತೂಹಲಕರ ಕಥನ “ಕೋಣ - CineNewsKannada.com

Review : ಕೋಳೂರಿನ ಕುತೂಹಲಕರ ಕಥನ “ಕೋಣ

ಚಿತ್ರ : ಕೋಣ
ನಿರ್ದೇಶನ: ಹರಿಕೃಷ್ಣ
ತಾರಾಗಣ: ಕೋಮಲ್, ತನಿಶಾ ಕುಪ್ಪಂಡ, ಕೀರ್ತಿ ರಾಜ್, ರಘು ರಮಣಕೊಪ್ಪ, ವಿಜಯ್ ಚೆಂಡೂರು,ಜಗ್ಗಪ್ಪ, ಸುಶ್ಮಿತಾ, ರಂಜಿತ್, ಶಿಶಿರ್, ತುಕಾಲಿ ಸಂತೋಷ್, ನಮ್ರತಾ ಗೌಡ ,, ರಿತ್ವಿ ಜಗದೀಶ್, ಗೋಲ್ಡ್ ಸುರೇಶ್, ಎಂ.ಕೆ ಮಠ ಮತ್ತಿತರರು
ರೇಟಿಂಗ್: *** 3.5/5

“ಊರ ಹಬ್ಬ ನಡೀಬೇಕು… ಕೋಣ ಕಡಿಬೇಕು..” ಇಲ್ಲದಿದ್ದರೆ ಊರಿಗೆ ಕಂಟಕ ಎದುರಾಗಿ ಬಿಡುತ್ತದೆ ಎನ್ನುವ ಆತಂಕ ಊರ ಗೌಡನದ್ದು…

ಯಾವುದೇ ಕಾರಣಕ್ಕೂ ಕೋಣ ಬಲಿ ಕೊಡಬಾರದು ಎಂದು ಅದನ್ನು ತಡೆಯಲು ಪೊಲೀಸ್ ಅಧಿಕಾರಿ ಪಣ ತೊಟ್ಟು ಮಾಹಿತಿದಾರರನ್ನು ನೇಮಕ‌ ಮಾಡ್ತಾನೆ.

ಊರಹಬ್ಬದಲ್ಲಿ ನಾಟಕ ಆಡಲು ಬಂದ ಕಲಾವಿದರ ತಂಡ.. ಇವರ ಜೊತೆ ಸಿಕ್ಕ ಅನಾಮಿಕ..ರೊಬೋ ಗೊಂಬೆ ಮೂಲಕ ಜ್ಯೋತಿಷ್ಯ ಹೇಳುವ ಕಾಯಕ. ಆತನದೋ ಒಂದು ಕಥೆ.. ಹಿನ್ನೆಲೆ..
ಕೋಳೂರಿನಲ್ಲಿ ತಲೆ ತಲಾಂತರದಿಂದ ನಡೆದುಕೊಂಡು‌ ಬಂದ ಹಬ್ಬಕ್ಕೆ ಕೋಣ ಬಲಿಕೊಡುವುದು ವಾಡಿಕೆ.

ಹಬ್ಬಕ್ಕೆ ಕೋಣ ಕಡಿದರಾ… ಅಥವಾ ಪೊಲೀಸ್ ತನ್ನ‌ ಕೆಲಸ ಸಾಧಿಸಿದ್ರಾ..ನಾಟಕ ಆಡಲು ಬಂದ ಕಲಾವಿದರು ಪ್ರಯತ್ನ ಯಶಸ್ವಿ ಆಯ್ತಾ. ಅನಾಮಿಕ ರೊಬೋ ಗೊಂಬೆ ಯಾರು..‌ಇವರ ನಡುವೆ ಆಗಾಗ ಕಾಣಿಸಕೊಳ್ಳುವ ಲಕ್ಷ್ಮಿ ಯಾರು ಎನ್ನುವುದು ಈ ವಾರ ತೆರೆಗೆ ಬಂದಿರುವ “ಕೋಣ” ಚಿತ್ರದ ಕುತೂಹಲಕಾರಿ ಕಥನ

ಅದು ಕೋಳೂರು.. ಊರ ಹಬ್ಬಕ್ಕೆ ಕೋಣ ಬಲಿಕೊಡುವುದು ಸಂಪ್ರದಾಯ. ಊರ ಗೌಡ ಕೀರ್ತಿ ರಾಜ್ ದೊಡ್ಡಮಗ ( ರಂಜಿತ್)ಗೆ ಹಬ್ಬವನ್ನು ಯಾವುದೇ ಅಡೆ ತಡೆ ಇಲ್ಲದೆ ನಡೆಸಿಕೊಂಡು ಹೋಗುವ ಜವಾಬ್ದಾರಿ ವಹಿಸುತ್ತಾನೆ.ಇತ್ತ ಪೊಲೀಸ್ ‌ಕೋಣ ಬಲಿ ತಡೆಯಲು ತಮ್ಮದೇ ತಂತ್ರ ಹೂಡುತ್ತಾರೆ..

ದಾರಿ ಮದ್ಯೆ ರೊಬೋ ಇಟ್ಟುಕೊಂಡು ಜ್ಯೋತಿಷ್ಯ ಹೇಳುವ ನಾರಾಯಣ ( ಕೋಮಲ್) ಗೆ ಸದಾ ಪತ್ನಿ ಲಕ್ಷ್ಮಿ ( ತನಿಶಾ ಕುಪ್ಪಂಡ ) ಜೊತೆಯಾಗಿರುತ್ತಾಳೆ.. ಇದ್ದಕ್ಕಿದ್ದಂತೆ ಮಾಯವಾಗಿ ಬಿಡ್ತಾಳೆ.. ಒಬ್ಬೊಬ್ಬನೇ ಮಾತನಾಡುವುದನ್ನು ಕಂಡ ನಾಟಕ ಆಡಿಸುವ ಮೇಷ್ಟ್ರು ( ರಘು ರಮಣಕೊಪ್ಲ) ತಾವು ನಾಟಕ ಆಡಲು ಹೋಗುವ ಊರಿಗೆ ಜೊತೆಯಲ್ಲಿ ಕರೆದುಕೊಂಡು ಬರುತ್ತಾರೆ.. ಅಲ್ಲಿಂದ ಮುಂದೆ ಏನಾಗುತ್ತದೆ ಎನ್ನುದು ಕುತೂಹಲದ ಸಂಗತಿ.

ಒಂದಷ್ಟು ಕುತೂಹಲ ಕೆರಳಿಸುವ ಮತ್ತು ಕೊನೆತನಕ‌ ಪ್ರೇಕ್ಷಕರನ್ನು ಹಿಡಿದಿಟ್ಟಿರುವ ” ಕೋಣ” ಚಿತ್ರವನ್ನು ತೆರೆಯ ಮೇಲೆ‌ ನೋಡಿದರೆ ಅದರ ಮಜಾನಾ ಬೇರೆ

ನಿರ್ದೇಶಕ ಹರಿಕೃಷ್ಣ ಉತ್ತಮವಾದ ಕಥೆಯನ್ನು ಆಯ್ಕೆ‌ ಮಾಡಿಕೊಂಡಿದ್ದಾರೆ. ಮಜಾ ಟಾಕೀಸ್, ಬಿಗ್ ಬಾಸ್ ನಲ್ಲಿ ನಟಿಸಿದ್ದ ಒಂದಷ್ಟು ಕಲಾವಿದರನ್ನು ಬಳಸಿಕೊಂಡಿದ್ದಾರೆ. ಹಾಸ್ಯ ಕಲಾವಿದರನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದರೆ ಹೇಳುವ ಗಂಬೀರ ವಿಷಯದಲ್ಲಿ‌ ಮನರಂಜನೆಯ ಮೃಷ್ಞಾನ್ನ ಉಣಬಡಿಸಬಹುದಿತ್ತು.. ಆದರೂ ಚಿತ್ರ ನೋಡಲು ಅಡ್ಡಿ ಇಲ್ಲ

ನಾಯಕ ಕೋಮಲ್ ರೊಬೋ ಜೋತಿಷ್ಯ ಹೇಳುವ ನಾರಾಯಣ ನಾಗಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ಮಾಪಕಿ ತನಿಶಾ.‌ ಅಲ್ಲಲ್ಲಿ ಬಂದರೂ ಪಾತ್ರಕ್ಕೆ ತೂಕವಿದೆ.

ಉಳಿದಂತೆ ಹಿರಿಯ ಕಲಾವಿದರಾದ ಕೀರ್ತಿ ರಾಜ್, ರಘು ರಮಣಕೊಪ್ಪ, ವಿಜಯ್ ಚೆಂಡೂರು,ಜಗ್ಗಪ್ಪ, ಸುಶ್ಮಿತಾ, ರಂಜಿತ್, ಶಿಶಿರ್, ತುಕಾಲಿ ಸಂತೋಷ್, ನಮ್ರತಾ ಗೌಡ ,, ರಿತ್ವಿ ಜಗದೀಶ್, ಗೋಲ್ಡ್ ಸುರೇಶ್, ಎಂ.ಕೆ ಮಠ ಚಿತ್ರದಲ್ಲಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.


Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin