ಯುವ ನಿರ್ದೇಶಕ ರಘು ಕೋವಿ ಯ “ರೂಬಿ” ಜೊತೆ ತಾಂತ್ರಿಕ ದಿಗ್ಗಜರ ಸಮಾಗಮ
ಚಿತ್ರರಂಗದಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುವ ಯುವ ನಿರ್ದೇಶಕರಿಗೆ ಬಹುತೇಕ ಹೊಸ ಕಲಾವಿದರು, ತಂತ್ರಜ್ಞರು ಸಿಗುವುದು ವಾಡಿಕೆ, ಅಲ್ಲೊಂದು ಇಲ್ಲೊಂದು ಪ್ರಕರಣ ಎನ್ನುವಂತೆ ಹೊಸಬರಿಗೆ ತಾಂತ್ರಿಕ ದಿಗ್ಗಜರು ಸಿಗುತ್ತಾರೆ. ಅಂತಹ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆ “ ರೂಬಿ”.

ಅಜಯ್ ರಾವ್ ನಟನಯೆ “ಕೃಷ್ಣಲೀಲಾ” ಚಿತ್ರಕ್ಕೆ ಕಥೆ ಬರೆದಿದ್ದ ರಘು ಕೋವಿ “ ರೂಬಿ” ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಭಾರತೀಯ ಚಿತ್ರರಂಗದ ಹಿರಿಯ ತಾಂತ್ರಿಕ ದಿಗ್ಗಜರಾದ ಸಂಕಲಕಾರ ಸುರೇಶ್ ಅರಸ್, ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್, ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್, ಪ್ರಶತಿ ವಿಜೇತ ಸಾಹಸ ನಿರ್ದೇಶಕ ವಿಕ್ರಂ ಮೋರ್, ಜೊತೆಗೆ ಮಾಸ್ ಡೈಲಾಗ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಮಾಸ್ತಿ ಅವರು ಯುವ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ.
ಜೊತೆಗೆ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಕನ್ನಡದಲ್ಲಿ ಮೊದಲ ಬಾರಿಗೆ ಹಾಡು ಹಾಡಿದ್ದಾರೆ, ಇದು ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ. ಜೊತೆಗೆ ಕನ್ನಡದ ಗಾಯಕರೂ ಕೂಡ ಇರುವುದು ನಿರೀಕ್ಷೆ ದುಪ್ಪಟ್ಟು ಮಾಡಿದೆ
ಕಳೆದವಾರ ತೆರೆಗೆ ಬಂದಿರುವ ದಿಲ್ ದಾರ್ ಚಿತ್ರದ ನಾಯಕ ರಾಮ್ ಗೌಡ ಎರಡನೇ ಬಾರಿಗೆ ನಾಯಕನಾಗಿ ನಟಿಸಿದ್ದು ಮಾರ್ಟಿನ್ ಬಳಿಕ ವೈಭವಿ ಶಾಂಡಿಲ್ಯ ನಟನೆಯ “ರೂಬಿ” ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಚಂದ್ರಚೂಡ್ ಚಕ್ರವರ್ತಿ ಬಿಡುಗಡೆ ಮಾಡಿ ಯುವ ತಂಡಕ್ಕೆ ಶುಭ ಹಾರೈಸಿದರು.
ನಟ ರಾಮ್ ಗೌಡ ಮಾತನಾಡಿ, ರಘು ಹೇಳಿದ ಕಥೆ ಇಷ್ಟವಾಯಿರು ಆರ್ ಪಿ ಪಟ್ನಾಯಕ್ ಸಂಗೀತ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿರುವುದು ಚಿತ್ರಕ್ಕೆ ಆನೆಬಲ ಬಂದಿದೆ ಎಂದರು

ನಿರ್ದೇಶಕ ರಘು ಕೋವಿ ಮಾತನಾಡಿ,ಪ್ರೇಮಕತೆಯನ್ನು ಸಂಗೀತದ ಮೂಲಕ ಹೇಳಲಾಗುತ್ತಿದೆ. ಆರ್ ಪಿ ಪಟ್ನಾಯಕ್ ಅವರಂತಹ ದೊಡ್ಡ ಸಂಗೀತ ನಿರ್ದೇಶಕರು ಒಪ್ಪಿಗೆ ನಿಡಿದ್ದರಿಂದ ಇನ್ನುಳಿದ ದಿಗ್ಗಜರು ಕೆಲಸ ಮಾಡಲು ಸಮ್ಮತಿ ನೀಡಿದ್ಧಾರೆ ಹೈದರಾಬಾದ್ ನಲ್ಲಿ ನಡೆದ ನೈಜ ಘಟನೆಯನ್ನು ರೂಬಿ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಶೇಖಡ 50ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಮಾತನಾಡಿ, ಕಥೆ ತುಂಬಾ ಚೆನ್ನಾಗಿದೆ. ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಚಿತ್ರವಾಗಲಿದೆ. ಜೊತೆಗೆ ರಾಮ್-ವೈಭವಿ ರಾಷ್ಟ್ರಪ್ರಶಸ್ತಿ ಸಿಗುವಷ್ಟು ಚೆನ್ನಾಗಿ ನಟಿಸಲಿ. ಸಂಗೀತ ಚಿತ್ರದ ಭಾಘವಾಗಿದೆ ಎಂದರು

ರಘು ಕೋವಿ ಜರ್ನಿ
‘ನಾದಬ್ರಹ್ಮ’ ಹಂಸಲೇಖ ಅವರ ಕಥಾ ಕಣಜದಿಂದ ಸ್ಯಾಂಡಲ್‍ವುಡ್‍ಗೆ ಪರಿಚಿತರಾದ ರಘು ಕೋವಿ ಅಜಯ್ ರಾವ್ ನಟನೆಯ ‘ಕೃಷ್ಣ ಲೀಲಾ’ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದರು. ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಹಿಂದೆ ನಿದೇಶಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಎಂ ಎಸ್ ರಾಜಶೇಖರ್, ಕೆ ವಿ ರಾಜು, ಶಶಾಂಕ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭೌ ಹೊಂದಿದ್ದು ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ

ತಾಂತ್ರಿಕ ವರ್ಗದ ಮಾಹಿತಿ
ವಂಶಿ, ಆಕಾಶ್ ಮತ್ತು ಎಕ್ಸ್‍ಕ್ಯೂಸ್ ಮಿ ಯ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಆರ್‍ಪಿ ಪಟ್ನಾಯಕ್ ರೂಬಿಗೆ ಸಂಗೀತ ಒದಗಿಸಿದ್ದಾರೆ. ರಾಜಕುಮಾರ ಮತ್ತು ಯುವರತ್ನ ಚಿತ್ರಗಳ ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ. ರೋಜಾ, ಬಾಂಬೆ ಮತ್ತು ದಿಲ್ ಸೇ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸ್ಟಂಟ್ ಕೊರಿಯೋಗ್ರಾಫರ್ ವಿಕ್ರಮ್ ಮೋರ್ ಅವರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.ರೂಬಿ ಚಿತ್ರವನ್ನು ನಿಖುಲ್ ದೇಸಾಯಿ ಮತ್ತು ಶಿವರಾಜ್ ಕನಗನಪಳ್ಳಿ ನಿರ್ಮಾಣ ಮಾಡುತ್ತಿದ್ದಾರೆ

