ಮೋಹನ್ ಲಾಲ್ ನಟನೆಯ “ವೃಷಭ” ಕ್ರಿಸ್ಮಸ್ಗೆ ಚಿತ್ರ ತೆರೆಗೆ
ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೀರೋ ಆಗಿ ನಟಿಸಿರುವ “ವೃಷಭ” ಚಿತ್ರ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕ್ರಿಸ್ಮಸ್ ಗೆ ವೃಷಭ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.

ಮೋಹನ್ಲಾಲ್ ಅಭಿನಯದ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಬಿಡುಗಡೆ ಆಗುತ್ತಿದೆ. ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿಯೇ ಈ ಸಿನಿಮಾ ತಯಾರಾಗಿದೆ. ಆದರೆ, ಪರ ಭಾಷೆಯಲ್ಲಿ ಇದು ಡಬ್ ಆಗುತ್ತಿದೆ. ಈ ಮೂಲಕ ಎಲ್ಲ ಭಾಷೆಯ ಸಿನಿಮಾ ಪ್ರೇಮಿಗಳು ಈ ಚಿತ್ರ ನೋಡಬಹುದು.
ವೃಷಭ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಇದ್ದಾರೆ. ಮೋಹನ್ಲಾಲ್ ಮಗನ ಪಾತ್ರವನ್ನೆ ಮಾಡಿದ್ದಾರೆ. ರಾಗಿಣಿ ದ್ವಿವೇದಿ, ಮತ್ತು ನಯನ್ ಸಾರಿಕಾ, ಅಜಯ್ ಮತ್ತು ನೇಹಾ ಸಕ್ಸೇನಾ ತಾರಾಬಳಗದಲ್ಲಿದ್ದಾರೆ.
ವೃಷಭ ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೆಸುಲ್ ಪೂಕುಕ್ಯೂ ಸೌಂಡ್ ಡಿಸೈನ್ ಮಾಡಿದ್ದಾರೆ. ಜನಾರ್ಧನ್ ಮಹರ್ಷಿ ಹಾಗೂ ಕಾರ್ತಿಕ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.ಪೀಟರ್ ಹೈನ್, ಸ್ಟಂಟ್ ಸಿಲ್ವಾ ಹಾಗೂ ನಿಖಿಲ್ ಅವರ ಸಾಹಸ ನಿರ್ದೇಶನವಿದೆ.
ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್, ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋಸ್ ಜೊತೆಗೂಡಿ ಪ್ರಸ್ತುತಪಡಿಸುತ್ತಿರುವ `ವೃಷಭ’ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಕಪೂರ್, ಸಿ.ಕೆ.ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ನಿರ್ಮಿಸಿದ್ದಾರೆ.

