“ಇನಿಯನ ಆತ್ಮ” ಚಿತ್ರ ಬಿಡುಗಡೆಗೆ ರೆಡಿ
ಪ್ರತಿಭಾವಂತರ ಕಲಾವಿದರ ತಂಡ ಸೇರಿಕೊಂಡು ಸಿದ್ದಪಡಿಸಿರುವ “ಇನಿಯನ ಆತ್ಮ” ಬಿಡುಗಡೆಗೆ ಸಿದ್ದವಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ. ಚಿತ್ರ ಇದೇ ನವಂಬರ್ 14 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಉದ್ಯಮಿ ಪುಂಡರೀಕ ಮೂರ್ತಿ ಹಾಡು ಮತ್ತು ಟ್ರೈಲರ್ ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಬಿ.ಕಲಾವತಿ ನಿರ್ಮಾಣ ಮಾಡಿದ್ದಾರೆ. ನರೇಶ್ ಸಿದ್ದಘಟ್ಟ ನಿರ್ದೇಶನ ಮಾಡಿದ್ದಾರೆ
ನಿರ್ದೇಶಕ ನರೇಶ್ ಸಿದ್ದಘಟ್ಟ ಮಾತನಾಡಿ ಏಳು ಜನ ಯುವ ತಂಡದವರು ಪ್ರವಾಸಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಇವರನ್ನೆ ಗುರಿಯಾಗಿಸಿಕೊಂಡು ಒಂದಷ್ಟು ಘಟನೆಗಳು ನಡೆಯುವುದು ಯಾಕೆ, ಕರ್ಮ ಯಾರನ್ನು ಬಿಡುವುದಿಲ್ಲ. ಪ್ರೇಯಸಿ ಆತ್ಮ ಹೇಗಾಗುತ್ತದೆ. ಇಂತಹ ಹಲವು ಸ್ವಾರಸ್ಯಕರ ವಿಷಯಗಳು ಹಾರರ್, ಥ್ರಿಲ್ಲರ್ ರೀತಿಯಲ್ಲಿ ನೋಡುಗರಿಗೆ ಕುತೂಹಲ ಮೂಡಿಸುತ್ತದೆ ಹಾಗೂ ಕಾಮಿಡಿಯಾಗಿ ಸನ್ನಿವೇಶಗಳು ಇರಲಿದೆ ಎಂದರು
ಚಿತ್ರವನ್ನು ಕೋಲಾರ, ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಇದೇ ಶುಕ್ರವಾರ ಚಿತ್ರ ಬಿಡುಡಗೆಯಾಗುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು

ನಾಯಕ ಸಿದ್ದರ್ಥ್ ಹರಿ, ನಾಯಕಿ ನಿಶಾರೆಡ್ಡಿ. ಉಳಿದಂತೆ ಕೋಲಾರ ಸೂರ್ಯ, ರಾಜ್ವೀರ್, ಕಿಟ್ಟಿ ತಾಳಿಕೋಟೆ, ಆದಿಮಧುಗಿರಿ, ಸುಶ್ಮಿತ, ನಯನ ಮುಂತಾದವರು ನಟಿಸಿದ್ದಾರೆ.
ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ ಚರಣ್ತೇಜ್, ಸಂಕಲನ ಪವನ್.ಬಿ.ಕೆ, ಸಾಹಸ ಥ್ರಿಲ್ಲರ್ಮಂಜು-ಕೌರವವೆಂಕಟೇಶ್, ನಿರ್ವಹಣೆ ಮೋಹನ್, ನೃತ್ಯ ಕರಿಯನಂದ,ಸನ್ ಸುನಿಲ್ ಅವರದಾಗಿದೆ. ಹೇಮಂತ್ಕುಮಾರ್, ರವಿಶಾಸ್ತ್ರೀ, ಸುರಭಿ ಭರದ್ವಾಜ್, ಸಚಿನ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ.

