“ಕೊರಗಜ್ಜ” ಬಗ್ಗೆ ಅಪಪ್ರಚಾರ ಸಹಿಸುವುದಿಲ್ಲ _ ನಿರ್ದೇಶಕ ಸುಧೀರ್ ಅತ್ತಾವರ್
ಆರಂಭದಿಂದ ಒಂದಷ್ಟು ಸದ್ದು-ಸುದ್ದಿ ಮಾಡುತ್ತಿರುವ ತುಳುನಾಡಿನ ಜನರ ನಂಬಿಕೆಯ ಪ್ರತೀಕವಾದ “ಕೊರಗಜ್ಜ” ಚಿತ್ರ ಹಾಡುಗಳು ಬಿಡುಗಡೆಯಾಗಿವೆ. ಇದೇ ವೇಳೆ ಜೀ ಆಡಿಯೋ ಕಂಪನಿ ಒಳ್ಳೆಯ ಮೊತ್ತಕ್ಕ ಆಡಿಯೋ ಖರೀದಿಸಿದೆ, ಇದು ಚಿತ್ರದ ನಿರ್ಮಾಪಕ-ನಿರ್ದೇಶಕರ ಮುಖದಲ್ಲಿ ನಗುವಿನ ಮಂದಹಾಸ ಮೂಡಿಸಿದೆ.

ಚಿತ್ರದ ಹಾಡಿನ ಬಿಡುಗಡೆ ಮತ್ತು ಕೋಲಾ ಸೇವೆ ಬಗ್ಗೆ ಮಾಹಿತಿ ನೀಡಲು ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮ ಪತ್ರಕರ್ತರನ್ನು ಮಂಗಳೂರಿಗೆ ಆಹ್ವಾನಿಸಿದ್ದ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಮತ್ತು ನಿರ್ದೇಶಕ ಸುಧೀರ್ ಅತ್ತಾವರ್,ಸಹ ನಿರ್ಮಾಪಕ ದಿವ್ಯಧರ ಶೆಟ್ಟಿ ಅವರು “ಕೊರಗಜ್ಜ” ಚಿತ್ರದ ಆಡಿಯೋ ಬಿಡುಗಡೆ ಬಳಿಕ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ ಚಿತ್ರೀಕರಣ ಮಾಡುವ ಸಮಯದಲ್ಲಿ ಅನೇಕ ತಡೆ ತಡೆಗಳು ಎದುರಾದವು., ಚಿತ್ರೀಕರಣ ನಿಂತ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಯಿತು, ಆದರೂ ನಿರ್ಮಾಪಕರು ಯಾವುದಕ್ಕೂ ಬೇಜಾರು ಮಾಡಿಕೊಳ್ಳದೆ ಸಿನಿಮಾ ಮೇಲಿನ ಪ್ರೀತಿ ಮತ್ತು ಕೊರಗಜ್ಜನ ಮೇಲಿನ ಭಕ್ತಿಯಿಂದ ಸಿನಿಮಾ ಮಾಡಿದ್ದಾರೆ. ಎಲ್ಲಾ ಅಡೆ ತಡೆ ದಾಟಿ ಇದೀಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ ಎಂದರು.
ದೈವ ಮತ್ತು ತುಳುನಾಡಿನ ಜನರ ನಂಬಿಕೆಯ ಪ್ರತೀಕವಾಗಿರುವ “ಕೊರಗಜ್ಜ” ಚಿತ್ರ ಮಾಡುವುದಕ್ಕೂ ಮುನ್ನ ದೈವದ ಬಳಿ ಕೇಳಿಕೊಂಡು ಸಮ್ಮತಿ ಸಿಕ್ಕ ಬಳಿಕವಷ್ಟೇ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು, ಚಿತ್ರ ಆರಂಭದಿಂದ ಬಿಡುಗಡೆ ಹಂತಕ್ಕೆ ಬರುವ ತನಕ ಅನೇಕ ಅಚ್ಚರಿಗಳು ನಡೆದಿವೆ. ಅನೀರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಿರ ಎಂದು ಹೇಳಿದರು.
ಕೊರಗಜ್ಜ ಚಿತ್ರ ಮಾಡಲು ಮುಂದಾಗಿದ್ದೆ. ಆಗ ಚಿತ್ರದ ಶೀರ್ಷಿಕೆ ಹಿರಿಯ ನಟ ನಿರ್ಮಾಪಕ ಜೈ ಜಗದೀಶ್ ಅವರ ನಿರ್ಮಾಣ ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿತ್ತು, ನಮಗೆ ಶೀರ್ಷಿಕೆ ಕೊಡುವಂತೆ ಕೇಳಿದ ತಕ್ಷಣ ಅವರು ಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂಧನೆಗಳು. ಹಿರಿಯ ನಟಿ ಶೃತಿ,ಭವ್ಯ, ಸಂದೀಪ್ ಸೌಪಾಕರ್ ಸೇರಿದಂತೆ ಹಿರಿ –ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ, ಕೊರಗಜ್ಜ ಕುರಿತು ಯಾವುದೇ ಅಪಪ್ರಚಾರ ಮಾಡಲು ಅವಕಾಶ ನೀಡುವುದಿಲ್ಲ, ಜನರ ನಂಬಿಕೆ ಮತ್ತು ಭಾವನೆಯನ್ನು ಚಿತ್ರದ ಮೂಲಕ ಬಿಂಬಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ಚಿತ್ರೀಕರಣ ಆರಂಭದಿಂದ ಅನೇಕ ಅಡೆ-ತಡೆಯಾಗಿದ್ದು ನಿರ್ಮಾಪಕರು ಕಿಂಚತ್ತು ತೊಂದರೆ ಆಗದಂತೆ ನೋಡಕೊಳ್ಳಲಾಗಿದೆ. ಚಿತ್ರವನ್ನು ಶೀಘ್ರದಲ್ಲಿ ಬಿಡುಡಗೆ ಮಾಡಲಿದ್ದು ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದರು ಕೇಳಿಕೊಂಡರು.

ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್ ಮತ್ತು ನಿರ್ಮಾಪಕ ಜೈ ಜಗದೀಶ್ ಮಾತನಾಡಿ, ಕೊರಗಜ್ಜ ಚಿತ್ರವನ್ನು ನಾವು ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಿದ್ದವು,ಅದಕ್ಕಾಗಿ ಶೀರ್ಷಿಕೆ ನೊಂದಣಿ ಮಾಡಿಕೊಳ್ಳಲಾಗಿತ್ತು. ಆ ನಂತರ ಹಲವು ಕಡೆ ಚಿತ್ರ ನಿರ್ಮಾಣದ ಬಗ್ಗೆ ಕೇಳಿದಾಗ ನಿಮಗೆ ಆಗಿ ಬರುವುದಿಲ್ಲ ಎನ್ನುವ ಮಾತು ಕೇಳಿಬಂತು, ಹೀಗಾಗಿ ನಿರ್ಮಾಣ ಮಾಡುವುದನ್ನು ಕೈಬಿಟ್ಟು ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರ ಸಂಸ್ಥೆಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ತಂಡಕ್ಕೆ ಒಳ್ಳೆಯಾಗಲಿ ಎಂದು ಶುಭಹಾರೈಸಿದರು.
ಹಿರಿಯ ನಟಿ ಭವ್ಯ ಮಾತನಾಡಿ, ಚಿತ್ರರಂಗದ ಆರಂಭದಲ್ಲಿ ಬಣ್ಣದ ಬದುಕು ಆರಂಭಿಸಿದ್ದು ಹಿರಿಯ ನಟ ಜೈಜಗದೀಶ್ ಅವರೊಂದಿಗೆ. ಮೊದಲ ಬಾರಿಗೆ ಅವರು ನೀವು ಚಿತ್ರರಂಗದಲ್ಲಿ ಬಹುಎತ್ತರಕ್ಕೆ ಬೆಳೆಯುತ್ತೀರಿ ಎಂದು ಹಾರೈಸಿದ್ದರು, ಅವರ ಪ್ರೊತ್ಸಾಹ, ಹಾರೈಕೆ ಹಾಗು ಅನೇಕ ನಿರ್ದೇಶಕರು, ನಿರ್ಮಾಪಕರು ಮತ್ತು ನಾಯಕರ ನಟರ ಸಹಕಾರ ಹಾಗು ಬೆಂಬಲ ಸಿಕ್ಕಿದೆ.ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರ ವೀಕ್ಷಣೆ ಮಾಡುವುದುನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಮತ್ತೊಬ್ಬ ಹಿರಿಯ ನಟಿ ಶೃತಿ ಮಾತನಾಡಿ ಭೈರಕ್ಕೆ ಎನ್ನುವ ಮಾಡಿದ್ದೇನೆ, ವಿಭಿನ್ನವಾದ ಅನುಭವ ಚಿತ್ರೀಕರಣದ ಸಮಯದಲ್ಲಿ ಆಯಿತು. ಅಡೆ ತಡೆ ದಾಟಿ ಇದೀಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ,. ಚಿತ್ರೀಕರಣದ ಸಮಯದಲ್ಲಿ ಆದ ಅನುಭವ ಮರೆಯಲಾರದ್ದು ಎಂದರು
ಪಡುವರಹಳ್ಳಿ ಪಾಂಡವರು ಚಿತ್ರದಲ್ಲಿ ಕಣಗಾಲು ಪಟ್ಟಣ್ಣ ಅವರು ನಮ್ಮ ತಂದೆ ಕೃಷ್ಣ ಅವರಿಗೆ ಅವಕಾಶ ನೀಡಿದ್ದರು. ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದು ಜೈ ಜಗದೀಶ್ ಅವರ ಸಿನಿಮಾದಿಂದಲೇ ಎನ್ನುವುದನ್ನು ಇದೇ ವೇಳೆ ಶೃತಿ ನೆನಪು ಮಾಡಿಕೊಂಡರು.
ತೆಲುಗು ಮತ್ತು ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದು ಈಗಲೂ ಚಿತ್ರ ನೋಡಿದ ಅನೇಕ ಮಂದಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಮರೆಯಲಾರದ ಅನುಭವ. ಎರಡೂ ಚಿತ್ರರಂಗದ ಪ್ರೇಕ್ಷಕರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕನ್ನಡ ಚಿತ್ರರಂಗದಲ್ಲಿ ಸದ್ಯ ಬ್ಯುಸಿಯಾಗಿದ್ದೇನೆ. ಹೀಗಾಗಿ ಬೇರೆ ಭಾಷೆಯಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕನ್ನಡ ಚಿತ್ರರಂಗಕ್ಕೆ ಸದಾ ಚಿರಋಣಿ ಎಂದರು.
ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಮಾತನಾಡಿ ಚಿತ್ರೀಕರಣದ ಅಡೆ ತಡೆ ದಾಟಿ ಈಗ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಜನವರಿ 2 ರಂದು ಕನ್ನಡ, ತೆಲುಗು, ತಮಿಳು, ಮಲೆಯಾಳಂ,ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ಚಿತ್ರಕ್ಕೆ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.
ಚಿತ್ರದಲ್ಲಿ ನಟಿಸಿರುವ ಸಂದೀಪ್ ಸೌಪರ್ಕರ್ ಚಿತ್ರದಲ್ಲಿನ ಅನುಭವ ಹಂಚಿಕೊಂಡರು.

ಪತ್ರಿಕಾಗೋಷ್ಠಿ ಬಳಿಕ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರು ಕೋಲಾ ಸೇವೆ ಏರ್ಪಡಿಸಿದ್ದರು.ಈ ವೇಳೆ ನೂರಾರು ಮಂದಿ ಈ ವೇಳೆ ಹಾಜರಿದ್ದರು.

