Review : ಬ್ಯಾಂಕ್ ದರೋಡೆ ಮತ್ತು ಅದರ ಹಿಂಸಿರುವ ಕುತೂಲಕಾರಿ ಸಂಗತಿಗಳ ಅನಾವರಣ
ಚಿತ್ರ : ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ನಿರ್ದೇಶಕ : ಅಭಿಷೇಕ್
ತಾರಾಗಣ : ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಸಾಧು ಕೋಕಿಲ,ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ, ವಿನುತ್, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಮತ್ತಿತರರು
ರೇಟಿಂಗ್ : *** 3.5/5
ಜಗತ್ತಿನಲ್ಲಿ ದುದ್ದಢ ದೊಡ್ಡದು, ಅದರ ಮುಂದೆ ಎಲ್ಲವೂ ಗೌಣ, ಗರಿ ನೋಟು ಕೈಯಲ್ಲಿದ್ದರೆ ಅದರ ಗಮ್ಮತ್ತು ತಾಕತ್ತೇ ಬೇರೆ, ಹಣದಿಂದ ಏನೆಲ್ಲ ಆಗಲಿದೆ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ತೆರೆಗೆ ತಂದಿರುವ ಚಿತ್ರ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ.
ಹಣದ ದಾಹ ಮೋಹ, ಪ್ರೀತಿ,ಪ್ರೇಮ, ಬ್ಯಾಂಕ್‍ಗಳ ಹಿಂದಿರುವ ಕರಾಳ ಮುಖ ಪ್ರಸ್ತುತ ಸನ್ನಿವೇಶದಲ್ಲಿ ಹಣದ ಬಳಕೆ ದುರ್ಬಳಕೆ ಯಾವೆಲ್ಲಾ ರೀತಿಯಲ್ಲಿ ಆಗಲಿದೆ ಎನ್ನುವುದರ ಕುರಿತು ನಿರ್ದೇಶಕ ಅಭಿಷೇಕ್ ಎಂ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಅವರ ಕೆಲಸದಲ್ಲಿ ಅವರು ಯಶಸ್ಸು ಕಂಡಿದ್ದಾರೆ ಕೂಡ. ಜೊತೆಗೆ ಬ್ಯಾಂಕ್‍ನಿಂದ ಹಣ ದರೋಡೆ ಮಾಡೋದು ಹೇಗೆ ಎನ್ನುವ ಹೊಸ ಫಾರ್ಮುಲ ಪರಿಚಯಿಸಿದ್ದಾರೆ.
ಹಣ ಎಂದ ಮೇಲೆ ರಾಜಕೀಯ, ಪುಡಿರೌಡಿಗಳು, ಕಳ್ಳ ಕಾಕರು, ಅಧಿಕಾರಿಗಳು ಹಣದ ಅತಿಯಾದ ಪ್ರೀತಿ ಜನಸಾಮಾನ್ಯರ ಪರದಾಟ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರವನ್ನು ಜನರ ಮುಂದಿಡಲಾಗಿದೆ
ಬ್ಯಾಂಕ್ ದರೋಡೆ ಮತ್ತು ಅದರ ಹಿಂದೆ ನಡೆಯುವ ಕಥನವನ್ನು ಸಿನಿಮೀಯ ರೀತಿಯಲ್ಲಿ ಪ್ರೇಕ್ಷಕರಿಗೆ ಇಷ್ಟವಾಗು ರೀತಿ ತೆರೆಗೆ ಕಟ್ಟಿಕೊಡಲಾಗಿದೆ
ಕನಕ (ದೀಕ್ಷಿತ್ ಶೆಟ್ಟಿಗೆ) ಮತ್ತವರ ತಂಡಕ್ಕೆ ಇನ್ಸ್ ಪೆಕ್ಟರ್ ರಾಮಕೃಷ್ಣ ( ಸಾಧುಕೋಕಿಲ) ವಾರ್ನಿಂಗ್ ಎಚ್ಚರಿಕೆ ಕೊಡುತ್ತಾರೆ, ಅದಕ್ಕೆ ಕಾರಣವೂ ಇದೆ, ಇದರಿಂದ ಕುಪಿತಗೊಂಡ ಕನಕ, ರಾಮಕೃಷ್ಣನ ವಿರುದ್ದ ಸೆಟೆದು ನಿಲ್ಲುತ್ತಾನೆ, ಚುನಾವಣೆ ವೇಲೆ ಎಲ್ಲರೂ ಅವರರವರ ಕೆಲಸದಲ್ಲಿ ನಿರತರಾಗುತ್ತಾರೆ, ಇದೇ ಸಮಯ ಬಳಸಿಕೊಂಡು ಭಾಗ್ಯಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಬ್ಯಾಂಕಿ ದರೋಡೆ ಯತ್ನಕ್ಕೆ ಕೈ ಹಾಕುತ್ತಾರೆ
ಬ್ಯಾಂಕಿನ ಕ್ಯಾಶಿಯರ್ ಅರ್ಪಿತಾ ( ಬೃಂದ ಆಚಾರ್ಯ) ಮೂಲಕ ರಾಜಕಾರಣಿಗಳ ಕಪ್ಪು ಹಣದ ಬಗ್ಗೆ ಮಾಹಿತಿ ತಿಳಿಯುತ್ತದೆ. ಹಣ ದರೋರೆ ಮಾಡಲು ಬಂದ ಕನಕ ಅಲ್ಲಿನ ಕ್ಯಾಶಿಯರ್ ಅರ್ಪಿತಾ ಸೌಂದರ್ಯಕ್ಕೆ ಮರುಳಾಗುತ್ತಾನೆ,ಕೋಟ್ಯಾಂತರ ರೂಪಾಯಿ ಬೆನ್ನತ್ತಿದಾಗ ರÁಜಕೀಯ, ಪೆÇಲೀಸ್ ಸೇರಿದಂತೆ ವಿವಿಧ ವಿಷಯಗಳ ಅನಾವರಣ ಆಗಲಿದೆ.
ಕನಕ ಮತ್ತವರ ಗ್ಯಾಂಗ್ ಹಣವನ್ನು ದರೋಡೆ ಮಾಡಲು ಬ್ಯಾಂಕ್ ಸಿಬ್ಬಂಧಿಯನ್ನು ಒತ್ತೆಯಾಳುಗಳನ್ನಾಗಿ ಮಾಡಿದ ವಿಷಯ ತಿಳಿದು ಪೊಲೀಸರು ಆಗಮಿಸುತ್ತಾರೆ. ದರೋಡೆ ಮಾಡಲು ಹೋದ ಗ್ಯಾಂಗ್ ಹಣ ಲೂಟಿ ಮಾಡುತ್ತಾ ಇಲ್ಲ, ಹಣ ಸಿಗದೆ ವಾಪಸ್ ಬರ್ತಾರಾ ಅಥವಾ ಪೊಲೀಸರ ಕೈಗೆ ತಗುಲಿ ಹಾಕಿಕೊಳ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ, ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ನಿರ್ದೇಶಕ ಅಭಿಷೇಕ್ ಒಂದಷ್ಟು ಕುತೂಹಲಕಾರಿ ವಿಷಯವನ್ನು ಚಿತ್ರದ ಮೂಲಕ ಬಹಿರಂಗ ಮಾಡಿದ್ದಾರೆ. ಹಣ ದರೋಡೆ ಮಾಡಲು ಹೊಸ ಮಾರ್ಗ ತೋರಿಸಿದ್ಧಾರೆ
ನಟ ದೀಕ್ಷಿತ್ ಶೆಟ್ಟಿ ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡಿದ್ಧಾರೆ. ನಟಿ ಬೃಂದಾ ಆಚಾರ್ಯ ಕೂಡ. ಉಳಿದಂತೆ ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ, ವಿನುತ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರ್ಲೆ ಸಾಧು ಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

