Review: An interesting thriller film ‘Kempu Huldi Hariru’

Review: ಕುತೂಹಲಕಾರಿ ಥ್ರಿಲ್ಲರ್ ಕಥನದ ಚಿತ್ರ ‘ಕೆಂಪು ಹಳದಿ ಹಸಿರು’ - CineNewsKannada.com

Review: ಕುತೂಹಲಕಾರಿ ಥ್ರಿಲ್ಲರ್ ಕಥನದ ಚಿತ್ರ ‘ಕೆಂಪು ಹಳದಿ ಹಸಿರು’

ಚಿತ್ರ: ಕೆಂಪು ಹಳದಿ ಹಸಿರು
ನಿರ್ದೇಶನ: ಮಣಿ.ಎ.ಜೆ. ಕಾರ್ತಿಕೇಯನ್
ತಾರಾಗಣ: ಶ್ರೀಹನ್ ದೀಪಕ್, ದಿವ್ಯ ಸುರೇಶ್,ಶ್ರೀಲಕ್ಷ್ಮಿ ಮೂಲ್ಕಿ, ಅರವಿಂದ್ ಬೋಳಾರ್,ವಿಜಯ್ ಕುಮಾರ್ ಚಿಂದೋಡಿ ಮತ್ತಿತರರು
ರೇಟಿಂಗ್ : *** 3.5/5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಥೆ ಮತ್ತು ಕಂಟೆಂಟು ಇರುವ ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ವಿಭಿನ್ನ ಶೀರ್ಷಿಕೆ ಹೊಂದಿರುವ “ ಕೆಂಪು ಹಳದಿ ಹಸಿರು” ಚಿತ್ರ ತೆರೆಗೆ ಬಂದಿದೆ. ಹೆಸರು ಕೇಳಿದಾಕ್ಷಣ ಇದೊಂದು ಸಿಗ್ನಲ್ ಸಂಕೇತ ಎಂದು ಭಾವಿಸಬಹುದು ಆದರೆ ಚಿತ್ರದ ಹೂರಣ ಕುತೂಹಲಕಾರಿ.

ದೊಡ್ಡ ಉದ್ಯಮಿಯ ಮಗನೊಬ್ಬ ಡಿವಲರಿ ಬಾಯ್ ಆಗಿ ಕೆಲಸ ಮಾಡುವ ಕಥನದ ಜೊತೆಗೆ ಥ್ರಿಲ್ಲರ್ ಅಂಶಗಳಿಗೆ ಕಾಮಿಡಿಯ ಲೇಪನ ಹಚ್ಚಿ ನಿರ್ದೇಶಕ ಮಣಿ.ಎ.ಜೆ. ಕಾರ್ತಿಕೇಯನ್ ಕುತೂಹಲಕಾರಿಯಾಗಿ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ,

ಕೌಟಂಬಿಕ ಕಥನ,ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಜೀವನಲ್ಲಿ ಸಾಧನೆ ಮಾಡಬೇಕಾದರೆ ಕುಟುಂಬದ ಸಹಕಾರವೂ ಅತ್ಯಗತ್ಯ ಆದರೆ ಮನೆಯ ಯಜಮಾನರೇ ತಪ್ಪು ಮಾಡಿದಾಗ ಏನಾಗಬಹುದು ಎನ್ನುವುದು ಕುತೂಹಲದ ಕಥನ.

ಅರ್ಜುನ್ (ಶ್ರೀಹನ್ ದೀಪಕ್ ) ಡಿಲವರಿ ಬಾಯ್. ಆದರೆ ಈತನ ಹಿನ್ನೆಲೆ ದೊಡ್ಡದು, ಈತ ಒಬ್ಬ ದೊಡ್ಡ ಉದ್ಯಮಿಯ ಮಗ, ಆದರೂ ಡಿಲವರಿಬಾಯ್ ಯಾಕಾಗಿದ್ದಾನೆ ಎನ್ನುವುದು ಸಸ್ಪೆನ್ಸ್. ಅಪ್ಪನ ಜೊತೆ ಮನೆ ಬಿಟ್ಟಿ ತಾಯಿ ಜೊತೆ ಚಿಕ್ಕಿ ಮನೆಯಲ್ಲಿ ವಾಸ ಮಾಡುವ ಅರ್ಜುನ್ ತಾನು ಕೆಲಸ ಮಾಡುವ ವೇಳೆ ಬಂದ ಕರೆ ಆತನನ್ನು ಬೇರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ.

ಅರ್ಜುನ ಶೋಧನೆ, ಈತನ ಸಹದ್ಯೋಗಿಗಳಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಮೂರು ಮಂದಿ ಪ್ರಾಣಸ್ನೇಹಿತರು ಎಲ್ಲಾ ವಿಚಾರ ಹಂಚಿಕೊಳ್ಳುತ್ತಿರುವಾಗ ಏಕಾ ಏಕಿ ಅರ್ಜುನನ ನಡೆ ಸ್ನೇಹಿತರಲ್ಲಿ ಮತ್ತಷ್ಟು ಅನುಮಾನ ಮೂಡಿಸುವಂತೆ ಮಾಡುತ್ತದೆ .ಆತನಿಗೆ ತಿಳಿಯದೆ ಹಿಂಬಾಲಿಸುವ ಸ್ನೇಹಿತರಿಗೆ ಅಚ್ಚರಿ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.

ನಿರ್ದೇಶಕ ಮಣಿ ಕಾರ್ತಿಕೇಯನ್ ಕೆಂಪು ಹಳದಿ ಹಸಿರು ಚಿತ್ರದ ಮೂಲಕ ಕುತೂಹಲಕಾರಿ ಮತ್ತು ಕಾಮಿಡಿ ಚಿತ್ರವನ್ನು ತೆರೆಗೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಆರಂಭದಿಂದ ಕೊನೆ ತನಕ ಕುತೂಹಲ ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ.

ನಟ ಶ್ರೀಹನ್ ದೀಪಕ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಉತ್ತಮ ಪಾತ್ರ ಸಿಕ್ಕರೆ ಅದರೊಳಗೆ ಪರಕಾಯ ಪ್ರವೇಶ ಮಾಡುವೆ ಎನ್ನುವುದನ್ನು ನಿರೂಪಿಸಿದ್ದಾರೆ ದಿವ್ಯಾಸುರೇಶ್ ತಮ್ಮ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇನ್ನೂ ತುಳು ಹಾಸ್ಯನಟ ಅರವಿಂದ್ ಬೋಳಾರ್, ಶ್ರೀಲಕ್ಷ್ಮಿ ಮೂಲ್ಕಿ, ವಿಜಯ್ ಕುಮಾರ್ ಚಿಂದೋಡಿ ಸೇರಿದಂತೆ ಹಲವು ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ವಿಕಾಸ್ ವಿಶ್ವಕರ್ಮ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಚಿತ್ರಕಥೆಯ ಓಟಕ್ಕೆ ಸಾಥ್ ನೀಡಿದೆ, ಮಂಜುನಾಥ್ ನಾಯಕ್ ಕ್ಯಾಮೆರಾವರ್ಕ್ ಚಿತ್ರಕ್ಕೆ ಪೂರಕವಾಗಿದೆ. ಚಿತ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin