Rajyotsava Awards to be presented to senior artist Dattanna, PRO Venkatesh from Confida

ಕಾನ್ಫಿಡದಿಂದ ಹಿರಿಯ ಕಲಾವಿದ ದತ್ತಣ್ಣ, ಪಿಆರ್ ಒ ವೆಂಕಟೇಶ್ ಸೇರಿ ಸಿನಿಮಾ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ - CineNewsKannada.com

ಕಾನ್ಫಿಡದಿಂದ ಹಿರಿಯ ಕಲಾವಿದ ದತ್ತಣ್ಣ, ಪಿಆರ್ ಒ ವೆಂಕಟೇಶ್ ಸೇರಿ ಸಿನಿಮಾ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

1984 ರಲ್ಲಿ ಎಸ್ ಆರ್ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಂ ಎನ್ ಲಕ್ಷ್ಮೀ ನಾರಾಯಣ ಹಾಗೂ ಹಿರಿಯ ನಿರ್ದೇಶಕರುಗಳು ಸೇರಿ ಕಟ್ಟಿದ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ. ಕಾನ್ಫಿಡ ಸಂಸ್ಥೆ ಇದೇ ಮೊದಲಬಾರಿಗೆ ಸಿನಿಮಾ ರಂಗದ ಗಣ್ಯರಿಗಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನಿ ಮಾಡಿದೆ

ನಿರ್ದೇಶಕರ ಸಂಘ ಸಂಘದ ಸ್ಥಾಪಕ ಅಧ್ಯಕ್ಷ ಎಸ್ ಆರ್ ಪುಟ್ಟಣ್ಣ ಕಣಗಾಲರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಪ್ರಶಸ್ತಿಯ ತೂಕ ಹೆಚ್ಚಿಸಲಾಗಿದೆ. ಜೊತೆಗೆ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಈ ವರ್ಷವೂ ಕೂಡ ಪುಟ್ಟಣ್ಣ ಕಣಗಾಲರ ಜನ್ಮದಿನ ಆಚರಿಸುವುದರೊಂದಿಗೆ ಈ ವರ್ಷ ವಿಶೇಷ ಎಂಬಂತೆ ಸಂಘದ ಈಗಿನ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರರಂಗದ ಎಲ್ಲಾ ವಿಭಾಗದಿಂದ ಹಿರಿಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರುಗಳ ವಲಯದಿಂದ ಎಲ್ಲಾ ವಿಭಾಗಳಿಂದಲೂ ಅಂದರೆ ನಿರ್ಮಾಣ ಸಹಾಯಕರಿಂದ ನಿರ್ಮಾಪಕರವರೆಗೆ 35 ಜನರನ್ನು ಆಯ್ಕೆ ಮಾಡಿ ಅವರಿಗೆ ಕಾನ್ಫಿಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಿರಿಯ ಕಲಾವಿದ ದತ್ತಣ್ಣ, ಪಿಆರ್‍ಓ ವೆಂಕಟೇಶ್ ಸೇರಿದ್ದಾರೆ

ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಇಸ್ರೋದ ವಿಶಿಷ್ಟ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡರು

ಹಿರಿಯ ನಿರ್ದೇಶಕರಾದ ಓಂ ಶ್ರೀ ಸಾಯಿಪ್ರಕಾಶ್, ಕಲಾವಿದರಾದ ಹಿರಿಯ ನಟ ಶ್ರೀಧರ್, ಸುಂದರ್ ರಾಜ್, ಶಿವಕುಮಾರ್, ಅನಿರುದ್ಧ ಜತಕರ್, ಶ್ರೀಮತಿ ಶ್ರೀರಕ್ಷಾ ಶಿವಕುಮಾರ್, ಶ್ರೀಮತಿ ಪ್ರಮೀಳಾ ಜೋಷಾಯ್, ಪುಟ್ಟಣ್ಣನವರ ಶಿಷ್ಯರಾದ ಚಂದ್ರಹಾಸ ಆಳ್ವ, ಡಾ ಪುಣ್ಯವತಿ, ಡಾ. ಬಿ ಎಮ್ ಉಮೇಶ್ ಕುಮಾರ್, ಕೃಷ್ಣೇಗೌಡ, ಗುರುರಾಜ್ ಮತ್ತು ಪುಟ್ಟಣ್ಣ ಕಣಗಾಲ್ ಮಕ್ಕಳಾದ ಭುವನೇಶ್ವರಿ ಮತ್ತು ತ್ರಿವೇಣಿ ಯವರು ಹಾಗೂ ಚಿತ್ರರಂಗದ ಮಹನೀಯರು, ಹಿರಿಯರು ಭಾಗವಹಿಸಿದ್ದರು.

ಟಾಪ್ ಸ್ಟಾರ್ ರೇಣುಕುಮಾರ್ ವಾದ್ಯಗೋಷ್ಠಿ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾದ, ಜೋ ಸೈಮನ್, ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಟಾಪ್ ಸ್ಟಾರ್ ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಉಪಸಮಿತಿ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

ಕಾನ್ಫಿಡ ರಾಜ್ಯೋತ್ಸವ ಪ್ರಸಸ್ತಿ ವಿಜೇತರು

• ಉಡುಪಿ ಕೃಷ್ಣ – ನಿರ್ಮಾಣ ಸಹಾಯಕರು,
• ರಾಜಣ್ಣ -ಬೆಳಕು
• ಮಹಾಬಲ -ವಾಹನ ಚಾಲಕರು,
• ಎ ಎಚ್ ಭಟ್ ರಾಘವೇಂದ್ರ _ ಹೊರಾಂಗಣ ಚಿತ್ರೀಕರಣ ಘಟಕ ಮಾಲೀಕರು,
• ಕೆ ಸಿ ನಾಗರಾಜ್- ವಸ್ತ್ರಾಲಂಕಾರರು,
• ಎನ್ ಕೆ ರಾಮಕೃಷ್ಣ – ವರ್ಣಾಲಂಕಾರರು,
• ಜಿ ನಾಗೇಶ್ವರ ರಾವ್ -ಕೇಶಾಲಂಕಾರರು,
• ರವೀಂದ್ರನಾಥ ಕೆ ಎಸ್ – ಕಂಠದಾನ ಕಲಾವಿದರು,
• ರಾಮಣ್ಣ ಎನ್ ಎಲ್- ನಿರ್ಮಾಣ ನಿರ್ವಾಹಕರು,
• ಅಶ್ವಥ್ ನಾರಾಯಣ್ – ಸ್ಥಿರ ಚಿತ್ರ ಛಾಯಾಗ್ರಹಕರು,
• ಮಹೇಂದ್ರ – ಧ್ವನಿ ಮುದ್ರಣಕಾರರು,
• ಶಂಕರ್ – ಎಫೆಕ್ಟ್ ಇಂಜಿನಿಯರ್,
• ಗಂಗಾಧರ್ ಸೋಮ್ -ಪ್ರಚಾರ ಕಲೆ,
• ಸುಧೀಂದ್ರ ವೆಂಕಟೇಶ್ -ಪತ್ರಿಕಾ ಸಂಪರ್ಕ ಪತ್ರಕರ್ತರು,
• ರಿಚರ್ಡ್ ಲೂಯಿಸ್ -ಬರಹಗಾರರು,
• ದತ್ತಣ್ಣ – ಹಿರಿಯ ಚಲನಚಿತ್ರ ಕಲಾವಿದರು,
• ಎಂ ಎನ್ ಲಕ್ಷ್ಮೀ ದೇವಿ- ಹಿರಿಯ ಚಲನಚಿತ್ರ ಕಲಾವಿದರು,
• ರಮಣ ಕಣಗಾಲ್- ಸಹಾಯಕ ನಿರ್ದೇಶಕರು,
• ರಘುನಂದನ್ ಬಿ – ಸಹ ನಿರ್ದೇಶಕರು,
• ಥ್ರಿಲ್ಲರ್ ಮಂಜು – ಸಾಹಸ ನಿರ್ದೇಶಕರು,
• ಬಾಬು ಖಾನ್ – ಕಲಾ ನಿರ್ದೇಶಕರು,
• ವಿಜಯ ರಾಮ್ – ನೃತ್ಯ ನಿರ್ದೇಶಕರು
• ಎಂ ಎನ್ ಸ್ವಾಮಿ – ಸಂಕಲನಕಾರರು,
• ಬಿ ಕೆ ಸುಮಿತ್ರ – ಹಿನ್ನೆಲೆ ಗಾಯಕರು,
• ಮೈಸೂರು ಮೋಹನ್ – ಸಂಗೀತ ನಿರ್ದೇಶಕರು,
• ಕೆ ವಾಸುದೇವ – ಛಾಯಾಗ್ರಹಕರು
• ಟಿ ಶ್ರೀನಿವಾಸ್ _ ಪ್ರಾದೇಶಿಕ ಚಲನಚಿತ್ರ ವಿತರಕರು ಪ್ರದರ್ಶಕರು ನಿರ್ಮಾಪಕರು,
• ಸುಂದರೇಶ್ ಬಿ ಕೆ- ಅಭಿಮಾನದ ಸೇವೆ,
• ಆದಿತ್ಯ ಚಿಕ್ಕಣ್ಣ- ಅಭಿಮಾನದ ಸೇವೆ
• ಕೆ ವಿ ಚಂದ್ರಶೇಖರ್- ಚಲನಚಿತ್ರ ಪ್ರದರ್ಶಕರು,
• ನಾರಾಯಣ ರೆಡ್ಡಿ – ಚಲನಚಿತ್ರ ವಿತರಕರು,
• ಎಸ್ ಎ ಶ್ರೀನಿವಾಸ್ – ನಿರ್ಮಾಪಕರು,
• ನಂಜರಾಜೇ ಅರಸ್_ ನಿರ್ದೇಶಕರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin