ಕುಡಿತದ ಸಮಸ್ಯೆಯ ಅನಾವರಣ ಮಾಡುವ ಚಿತ್ರ “ಪಿಯೋಟ್” ಡಿಸೆಂಬರ್ 12ರಂದು ಬಿಡುಗಡೆ
ಸದಾ ಕುಡಿಯುವುದರ ಕಡೆಗೆ ಗಮನ ಹರಿಸಿದವರನ್ನು “ಪಿಯೊಟ್” ಅನ್ನುವುದು ಸಾಮಾನ್ಯ. ಇದೀಗ ಅದೇ ಹೆಸರಲ್ಲಿ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ, ಕುಡಿತ ಬಿಡುವುದಕ್ಕೆ ಮನಸ್ಸು ಮಾಡುದಾಗ ಎಷ್ಟೆಲ್ಲಾ ಕಷ್ಟವಾಗುತ್ತೆ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಬರುತ್ತಿದೆ, ಇದೇ ಡಿಸೆಂಬರ್ 12ಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ
ನಿರ್ದೇಶಕ ಕಾರ್ತಿಕ್ ರಾಜ್ ಮಾತನಾಡಿ, ಕುಡುಕರನ್ನ ಪಿಯೊಟ್ ಎಂದು ಲೇಬಲ್ ಮಾಡ್ತಾರೆ. ಚಿಕ್ಕ ವಯಸ್ಸಿನಿಂದ ಆಲ್ಕೋಹಾಲ್ ಅಡಿಕ್ಷನ್ ಜನರನ್ನ ನೋಡಿದ್ದೀನಿ. ಅವರನ್ನ ಅರ್ಥ ಮಾಡಿಕೊಳ್ಳುವುದಕ್ಕೂ ಪ್ರಯತ್ನ ಪಟ್ಟಿದ್ದೀನಿ. ಯಾಕೆ ಕುಡೀತಾರೆ, ಅವರಲ್ಲಿ ಏನು ನೋವಿದೆ. ಅದನ್ನೆಲ್ಲಾ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದರು

ನಟ ಲಿಖಿತ್ ಮಾತನಾಡಿ ಸಿನಿಮಾಗೆ ಯಾವುದೇ ಬ್ಲಾಕ್ ಮಾರ್ಕ್ ಆಗಬಾರದು ಅನ್ನೋ ಕಾರಣಕ್ಕೆ ತುಂಬಾನೇ ಎಫರ್ಟ್ ಹಾಕಿ ಮಾಡಿದ್ದೀನಿ. ಪುನರ್ ವಸತಿ ಕೇಂದ್ರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕುಡಿಯೋದಕ್ಕೆ ಮನಸ್ಸೆ ಬಂದಿಲ್ಲ. ಆಲ್ಕೋಹಾಲ್ ಮುಟ್ಟಿಲ್ಲ ಎಂದು ಹೇಳಿದರು
ನಟಿ ಅಶ್ವಿನಿ ಚಾವರೆ ಮಾತನಾಡಿ ಮರಾಠಿ, ಮಲಯಾಳಂ, ಹಿಂದಿ ಸಿನಿಮಾರಂಗದಲ್ಲಿ ಈಗಾಗಲೇ ಮಿಂಚ್ತಾ ಇದ್ದು, ಕನ್ನಡದಲ್ಲಿಯೂ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಪಿಯೊಟ್ ಅಶ್ವಿನಿ ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ
ಲಹರಿ ವೇಲು ಮಾತನಾಡಿ ಕುಡಿಯುವ ಮಂದಿ ಮತ್ತು ಅದನ್ನು ಬಿಡಿಸಲು ಹೋದಾಗ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದಾರೆ ಎಂದರು

ವಿತರಕ ಪ್ರಶಾಂತ್ ಮಾತನಾಡಿ ಸಿನಿಮಾ ನೋಡಿದ ಮೇಲೆ ತುಂಬಾ ಇಷ್ಟವಾಗಿ ಡಿಸ್ಟ್ರಿಬ್ಯೂಷನ್ಗೆ ಒಪ್ಪಿಕೊಂಡೆವು. ನಿರ್ದೇಶಕ ಕಾರ್ತಿಕ್ ರಾಜ್ ಅ ಭೇಟಿ ಮಾಡಿದ ಮೇಲೆ ದರ್ಶನ್ ಅವರ ಡೆವಿಲ್ ರಿಲೀಸ್ ಟೈಮ್ ನಲ್ಲಿಯೇ ಸಿನಿಮಾ ರಿಲೀಸ್ ಮಾಡ್ತಾಬಿದ್ದೀವಿ ನಮಗೂ ಹಲವು ಚಿತ್ರಮಂದಿರ ಸಿಕ್ಕಿವೆ ಎಂದು ಹೇಳಿದರು

