Director Simple Suni's new movie 'Devaru Ruju Madidanu" promotional song unveiled

ನಿರ್ದೇಶಕ ಸಿಂಪಲ್ ಸುನಿ ಹೊಸ ಸಿನಿಮಾ ‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನಲ್ ಸಾಂಗ್ ಅನಾವರಣ - CineNewsKannada.com

ನಿರ್ದೇಶಕ ಸಿಂಪಲ್ ಸುನಿ ಹೊಸ ಸಿನಿಮಾ ‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನಲ್ ಸಾಂಗ್ ಅನಾವರಣ

ಸಿಂಪಲ್ ಸುನಿ ಹೊಸ ಸಿನಿಮಾಕ್ಕೆ ‘ದೇವರು ರುಜು ಮಾಡಿದನು’: ಪ್ರೊಮೋಷನಲ್ ಹಾಡು ಬಿಡುಗಡೆ
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು,ಶೀರ್ಷಿಕೆಗಳು, ಕಲಾವಿದರು ಮತ್ತು ಸಂಭಾಷಣೆಗಳ ಮೂಲಕವೇ ಜನರನ್ನು ಹಿಡಿದಿಡುವ ಮತ್ತು ಚಿತ್ರಮಂದಿರಕ್ಕೆ ಕರೆತರುವ ಶಕ್ತಿ ಇರುವ ನಿರ್ದೇಶಕ. ಇದೀಗ “ದೇವರು ರುಜು ಮಾಡಿದನು” ಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆಯಲು ಮುಂದಾಗಿದ್ದಾರೆ.

“ಗತವೈಭವ” ಚಿತ್ರದ ಯಶಸ್ವಿನ ನಂತರ ಇದೀಗ ರಂಗಭೂಮಿ ಕಲಾವಿದ ವಿರಾಜ್ ಅವರನ್ನು ನಾಯಕರಾಗಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಚಿತ್ರದ. ಶೀರ್ಷಿಕೆ ಮೂಲಕ ಕುತೂಹಲ ಹೆಚ್ಚಿಸಿರುವ “ದೇವರು ರುಜು ಮಾಡಿದನು” ಸಿನಿಮಾದ ಪ್ರಮೋಷನಲ್ ಸಾಂಗ್ ಬಿಡುಗಡೆ ಮಾಡಲಾಗಿದೆ.

ಚಿತ್ರದ ಹ್ಯಾಪಿ ಬರ್ತಡೇ ಹಾಡು ಬಿಡುಗಡೆಯಾಗಿದ್ದು ಅಣ್ಣಾವ್ರ ಮಗಳು ಲಕ್ಷ್ಮಿ ಮತ್ತು ಅಳಿಯ ಗೋವಿಂದರಾಜು, ಗಾಯಕ ಅಂಥೋನಿ ದಾಸ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಸಿಂಪಲ್ ಸುನಿ ದೇವರು ರುಜು ಮಾಡಿದನು ಮ್ಯೂಸಿಕಲ್ ಜರ್ನಿ ಸಿನಿಮಾ. ಚಿತ್ರದಲ್ಲಿ ಒಟ್ಟು 12 ಸಾಂಗ್ ಇದೆ. ವಿರಾಜ್ ಅದ್ಭುತ ಡ್ಯಾನ್ಸರ್. ಆಂಥೋನಿ ಸರ್ ನಿಮಗೆ ಋಣಿಯಾಗಿರುತ್ತೇನೆ. ಹಾಡನ್ನು ಪ್ರಮೋಷನ್ ಮಾಡಲು ಇಲ್ಲಿಗೆ ಬಂದಿದ್ದಾರೆ. ಇದಕ್ಕೆ ಹೇಳುವುದು ಸಿನಿಮಾ ದೊಡ್ಡದು. ನಾಗಾರ್ಜುನ್ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಕೀರ್ತಿ ಅದ್ಭುತ ನಟಿ. ಒಳ್ಳೆ ಕಲಾದಂಡು ಚಿತ್ರದಲ್ಲಿ ಇದೆ ಎಂದರು.

ನಾಯಕ ವಿರಾಜ್ ಮಾತನಾಡಿ, ಸಿನಿಮಾ ಅನ್ನೋದು ಕನಸು, ದಾರಿ,ಜೀವನ. ಚಿಕ್ಕ ವಯಸ್ಸಿನಿಂದ ಇದನ್ನೇ ಅಂದುಕೊAಡು ಬಂದಿದ್ದೇನೆ. ಈಗ ಅದನ್ನೇ ಫಾಲೋ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಅಂದುಕೊAಡ ಕೆಲಸ ಆಗುವುದಿಲ್ಲ. ಬೇರೆಯದ್ದೇ ಆಗುತ್ತದೆ. ಇದನ್ನು ದೇವರು ರುಜು ಮಾಡಿರುತ್ತಾನೆ. ಹ್ಯಾಪಿ ಬರ್ತಡೇ ಹಾಡಿಗೆ ಮಾಸ್ ರೂಪ ಕೊಟ್ಟಿದ್ದೇವೆ. ಇದು ಎಲ್ಲರ ಹುಟ್ಟುಹಬ್ಬಕ್ಕೆ ಬೇಕಾಗುವ ಹಾಡು. ಇದನ್ನು ಹೊರತುಡಿಸಿ ಬಹಳ ಅದ್ಭುತ ಹಾಡು ನಮ್ಮ ಚಿತ್ರದಲ್ಲಿ ಇದೆ ಎಂದರು.

ಗಾಯಕ ಆಂಥೋನಿ ದಾಸ್ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು. ನಾಯಕ ಕೀರ್ತಿ ಕೃಷ್ಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹ್ಯಾಪಿ ಬರ್ತಡೇ ಹಾಡಿಗೆ ಖ್ಯಾತ ಗಾಯಕ ಆಂಥೋನಿ ದಾಸ್ ಧ್ವನಿ ನೀಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿರಾಜ್ ಭರ್ಜರಿಯಾಗಿ ಹ್ಯಾಪಿ ಬರ್ತಡೇ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ದೇವರು ರುಜು ಮಾಡಿದನು ಚಿತ್ರದಲ್ಲಿ ವಿರಾಜ್ ಗೆ ಜೋಡಿಯಾಗಿ ಯುವನಟಿಯರಾದ ಕೀರ್ತಿ ಕೃಷ್ಣ ಹಾಗೂ ದ್ವಿತಾ ರೈ ಅಭಿನಯಿಸುತ್ತಿದ್ದಾರೆ.ಚಿತ್ರಕ್ಕೆ ಜುಡಾ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಗೋವಿಂದ್ ರಾಜ್ ಸಿಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin