ಜಿಎನ್ಎ ಇಂಡಿಯಾ ಭಾರತ ಪ್ರವೇಶ: ಕ್ರಿಕೆಟಿಗ ಹರ್ಭಜನ್ ಸಿಂಗ್ ರಾಯಬಾರಿ
ಬೆಂಗಳೂರು ಮೂಲದ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಜಿಎನ್ಎ ಇಂಡಿಯಾ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಅಧಿಕೃತ ಪ್ರವೇಶ ಘೋಷಿಸಿದ್ದು, ದೇಶಾದ್ಯಂತ ಸುರಕ್ಷಿತ ಸಾರ್ವಜನಿಕ ವೈ-ಫೈ ಸೇವೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ದೃಷ್ಟಿಯನ್ನು ಅನಾವರಣಗೊಳಿಸಿದ್ದು ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಮೂರು ವರ್ಷಗಳ ಅವಧಿಗೆ ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಿದೆ.
ಗ್ರಾಮೀಣ ಪ್ರದೇಶಗಳು, ಪ್ರವಾಸಿ ತಾಣಗಳು, ದೂರದ ಮತ್ತು ಸಂಪರ್ಕ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ವೇಗವಾದ ಹಾಗೂ ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕ ಒದಗಿಸುವ ಮೂಲಕ ಡಿಜಿಟಲ್ ಅಂತರ ಕಡಿಮೆ ಮಾಡುವುದು ಜಿಎನ್ ಎ ಇಂಡಿಯಾದ ಪ್ರಮುಖ ಗುರಿಯಾಗಿದೆ.
ಜಿಎನ್ ಎ ಇಂಡಿಯಾದ ಪ್ರಮುಖ ಯೋಜನೆಯಾದ ಭಾರತ್ ಸ್ಮಾರ್ಟ್ ಚೈನ್, ಅತ್ಯಾಧುನಿಕ ಕ್ವಾಂಟಮ್ ಕ್ರಿಪೆÇ್ಟೀಗ್ರಫಿ ತಂತ್ರಜ್ಞಾನದ ಮೇಲೆ ಆಧಾರಿತವಾಗಿದ್ದು, ಸಂವಹನ, ಡಿಜಿಟಲ್ ಪಾವತಿ ಮತ್ತು ಹಣಕಾಸು ವ್ಯವಹಾರಗಳಿಗೆ ಅತ್ಯಂತ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸುತ್ತದೆ. ಜಾಗತಿಕ ಮಟ್ಟದ ಗಣಿತಜ್ಞರು ಮತ್ತು ಕ್ರಿಪೆÇ್ಟೀಗ್ರಾಫರ್ಗಳು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಿದ್ದಾರೆ.
ಯೋಜನೆ ಡಿಜಿಟಲ್ ಇಂಡಿಯಾ ಅಭಿಯಾನದೊಂದಿಗೆ ಹೊಂದಿಕೆಯಾಗಿದ್ದು, ಅಕ್ಟೋಬರ್ 2023ರಿಂದ ಬಿಎಸ್ ಎನ್ ಎಲ್ ಮೂಲಕ ಪೈಲಟ್ ಪ್ರಾಜೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಜನವರಿ 2024ರಲ್ಲಿ ಅಧಿಕೃತ ಸಾರ್ವಜನಿಕ ವೈ-ಫೈ ಪಾಲುದಾರ ಒಪ್ಪಂದ ಮಾಡಿಕೊಂಡಿದೆ
ಜಿಎನ್ ಎ ಇಂಡಿಯಾ ಪ್ರತಿನಿಧಿ ಮಾತನಾಡಿ, “ಡಿಜಿಟಲ್ ಭಾರತ ನಿರ್ಮಾಣದಲ್ಲಿ ಸುರಕ್ಷಿತ ಸಂಪರ್ಕ ವ್ಯವಸ್ಥೆ ಬಹಳ ಮುಖ್ಯ. ಭಾರತ್ ಸ್ಮಾರ್ಟ್ ಚೈನ್ ಮೂಲಕ ದಿನನಿತ್ಯದ ಡಿಜಿಟಲ್ ವ್ಯವಹಾರಗಳಿಗೆ ಕ್ವಾಂಟಮ್ ಮಟ್ಟದ ಭದ್ರತೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.

ಬ್ರಾಂಡ್ ಅಂಬಾಸಡರ್ ಹರ್ಭಜನ್ ಸಿಂಗ್ ಮಾತನಾಡಿ, “ಡಿಜಿಟಲ್ ಸಂಪರ್ಕ ಇಂದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸುರಕ್ಷಿತ ಹಾಗೂ ಸಮಾನ ಡಿಜಿಟಲ್ ಪ್ರವೇಶಕ್ಕೆ ಕೆಲಸ ಮಾಡುತ್ತಿರುವ ಉಓಂ ಇಂಡಿಯಾ ಜೊತೆ ಕೈಜೋಡಿಸಿರುವುದು ನನಗೆ ಹೆಮ್ಮೆ” ಎಂದರು.
ಈ ಮೂಲಕ ಜಿಎನ್ ಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕರ್ನಾಟಕವನ್ನು ತನ್ನ ಪ್ರಮುಖ ಕಾರ್ಯಾಚರಣಾ ಕೇಂದ್ರವಾಗಿ ರೂಪಿಸಿಕೊಂಡು, ದೇಶಾದ್ಯಂತ ಸಾರ್ವಜನಿಕ ವೈ-ಫೈ ಜಾಲವನ್ನು ಹಂತ ಹಂತವಾಗಿ ವಿಸ್ತರಿಸುವ ಯೋಜನೆ ಹೊಂದಿದೆ.

