45 Film Review:.The technologically rich visual splendor of the film 45 between birth and death

45 Film Review:.ಹುಟ್ಟು ಸಾವಿನ ನಡುವಿನ ತಾಂತ್ರಿಕ ಶ್ರೀಮಂತ ದೃಶ್ಯ ವೈಭವ ಅನಾವರಣದ ಚಿತ್ರ 45 - CineNewsKannada.com

45 Film Review:.ಹುಟ್ಟು ಸಾವಿನ ನಡುವಿನ ತಾಂತ್ರಿಕ ಶ್ರೀಮಂತ ದೃಶ್ಯ ವೈಭವ ಅನಾವರಣದ ಚಿತ್ರ 45

ಚಿತ್ರ: 45
ನಿರ್ದೇಶನ: ಅರ್ಜುನ್ ಜನ್ಯ
ನಿರ್ಮಾಣ: ರಮೇಶ್‌ ರೆಡ್ಡಿ
ತಾರಾಗಣ: ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ, ಶೆಟ್ಟಿ ಕೌಸ್ತುಭ ಮಣಿ, ಸುಧಾರಾಣಿ,ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಮತ್ತಿತರರು
ರೇಟಿಂಗ್ : *** 3.5 /5

ಹುಟ್ಟು ಸಾವು,ಅದರ ಮಧ್ಯೆ ನಡೆಯುವ ಘಟನೆ, ಕರ್ಮಫಲ, ಬದುಕಿನ ಫಿಲಾಸಫಿಗೆ ದೈವಿಕ ಸ್ವರೂಪ ನೀಡಿ ತೆರೆಗೆ ತಂದಿರುವ ಚಿತ್ರ ” 45″.

ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ಅರ್ಜುನ್ ಜನ್ಯ ” 45″ ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಅದಕ್ಕಾಗಿ ಅವರು ಶಿವರಾಜ್ ಕುಮಾರ್ , ಉಪೇಂದ್ರ ,ರಾಜ್ ಬಿ ಶೆಟ್ಟಿ ಅವರನ್ನು ತಮ್ಮ ಕನಸಿಗೆ ಸಾಥ್ ಕೊಡಲು ಬಳಸಿಕೊಂಡಿದ್ದಾರೆ‌. ಜೊತೆಗೆ ತಾವು ಅಂದುಕೊಂಡ‌ ವಿಷಯವನ್ನು ಪ್ರೇಕ್ಷಕರ ಮುಂದಿಡಲು ತಾಂತ್ರಿಕ ದೃಶ್ಯ ವೈಭವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಅವರು ಗೆದ್ದಿದ್ದಾರೆ ಕೂಡ.

45 ಚಿತ್ರ ಮೂರು ಪ್ರಮುಖ ಪಾತ್ರಗಳ ಸುತ್ರ ಕೇಂದ್ರೀಕರಿಸಿದೆ.‌ ಒಬ್ಬ ಕೊಲ್ಲಲು ಸಜ್ಜಾಗಿದ್ದರೆ ಮತ್ತೊಬ್ಬ ಅವನನ್ನು ಕಾಯುವನು.. ಕೊಲ್ಲುವವನು ಮತ್ತು ಕಾಯುವನ‌ ನಡುವೆ ಸಾಮಾನ್ಯ ವ್ತಕ್ತಿ. ಕೊಲ್ಲುವನ ಭಯಕ್ಕೆ ಬೆದರಿದ ಸಾಮಾನ್ಯ ವ್ಯಕ್ತಿಯ ನೆರವಿಗೆ ಕಾಯುವನು ಪ್ರವೇಶ, ಆತನಿಗೊಂದಿಷ್ಡು ಬದುಕಿನ ರೀತಿ,ನೀತಿ, ರಿವಾಜು, ಹುಟ್ಡು ಸಾವು, ಬದುಕು, ಅದರ ಮದ್ಯೆ ಜೀವನ, ಪಾಪ- ಪುಣ್ಯ ಸೇರಿದಂತೆ ಒಂದಷ್ಟು ಬದುಕಿನ‌ ಪಾಠ ಮಾಡುತ್ತಾನೆ‌.

ಮೂವರ ಮದ್ಯೆ ಕೊಲ್ಲಲು ಮುಂದಾವರು ಯಾರು.. ಜೀವ ಭಯದಿಂದ ತಪ್ಪಿಕೊಳ್ಳುತ್ತಿರುವವರು ಯಾರು. ಕಾಯಲು ಬಂದವನು ಮಾಡುವುದಾದರೂ ಏನು ಎನ್ನುವುದು‌ ಕಥನ. ಶಿವಪ್ಪನ ಮಾತು ಕೇಳಿ ಸಾವು ಹುಡುಕಿಕೊಂಡ ಹೊರಟ ವ್ಯಕ್ತಿ..ಸಾವನ್ನು ಗೆಲ್ತಾನಾ..ಅಥವಾ ಸಾವು ಅವನನ್ನು ಗೆಲ್ಲುತ್ತದಾ ಎನ್ನುವುದು ಚಿತ್ರದ ಕುತೂಹಲ ಅದನ್ನು ಚಿತ್ರದಲ್ಲಿ ನೋಡಬೇಕು..

ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ, ಬದುಕಿನ ಕಥೆ ಹೇಳುತ್ತಲೇ ಸಾವಿನ ಸಂತರ ಏನು ಸತ್ತ ನಂತರ ಆತ್ಮದ ಪಯಣ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆ ಸಾವಿನ‌ ತನಕದ ಹಾದಿ ಒಂದು ಹಂತವಾದರೆ ಸಾವಿನ‌ ನಂತರದ ಹಾದಿ ಮತ್ತೊಂದು ಇದಕ್ಕಾಗಿ ತಂತ್ರಜ್ಞಾನದ ಮೂಲಕ ಹೊಸ ಲೋಕವನ್ನು ಸೃಷ್ಟಿ ಮಾಡಿ ಪ್ರೇಕ್ಷಕರ ಮುಂದೆ ಇಟ್ಡಿದ್ದಾರೆ.

ನಿರ್ಮಾಪಕ ರಮೇಶ್ ರೆಡ್ಡಿ ಕಥೆ,ಕಲಾವಿದರನ್ನು ನಂಬಿ ನೀರು ಸುರಿದಂತೆ ಬಂಡವಾಳ ಹೂಡಿರುವುದು ಚಿತ್ರದಲ್ಲಿ ತಂತ್ರಜ್ಞಾನದ ಮೂಲಕ ಕಣ್ಣಿಗೆ ಕಟ್ಟಿದ ಹಾಗಿದೆ. ಸ್ವತಃ ಸಂಗೀತ ನಿರ್ದೇಶಕರಾಗಿರುವ ಅರ್ಜುನ್ ಜನ್ಯ ಕಥೆಗೆ ಪೂರಕವಾಗಿಲ್ಲ ಎಂದು ಹಾಡುಗಳನ್ನು ಚಿತ್ರದಲ್ಲಿ ಇಟ್ಟಿಲ್ಲ.. ಚಿತ್ರದ ನಿರೂಪಣೆ ದಾರಿ ತಪ್ಪುತ್ತದೆ ಎನ್ನುವಾಗ ಮುದ ನೀಡಲು ಹಾಡು ಬೇಕಾಗಿತ್ತು ಎನ್ನುವುದು ಚಿತ್ರ ನೋಡಿದವರಿಗೆ ಅನ್ನಿಸದೆ ಇರಲಾರದು. ಯಶಸ್ವಿ ಹಾಡು ನೀಡಿರುವ ಅರ್ಜುನ್ ಜನ್ಯ ಅವಕಾಶ ಮಾಡಿಕೊಂಡು ಹಾಡುಗಳನ್ನು ಇಟ್ಟಿದ್ದರೆ ಚಿತ್ರಕ್ಕೆ ಮತ್ತಷ್ಟು ಪೂರಕವಾಗುತ್ತಿತ್ತು

ಚಿತ್ರದಲ್ಲಿ ಬದುಕಿನ ರೀತಿ, ನೀತಿ, ವೇದಾಂತ ,ಸಿದ್ದಾಂತ ,ಪ್ರೇಮ ಕಥೆ, ತಾಯಿ ಸೆಂಟಿಮೆಂಟ್ ಸೇರಿದಂತೆ ಹಲವು ವಿಷಯಗಳನ್ನು ಚಿತ್ತದಲ್ಲಿ ಸೇರಿಸಿದ್ದಾರೆ. ಅದರ ಜೊತೆಗೆ ಹಾಡು ಸೇರಿಸಿದ್ದರೆ ಚೆಂದವಿತ್ತು. ಚಿತ್ರದಲ್ಲಿ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಕಿಕೊಳ್ಳಿ, ಮೊಬೈಲ್ ಬಳಸದಿರಿ, ಮಾನವೀಯತೆ ಮರೆಯದಿರಿ ಎನ್ನುವ ಸಾಮಾಜಿಕ ಸಂದೇಶವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಶಿವಪ್ಪನಾಗಿ ಶಿವಣ್ಣ, ರಾಯಪ್ಪನಾಗಿ ಉಪೇಂದ್ರ, ವಿನಯ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಿವಪ್ಪ-:ರಾಯಪ್ಪ ಮುಖಾಮುಖಿ ಚಿತ್ರದ ಕಥನ ಕುತೂಹಲವನ್ನು ಹೆಚ್ಚಿಸಿದೆ. ಈ ಮೂವರು ಪಾತ್ರದ ಜೊತೆಗೆ ತಾಂತ್ರಿಕ ದೃಶ್ಯ ವೈಭವ ಮತ್ತೊಂದು ಪಾತ್ರವಾಗಿ ಗಮನ ಸೆಳೆದಿದೆ.

ಚಿತ್ರದಲ್ಲಿ ಶಿವಣ್ಣ ಬರುವುದೇ ದ್ವಿತೀಯಾರ್ಧದಲ್ಲಿ ಅವರ ವೇಷ ಭೂಷಣ,ಅವತಾರ ಅಭಿಮಾನಿಗಳಿಗೆ ಹೊಸ ಥ್ರಿಲ್ ನೀಡಿದೆ.ಜತೆಗೆ ಚಿತ್ರದ ದಿಕ್ಕು ಬದಲಿಸಿದೆ. ಅಭಿಮಾನಿಗಳ ಶಿಳ್ಳೆ ಕೇಕೆ ಆರ್ಭಟಿಸಿದೆ.

ಚಿತ್ರದಲ್ಲಿ ಸುಧಾರಣಿ, ಮೊಟ್ಟೆ ರಾಜೇಂದ್ರನ್, ಕೌಸ್ತುಭ ಮಣಿ,ಮಾನಸಿ ಸುಧೀರ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸತ್ಯ ಹೆಗಡೆ ಕ್ಯಾಮರಾ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.ವರ್ಷಾಂತ್ಯದಲ್ಲಿ ವಿಭಿನ್ನ ಚಿತ್ರ ನೋಡುವ ಅವಕಾಶ ಪ್ರೇಕ್ಷಕರಿಗೆ ದೊರೆತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin