ಹೊಸವರ್ಷದಲ್ಲಿ “ಕೊರಗಜ್ಜ” ಸಿನಿಮಾದ ಹಾಡುಗಳ ಪ್ರೀಮಿಯರ್
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳನ್ನು “ಸಾಂಗ್ಸ್ ಪ್ರೀಮಿಯರ್” ಎನ್ನುವ ವಿನೂತನ ಕಾರ್ಯಕ್ರಮದ ಮುಖಾಂತರ ಬಿಡುಡಗೆ ಮಾಡಲಾಯಿತು.ಇದೇ ವೇಳೆ ರೀಲ್ಸ್ ಸ್ಪರ್ದೆಗೆ ಕೋಟಿ ರುಪಾಯಿಯಷ್ಟು ಬಹುಮಾನ ಘೋಷಣೆ ಮಾಡಲಾಯಿತು

ದೇಶದ ಮೊದಲ ಪಾಪ್ ತಾರೆ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಶರೋನ್ ಪ್ರಭಾಕರ್,ಹಿರಿಯ ನಟಿ ಭವ್ಯ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಕರ್, ಮೊದಲಾದ ಸೆಲೆಬ್ರೆಟಿಗಳು ಸಮಾರಂಭಕ್ಕೆ ಸಾಕ್ಷಿಯಾದರು.
“ಕೊರಗಜ್ಜ” ಚಿತ್ರದ ಹಾಡುಗಳ ಪ್ರೀಮಿಯರ್ ಆಗಿ ಕೇಳುಗರಿಗೆ ತೆರೆದುಕೊಳ್ಳುತ್ತಿದ್ದಂತೆಯೇ ಆರ್ ಜೆ ವಿಕ್ಕಿ, ಆರ್ ಜೆ ದುಶ್ಯಂತ್, ಆರ್ ಜೆ ಪ್ರದೀಪ್ ಸಮೇತ ಹಲವು ಆರ್‍ಜೆಗಳು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು
ಶ್ರೇಯ ಘೋಷಾಲ್ ಮತ್ತು ಆರ್ಮಾನ್ ಮಲಿಕ್ ಹಾಡಿದ್ದ ಸುಧೀರ್ ಅತ್ತಾವರ್ ಸಾಹಿತ್ಯ, ಗೋಪಿ ಸುಂದರ್ ನ ವಿಶೇಷ ಕಂಪೆÇೀಸಿಷನ್ ನ ಎ ಐ ಸ್ಪರ್ಷದ “ಗಾಳಿ ಗಂಧ …” ಹಾಡು ಮೂಡಿಬರುತ್ತಿದ್ದಂತೆಯೇ ಇದು ವರ್ಲ್ಡ್ ಕ್ಲಾಸ್ ವಿಷುವಲ್ಸ್ ಎಂದು ಶರೋನ್ ಪ್ರಭಾಕರ್ ಸಮೇತ ನೆರೆದಿದ್ದ ಎಲ್ಲರಿಂದಲೂ ಪ್ರಶಂಸೆ ಗೊಳಪಟ್ಟಿತು.

” ಮಹಿಷಾಸುರ”ಯಕ್ಷಗಾನ ಸನ್ನಿವೇಶದಲ್ಲಿ ಮಹಿಷನ ತಾಯಿ ಮಾಲಿನಿ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಎಲ್ಲರ ಗಮನಸೆಳೆದರು. ಮಂಗಳೂರಿನ ಜಯದೇವ್ ಮತ್ತು ತಂಡ ” ಮಹಿಷಾಸುರ” ಯಕ್ಷಗಾನದ ತುಣುಕು ಪ್ರದರ್ಶಿಸಿತು.
ಹಿನ್ನೆಲೆ ಗಾಯಕರಾದ ರಮೇಶ್ಚಂದ್ರ ಮತ್ತು ಪ್ರತಿಮಾ ಭಟ್ ಹಾಡುಗಳು ಸಮಾರಂಭಕ್ಕೆ ಕಳೆಕಟ್ಟಿತ್ತು. ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮತ್ತಿತರರು ಈ ಕ್ಷಣದಲ್ಲಿ ಹಾಜರಿದ್ದರು

