Khushi Ravi in ​​the film "Daiji" starring actor Ramesh Aravind

ನಟ ರಮೇಶ್ ಅರವಿಂದ್ ಅಭಿನಯದ “ದೈಜಿ” ಚಿತ್ರದಲ್ಲಿ ಖುಷಿ ರವಿ - CineNewsKannada.com

ನಟ ರಮೇಶ್ ಅರವಿಂದ್ ಅಭಿನಯದ “ದೈಜಿ” ಚಿತ್ರದಲ್ಲಿ ಖುಷಿ ರವಿ

ನಟ ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರ “ದೈಜಿ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಗುರು ದೇಶಪಾಂಡೆ ಮುಂತಾದವರ ಅಭಿನಯವಿರುವ ಚಿತ್ರದಲ್ಲಿ “ದಿಯಾ” ಖ್ಯಾತಿಯ ಖುಷಿ ರವಿ ಕೂಡ ಅಭಿನಯಿಸಿದ್ದಾರೆ.

#KusheeRavi

ಆಧ್ಯಾತ್ಮಿಕ ಹಿನ್ನೆಲೆಯ ವಿಶೇಷ ಪಾತ್ರದಲ್ಲಿ ಖುಷಿ ನಟಿಸಿದ್ದಾರೆ.ರವಿ ಕಶ್ಯಪ್ ನಿರ್ಮಿಸುತ್ತಿರುವ ಹಾಗೂ “ಶಿವಾಜಿ ಸುರತ್ಕಲ್” ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಚಿತ್ರೀಕರಣ ಪೂರ್ಣವಾಗಿದೆ. ವಿ.ಎಫ್.ಎಕ್ಸ್ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಆಕೆಲಸದ ಮೇಲೆ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಲಿದೆ.

ಜ್ಯೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಮೂರು ಜನ ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ “ದೈಜಿ” ಚಿತ್ರಕ್ಕಿದೆ.

#RameshArvind

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin