Ruthuni from the movie "Karikada" caught the attention.. Ruthuni song

ಕರಿಕಾಡ” ಚಿತ್ರದ ಗಮನ ಸೆಳೆದ ರುತುನಿ.. ರುತುನಿ ಹಾಡು - CineNewsKannada.com

ಕರಿಕಾಡ” ಚಿತ್ರದ ಗಮನ ಸೆಳೆದ ರುತುನಿ.. ರುತುನಿ ಹಾಡು

ವಿಭಿನ್ನ ಕಥಹಂದರ ಹೊಂದಿರುವ ಮ್ಯೂಸಿಕಲ್ ಜರ್ನಿಯ ಜೊತೆಗೆ ಅಡ್ವೆಂಚರಸ್ ಕಥೆಯ ಜೊತೆಗೆ ಸಿದ್ದಗೊಂಡಿರುವ “ಕರಿಕಾಡ” ಚಿತ್ರದ ರತುನಿ ರತುನಿ ಹಾಡು ಗಮನ ಸೆಳೆದಿದೆ.ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ

ಸಾಹಸಮಯ ದೃಶ್ಯಕಾವ್ಯ, ಪ್ರೇಮಕಥೆಯ ರೂಪಕವಾಗಿ,ಮಣ್ಣಿನ ಸೊಗಡು ಸೂಸುವ ಕಥಾಹಂದರ ಹೊಂದಿದೆ. ಜೊತೆಗೆ ಸೇಡಿನ ಕತೆಯನ್ನು ಒಳಗೊಂಡಿದ್ದು ಚಿತ್ರ ಕುತೂಹಲ ಹೆಚ್ಚು ಮಾಡಿದೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಹಾಡಿಗೆ ಹೆಜ್ಜೆ ಹಾಕಿರೋದು ಬಾಲಿವುಡ್ ಮಾದಕ ಬೆಡಗಿ ಕೃತಿ ವರ್ಮಾ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿ ಚಿತ್ರದ ಬಗ್ಗೆ ಸಂತಸ ಹಂಚಿಕೊಂಡರು

ನಿರ್ದೇಶಕ ಗಿಲ್ಲಿ ವೆಂಕಟೇಶ್ ಮಾತಾನಾಡಿ ಚಿತ್ರದಲ್ಲಿ 7 ಹಾಡುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು

ಕಾಡ ನಟರಾಜ್, ನಿರೀಕ್ಷಾ ಶೆಟ್ಟಿ ಕಬ್ಬಿನ ಜಲ್ಲೇ ಇಷ್ಟ ಆಯ್ತು ಹಾರ್ಡ್ ವರ್ಕ್ ಇತ್ತು ಎಲ್ಲದು ಸಸ್ಪೆನ್ಸ್ ಆಗೇ ಇರುತ್ತೆ ಆಡಿಯನ್ಸ್ ಎಂಜಾಯ್ ಮಾಡಬೇಕು ಸಾಂಗ್ ಟೈಟಲ್ ಟೀಸರ್ ನೋಡಿ ಏನೂ ನಿರೀಕ್ಷೆ ಮಾಡೋಕಾಗಲ್ಲ ಎಂದರು.

ಕಲಾವಿದರಾದ ಯಶ್ ಶೆಟ್ಟಿ, ವಿಜಯ್ ಚಂಡೂರ್ ಮಾತನಾಡಿ ಕರಿಕಾಡ ಹಬ್ಬ ನಡಿತಿದೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಎಂದು ಹೇಳಿದರು

ಗಾಯಕ ಕಂಪೋಸರ್ ಅತಿಷಯ್ ಜೈನ್ ಮಾತಾನಾಡಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.. ನಿಮ್ಮ ಸಪೋರ್ಟ್ ನಮ್ಮ ಟೀಂ ಮೇಲೆ ಇರಬೇಕು ಎಂದು ಹೇಳಿದರು

ಗಾಯಕ ಶಾಶಾಂಕ್ ಶೇಷಗಿರಿ ಮಾತನಾಡಿ ಕಾರಿಕಾಡ ತಂಡಕ್ಕೆ ಆಶೀರ್ವಾದ ಬೇಕು ಮೂರು ಹಾಡು ಹಾಡಿದ್ದೀನಿ ಎಲ್ಲರ ಆಶೀರ್ವಾದ ತಂಡಕ್ಕೆ ಇರಲಿ ಬಹಳ ಅದ್ಬುತವಾದ ಎಲ್ಲ ಭಾಷೆಯ ಸಿಂಗರ್ ಹಾಡಿದ್ದಾರೆ

ಕಾಡ ನಟರಾಜ್ ನಾಯಕ ನಟನಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಲರಾಜವಾಡಿ,ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಮಂಜು ಸ್ವಾಮಿ, ಗೋವಿಂದ ಗೌಡ , ದೀವಾಕರ್, ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಕಾಡ ನಟರಾಜ್ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸಿನ ಸಿನಿಮಾ ಮೂಲಕ ಈಡೇರಿಸಿದ್ದಾರೆ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

ಕರಿಕಾಡ ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹೀರೋ ಕಾಡ ನಟರಾಜ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಕಂಪೋಸ್ ಮಾಡಿದ್ದಾರೆ. ಶಶಾಂಕ್ ಶೇಷಾಗರಿ ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಕ್ಯಾಮರಾ, ದೀಪಕ್ ಸಿ.ಎಸ್ ಸಂಕಲನವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin