Surya Movie Review : ಮುದ್ದಾದ ಪ್ರೇಮ ಕಥೆಯ ಸಂಗೀತಮಯ ಚಿತ್ರ ಸೂರ್ಯ

Surya Movie Review : ಮುದ್ದಾದ ಪ್ರೇಮ ಕಥೆಯ ಸಂಗೀತಮಯ ಚಿತ್ರ ಸೂರ್ಯ

ಚಿತ್ರ; ಸೂರ್ಯ
ನಿರ್ದೇಶನ: ಸಾಗರ್
ತಾರಾಗಣ :ಪ್ರಶಾಂತ್, ಹರ್ಷಿತಾ,ರವಿಶಂಕರ್, ಪ್ರಮೋದ್ ಶೆಟ್ಟಿ, ಶೃತಿ,ನಾಗಾಭರಣ, ದೀಪಿಕಾ ಗೌಡ, ಬಾಲರಾಜವಾಡಿ ಮತ್ತಿತರರು
ರೇಟಿಂಗ್ :* 3.5 / 5

” ನನ್ ನನ್ಮಗ ನಿನ್ ಎದುರೇ ನಿನ್ ಮಗಳೇ ಎತ್ತಾಕಿಕೊಂಡು ಹೋಗಿ ಅವನ ಪ್ರೀತಿ ಉಳಿಸಿಕೋಳ್ತಾನೆ.. ಹೇಂಗ್ ತಡೀತೀಯೋ ನೋಡಿಯೇ ಬಿಡೋಣ…

ರೌಡಿ ಲೇಔಟ್ ಮಾರಿಗೆ ಹುಡುಗನ ತಾಯಿ ಮಮತಾ ಸವಾಲು ಹಾಕ್ತಾಳೆ..ಅದಕ್ಕೂ ಒಂದು ಇತಿಹಾಸವಿದೆ. ಮಗನ ಪ್ರೀತಿಗೆ ಬೆಂಬಲವಾಗಿ ನಿಲ್ಲುವ ತಾಯಿ ರೌಡಿಯನ್ನು ಎದುರು ಹಾಕಿಕೊಳ್ಳುತ್ತಾಳೆ. ರೌಡಿಗೂ ಆಕೆಗೂ ಏನು ಸಂಬಂದ..ಇತಿಹಾಸ ಏನು ಎನ್ನುವುದು ಕುತೂಹಲ

ಹೊಡಿ ಬಡಿಯ ಜೊತೆಗೆ ತಾಯಿ- ಮಗನ ಸೆಂಟಿಮೆಂಟ್ ಜೊತೆಗೆ ಭರಪೂರ ಆಕ್ಷನ್ ಸನ್ನಿವೇಶಗಳ ಅಬ್ಬರವಿದೆ. ಇದಲ್ಲದೆ ಪ್ರೀತಿ,ಚಿತ್ರದ ಅಲ್ಲಲ್ಲಿ ಹಾಡುಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಮಾನವ ಮಕ್ಕಳ ಸಾಗಾಣೆಯಂತ ಗಂಭೀರ ವಿಷಯಗಳನ್ನು ಮುಂದಿಟ್ಟುಕೊಂಡು ಮುದ್ದಾದ ಸಂಗೀತ ಮಯ ಪ್ರೇಮಕಥೆಯನ್ನು “ಸೂರ್ಯ ” ಚಿತ್ರದ ಮೂಲಕ ತೆರೆಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಾಗರ್.

ಆತ ಸೂರ್ಯ (ಪ್ರಶಾಂತ್ ) ಕೊಳಗೇರಿಯಲ್ಲಿ ಬೆಳೆದವ. ಆತನಿಗೆ ತಂದೆ ತಾಯಿ ಯಾರೆಂದು ತಿಳಿಯದವ. ಈ ಕಾರಣಕ್ಕಾಗಿಯೇ ಆತ ದೇವರನ್ನು ನಂಬದವ. ಬದುಕಾಗಿ ಹೋಟೆಲ್‍ನಲ್ಲಿ, ಆಟೋ ಓಡಿಸಿಕೊಂಡು ಜೀವನ ಸಾಗಿಸಿದಾತ, ಓದಿನಲ್ಲಿಯೂ ಕಾಲೇಜಿಗೆ ಮೊದಲು. ಇಂತಹ ಹುಡುಗನಿಗೆ ಮೊದಲ ನೋಟದಲ್ಲಿಯೇ ಭೂಮಿ ( ಹರ್ಷಿತಾ ) ಫಿಧಾ ಆಗ್ತಾಳೆ. ಇನ್ನೇನು ಎಲ್ಲವೂ ಸರಿ ಹೋಯ್ತು ಎನ್ನುವಾಗ ಬ್ರೇಕ್‍ಅಪ್ ಆಗಿ ಬಿಡುತ್ತದೆ.

ತಾನಿರುವ ಕೊಳಗೇರಿಯ ಹುಡುಗಿ ಪುಷ್ಪ (ದೀಪಿಕಾ ಗೌಡ) ಸೂರ್ಯನನ್ನು ಒಳ ಒಳಗೆ ಪ್ರೀತಿಸುತ್ತಾಳೆ. ಈ ನಡುವೆ ಭೂಮಿಗೆ ಸೂರ್ಯನ ಮೇಲೆ ಮತ್ತೆ ಲವ್ವಾಗಲಿದೆ.ಇಷ್ಟರೊಳಗೆ ತಾಯಿ ಯಾರೆನ್ನುವ ಸತ್ಯ ಗೊತ್ತಾಗಲಿದೆ. ಎಲ್ಲವೂ ಸಲೀಸು ಎನ್ನುವಾಗ ಅನಾಥ ಸೂರ್ಯ ಮತ್ತೊಮ್ಮೆ ಅನಾಥವಾಗುತ್ತಾನೆ. ಏನಾಯ್ತು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಸಾಗರ್,ಬಣ್ಣದ ಬದುಕಿನ ಅನುಭವವನ್ನು ಮೂಟೆ ಕಟ್ಟಿಕೊಂಡು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ತಾವು ಹೇಳುವ ಕಥೆಯನ್ನು ಜನರ ಮುಂದಿಡಲು ಅನುಭವಿ ಕಲಾವಿದರನ್ನು ಹೊಸಬರೊಂದಿಗೆ ಬಳಸಿಕೊಂಡಿದ್ದಾರೆ. ಚಿತ್ರದ ಗಂಭೀರ ಸನ್ನಿವೇಶಗಳಲ್ಲಿ ಹಾಡುಗಳು ತಂದಿದ್ದಾರೆ. ಅದು ಅಗತ್ಯವಿರಲಿಲ್ಲ. ಜೊತೆಗೆ ನಾಯಿ ಚಂದ್ರು ಇರುವ ಸನ್ನಿವೇಶದಲ್ಲಿ ಎದುರುಗಡೆ ಇದ್ದವನಿಗೆ ಹೊಡೆದರೆ ಈತ ಹೇಗೆ ಸತ್ತ ಎನ್ನುವುದನ್ನು ತೋರಿಸಿಲ್ಲ. ಜೊತೆಗೆ ಅಲ್ಲಲ್ಲಿ .ಪ್ಯಾಶ್ ಬಾಕ್‍ನಲ್ಲಿ ಪ್ಲಾಶ್‍ಬ್ಯಾಕ್ ಕಥೆ ಹೇಳಿದ್ದಾರೆ. ನಿರೂಪಣೆ ಕಡೆಗೆ ಮತ್ತಷ್ಟು ಗಮನ ಹರಿಸಿದ್ದರೆ ಉತ್ತಮ ಚಿತ್ರ ನೀಡಬಹುದಿತ್ತು.

ನಾಯಕ ಪ್ರಶಾಂತ್ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡಿದ್ದಾರೆ. ನಟನೆಯಲ್ಲಿ ಇನ್ನಷ್ಟು ಪಳಗಿದರೆ ಉತ್ತಮ ನಟನಾಗುವ ಎಲ್ಲಾ ಲಕ್ಷಣಗಳಿವೆ.

ನಾಯಕಿ ಹರ್ಷಿತಾ ಮೊದಲ ಯತ್ನದಲ್ಲಿ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಹಿರಿಯ ಕಲಾವಿದರಾದ ರವಿಶಂಕರ್, ಶೃತಿ, ನಾಗಾಭರಣ, ಪ್ರಮೋದ್ ಶೆಟ್ಟಿ, ಬಾಲರಾಜ ವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin