'Fan War' helmed by cinematographer Girish

ಭಾವಚಿತ್ರ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ‘ಫ್ಯಾನ್ ವಾರ್’ - CineNewsKannada.com

ಭಾವಚಿತ್ರ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ‘ಫ್ಯಾನ್ ವಾರ್’

ಭಾವಚಿತ್ರ ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಸಿದ್ದಾರೆ. ಚಿತ್ರದ ಹೆಸರು ಫ್ಯಾನ್ ವಾರ್. ವುಡ್ ಕ್ರೀಪರ್ ಫಿಲಂಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಗಿರೀಶ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಆವಾಹಯಾಮಿ, ಭಾವಚಿತ್ರ, ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್ ನಂತರ ಗಿರೀಶ್ ನಿರ್ದೇಶನದ 4ನೇ ಚಿತ್ರವಿದು. ವಿಲೇಜ್ ಬ್ಯಾಕ್ ಡ್ರಾಪ್‍ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ಕ್ರಿಕೆಟ್ ಹಾಗೂ ಸಿನಿಮಾ ಫ್ಯಾನ್ಸ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ.

ಈಗಾಗಲೇ ಕೊರಟಗೆರೆ, ಮಧುಗಿರಿ, ಗೌರಿಬಿದನೂರು, ಸುತ್ತಮುತ್ತ 35 ದಿನಗಳ ಕಾಲ 90ರಷ್ಡು ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಹತ್ತು ದಿನಗಳ ಶೂಟಿಂಗ್ ಮಾತ್ರವೇ ಬಾಕಿಯಿದೆ.

ಚಿತ್ರದಲ್ಲಿ 4 ಹಾಡುಗಳಿದ್ದು ಗೌತಂ ಶ್ರೀವತ್ಸ ಸಂಗೀತ ಸಂಯೋಜನೆಯಿದೆ, ಜಶ್ವಂತ್ ಛಾಯಾಗ್ರಹಣ, ರತೀಶ್ ಸಂಕಲನ ಈ ಚಿತ್ರಕ್ಕಿದೆ. ಒಂದಷ್ಟು ರಿಯಲ್ ಲೈಫ್ ಘಟನೆಗಳನ್ನು ಇನ್‍ಸ್ಪೈರ್ ಆಗಿ ತೆಗೆದುಕೊಂಡು ಚಿತ್ರ ನಿರ್ದೇಶಿಸಿರುವುದಾಗಿ ಗಿರೀಶ್ ಹೇಳಿದ್ದಾರೆ.

ಅಲ್ಲದೆ ಚಿತ್ರದ ನಾಯಕನಾಗಿಯೂ ಗಿರೀಶ್ ಅವರೇ ನಟಿಸಿದ್ದಾರೆ. ಉಳಿದಂತೆ ಒಂದಷ್ಟು ಸ್ಥಳೀಯ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin