Shooting of suspense thriller "Parthan Parapancha" has started

ಸಸ್ಪೆನ್ಸ್ ಥ್ರಿಲ್ಲರ್ “ಪಾರ್ಥನ್ ಪರಪಂಚ” ಚಿತ್ರೀಕರಣ ಆರಂಭ - CineNewsKannada.com

ಸಸ್ಪೆನ್ಸ್ ಥ್ರಿಲ್ಲರ್ “ಪಾರ್ಥನ್ ಪರಪಂಚ” ಚಿತ್ರೀಕರಣ ಆರಂಭ

“ಅಪಾಯವಿದೆ ಎಚ್ಚರಿಕೆ” ಚಿತ್ರದ ಬಳಿಕ ಕೊಡಗಿನ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ “ಪಾರ್ಥನ್ ಪರಪಂಚ” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋರ್ಟ್ ಡ್ರಾಮ ಚಿತ್ರದ ಮೂಲಕ ಹೊಸದೊಂದು ಬಗೆಯ ಕಥೆಯ ಮೂಲಕ ವಿಭಿನ್ನವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ

ಕಿರುತೆರೆ ಲೋಕದಲ್ಲಿ ಪಡೆದ ಅನುಭವ ಬಳಿಸಿಕೊಂಡು ಈ ಚಿತ್ರದ ಮೂಲಕ ಶ್ರೀಹರ್ಷ ನಿರ್ದೇಶನ ಮಾಡುತ್ತಿರುವ ಚಿತ್ರ ಇದು. ಚಿತ್ರಕ್ಕೆ ಸೀತಾ ಹರ್ಷವರ್ಧನ್ ಬಂಡವಾಳ ಹಾಕುವ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ “ಪಾರ್ಥನ್ ಪರಪಂಚ” ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಪತ್ರಕತ್ರ್ರರನ್ನು ಆಹ್ವಾನಿಸಲಾಗಿತ್ತು ನಾಯಕನ್ನು ಪೊಲೀಸ್ ವಾಹನದಿಂದ ನ್ಯಾಯಾಲಯಕ್ಕೆ ಕರೆತರುವ ದೃಶ್ಯಗಳನ್ನು ನಿರ್ದೇಶಕ ಶ್ರೀಹರ್ಷ ನಿರ್ದೇಶನದಂತೆ ಛಾಯಾಗ್ರಾಹಕ ಜೈ ಆನಂದ್ ಚಿತ್ರಿಸಿಕೊಳ್ಳುತ್ತಿದ್ದರು. ಬಳಿಕ ತಂಡ ಮಾತಿಗಿಳಿಯಿತು

ನಿರ್ದೇಶಕ ಶ್ರೀಹರ್ಷ ಮಾತನಾಡಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ, ಕೋರ್ಟ್ ಡ್ರಾಮದ ಕಥೆಯನ್ನು ಸಸ್ಪೆನ್ಸ್, ಥ್ರಿಲ್ಲರ್ ಮೂಲಕ ತೆರೆಗೆ ಕಟ್ಟಿಕೊಡುವ ಕೆಲಸ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಆರಂಭವಾಗಿದ್ದು ಕಂಠೀರವ ಸ್ಟುಡಿಯೋದಲ್ಲಿಯೇ ಸರಿ ಸುಮಾರು 10 ರಿಂದ 15 ದಿನಗಳ ಕಾಲ ಚಿತ್ರೀಕರಣ ಮಾಎಲಾಗುವುದು. ಹೊಸ ಬೆಗೆಯ ಕಥೆಯನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶದಿಂದ ಚಿತ್ರ ಮಾಡಲಾಗುತ್ತಿದೆ. ಈ ವರ್ಷವೇ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದರು

ಚಿತ್ರದಲ್ಲಿ ವಿಕಾಶ್ ಉತ್ತಯ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಮಂದಾರ ನಾಯಕಿ, ಉಳಿದಂತೆ ರಂಗಾಯಣ ರಘು, ಸಂಪತ್ ಮೈತ್ರೈಯ, ಕಿರಣ್ ನಾಯಕ್, ಅಮಿತ್ ರಾವ್, ಬಾಬು ಹಿರಣ್ಣಯ್ಯ, ನಟನ ಪ್ರಶಾಂತ್,ಯಮುನಾ ಶ್ರೀನಿಧಿ ಹಾಗು ಸುಹಾಸ್ ಅತ್ರೇಯ ಸೇರಿದಂತೆ ಹಿರಿಯ ಕಿರಿಯ ಕಲಾವಿದರು ಚಿತ್ರದಲ್ಲಿದ್ದು ಉತ್ತಮ ಚಿತ್ರ ನೀಡುವ ಉದ್ದೇಶ ನಮ್ಮದು ಎಂದು ಮಾಹಿತಿ ನೀಡಿದರು

ನಟ ವಿಕಾಶ್ ಉತ್ತಯ್ಯ ಮಾತನಾಡಿ ಅಪಾಯವಿದೆ ಎಚ್ಚರಿಕೆ ಚಿತ್ರಕ್ಕಿಂತ ವಿಭಿನ್ನ ಜಾನರ್ ಸಿನಿಮಾ ಪಾರ್ಥನ್ ಪರಪಂಚ. ಚಿತ್ರದ ಕಥೆ ಕೇಳಿ ಥ್ರಿಲ್ ಆಯಿತು ಹೀಗಾಗಿ ನಟಿಸಲು ಒಪ್ಪಿಕೊಂಡೆ. ವೃತ್ತಿಯಲ್ಲಿ ವಕೀಲನಾಗಿದ್ದೇನೆ,ಆದರೆ ಚಿತ್ರದಲ್ಲಿ ಬೇರೆ ರೀತಿಯ ಪಾತ್ರ ಮಾಡುತ್ತಿದ್ದೇನೆ, ಯಾಕೆ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಬರುತ್ತಾರೆ ಎನ್ನುವುದು ಕುತೂಹಲ ಎಂದು ಒಂದಷ್ಟು ಕ್ಯೂರಿಯಾಸಿಟಿ ಕಾಯ್ದುಕೊಂಡರು.

ನಾಯಕಿ ಮಂದಾರ ಮಾತನಾಡಿ ಕೋರ್ಟ್ ಡ್ರಾಮ ಕಥೆ. ಚಿತ್ರದಲ್ಲಿ ಹೊಸತನವಿದೆ, ಜೆನ್ ಜಿ ತಲೆಮಾರಿನ ಹುಡಗಿಯ ಪಾತ್ರ. ಚಿತ್ರ ನೋಡಿದರೆ ಯುವ ಜನರಿಗೆ ಇಷ್ಟವಾಗಲಿದೆ ಎಂದರು.

ಹಿರಿಯ ನಟ ರಂಗಾಯಣ ರಘು ಮಾತನಾಡಿ ಚಿತ್ರದಲ್ಲಿ ವಕೀಲನ ಪಾತ್ರ ಮಾಡುತ್ತಿದ್ದೇನೆ, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರು ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಉದ್ದೇಶದಲ್ಲಿ ನಂಬಿಕೆ ಇಟ್ಟ ಪಾತ್ರ. ಚೆನ್ನಾಗಿ ಮೂಡಿ ಬರುತ್ತಿದೆ, ಮನದ ಕಡಲು ಚಿತ್ರದ ಬಳಿಕ ಪಾತ್ರಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದೇನೆ. ಪಾತ್ರ ಯಶಸ್ಸು ಕಾಣುತ್ತಿದೆ ಎಂದು ಗೊತ್ತಿದ್ದರೆ ಎಷ್ಟೊತ್ತಿಗೆ ಆಸ್ಕರ್ ಸೇರಿದಂತೆ ಎಲ್ಲ ಪ್ರಶಸ್ತಿಗಳು ಬರುತ್ತಿದ್ದವು ಎಂದರು.

ನಿರ್ಮಾಪಕಿ ಸೀತಾ ಹರ್ಷವರ್ಧನ್ ಮಾತನಾಡಿ ಒಳ್ಳೆಯ ಚಿತ್ರ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು ನಿರ್ದೇಶಕ ಶ್ರೀಹರ್ಷ ಹೇಳಿದ ಕಥೆ ಇಷ್ಟವಾಯಿತು. ಹೀಗಾಗಿ ನಿರ್ಮಾಣ ಮಾಡುತ್ತಿದ್ದೇನೆ, ಜೊತೆಗೆ ಚಿತ್ರದಲ್ಲಿ ಪಾತ್ರವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು

ಕಲಾವಿದರಾದ ಸಂಪತ್ ಮೈತ್ರೈಯಾ ಮಾತನಾಡಿ ಚಿತ್ರದಲ್ಲಿ ಪೋಲೀಸ್ ಪಾತ್ರ. ವಿಭಿನ್ನವಾಗಿದೆ. ಮಾಮೂಲಿ ಪೊಲೀಸ್ ಪಾತ್ರನಾ ಅಥವಾ ಬೇರೆ ಮಾದರಿಯದ್ದಾ ಎನ್ನುವುದನ್ನು ಚಿತ್ರದಲ್ಲಿ ನೊಡಬೇಕು ಎಂದು ಹೇಳಿದರು.

ಮತ್ತೋರ್ವ ನಟ ಅಮಿತ್ ರಾವ್ ಮಾತನಾಡಿ ಪಾತ್ರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದೇನೆ. ಚಿತ್ರದಲ್ಲಿ ಆಸಕ್ತಿಕರವಾದ ಪಾತ್ರ ಮಾಡಿದ್ದೇನೆ. ಒಳ್ಳೆಯ ತಂಡ ಸಿಕ್ಕಿದೆ.ರಂಗಾಯಣ ರಘು ಅವರಂತಹ ಅದ್ಬುತ ನಟರ ಜೊತೆ ಕೆಲಸ ಮಾಡುವ ಅವಕ್ಶ ಸಿಕ್ಕಿದೆ ಎಂದರು

ಕಲಾವಿದ ಕಿರಣ್ ನಾಯ್ಕ್, ಛಾಯಾಗ್ರಾಹಕ ಜೈ ಆನಂದ್, ಸಂಭಾಷಣೆಕಾರ ಮಂಜುನಾಥ್ ಅನಿವಾರ್ಯ ಮತ್ತಿತರರು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin