“ಘಾರ್ಗಾ” ಟ್ರೈಲರ್ ಬಿಡುಗಡೆ: ಫೆಬ್ರವರಿ 6ರಂದು ಸಿನಿಮಾ ಬಡುಗಡೆ
ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಘಾರ್ಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪುತ್ರ ಅರುಣ್ ರಾಮ್ಪ್ರಸಾದ್ ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ. ಘಾರ್ಗಾ ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫಾರ್ಗಾ ಊರಿನ ಹೆಸರಾಗಿದ್ದು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಚಿತ್ರಕ್ಕಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಆಕ್ಷನ್ ಕಟ್ ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ್ಲ ಗೌರವಿಸಲಾಯಿತು.
ಬಳಿಕ ಹಿರಿಯ ನಟ ಸಾಯಿಕುಮಾರ್ ಮಾತನಾಡಿ ಶಶಿಧರ್ ಕಥೆ ಹೇಳಿದ ತಕ್ಷಣ ನಟಿಸಬೇಕು ಅನ್ನಿಸಿತು,ಘಸ್ಟ್ ಟೈಮ್ ಇಂಥ ರೋಲ್ ಮಾಡಿರೋದು. ತನಿಖಾಧಿಕಾರಿಯ ಥರದ ಪಾತ್ರ. ನಿರ್ಮಾಪಕರು ಅಶ್ವಿನಿ ರಾಮ್ ಪ್ರಸಾದ್ ಕನ್ನಡಕ್ಕೆ ಒಳ್ಳೊಳ್ಳೆ ಚಿತ್ರಗಳನ್ನು ಕೊಟ್ಟವರು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ಶಶಿಧರ್ ಮಾತನಾಡಿ ನಿರ್ಮಾಪಕರು ಒಂದೊಳ್ಳೆ ಅವಕಾಶ ಕೊಟ್ಟಿದ್ದಾರೆ. ಸದುಪಯೋಗ ಮಾಡಿಕೊಂಡಿದ್ದೇನೆ. ಜನ ಮೆಚ್ಚುವ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್ಗಳಿವೆ. ಈಟ್ರೈಲರ್ ನೋಡಿದಾಗ ನಿಮಗೆಲ್ಲ ನಂಬಿಕೆ ಬಂದಿರುತ್ತೆ, ಸಿನಿಮಾ ಕೂಡ ಅದೇ ಥರ ಮಾಡಿದ್ದೇನೆ. ನೀವೆಲ್ಲ ಸಿನಿಮಾ ನೋಡಿ, ನಂಬರ್ ಕೊಡ್ತೀನಿ, ಚೆನ್ನಾಗಿದ್ರೆ, ಚೆನ್ನಾಗಿಲ್ಲ ಅಂದ್ರೂ ಕಾಲ್ ಮಾಡಿ ಎಂದರು.
ನಾಯಕ ಅರುಣ್ ಮಾತನಾಡಿ ಕಥೆ ಹೇಳಿದಾಗಲೇ ಕಾನ್ಫಿಡೆನ್ಸ್ ಬಂತು. ಪಾತ್ರ ತುಂಬಾ ವಿಭಿನ್ನವಾಗಿದ್ದು,ಇದಕ್ಕೆ ರೈಟರ್, ಅಂಡರ್ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ, ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್. ನಾನು ಬಣ್ಣ ಹಚ್ಚುವ ಮೊದಲೇ ಕಲರಿಫೈಟ್ಸ್, ಆಕ್ಷನ್, ಡಾನ್ಸ್ ಎಲ್ಲವನ್ನೂ ಕಲಿತು ಬಂದಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ಅಶ್ವಿನಿ ರಾಮ್ಪ್ರಸಾದ್ ಮಾತನಾಡಿ ಕಥೆಗೋಸ್ಕರ ಸಿನಿಮಾ ಮಾಡಿದೆ. ಏನೋ ಕ್ರಿಯೇಟಿವಿಟಿ, ತುಂಬಾ ಸತ್ವ ಇದೆ. ಶಶಿಧರ್ ಕಥೆ ಹೇಳಿದ ರೀತಿ, ತುಂಬಾ ಇಷ್ಟವಾಯ್ತು.ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯಲ್ಲಿದೆ, ಸಿನಿಮಾ ರಿಲೀಸಾದ ಮೇಲೆ ನೀವೇ ನೋಡ್ತೀರಾ, ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು

ವಿತರಕ ಕೆಸಿಎನ್ ಕುಮಾರ್ ಮಾತನಾಡಿ ಫೆಬ್ರವರಿ 6ರಂದು ಸಿನಿಮಾ ಬಡುಗಡೆ ಆಗುತ್ತಿದೆ. ನನ್ನ ಮುಂದಿನ ಸಿನಿಮಾಗೆ ಅವರಿಗೆ ಅಡ್ವಾನ್ಸ್ ಮಾಡಿದ್ದೇನೆ ಎಂದರು.
ಸಂಗೀತ ಸಂಯೋಜಕ, ಆರ್.ಪಿ.ಪಟ್ನಾಯಕ್ ತಾವೇ ಕಂಪೆÇೀಜ್ ಮಾಡಿದ ಹಾಡನ್ನು ಹಾಡಿದರು. ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಿದ್ದರು.

