"Alpha" hits the screens this week #men love vengeance"

ಈ ವಾರ ತೆರೆಗೆ “ಆಲ್ಫಾ” #men love vengeance” - CineNewsKannada.com

ಈ ವಾರ ತೆರೆಗೆ “ಆಲ್ಫಾ” #men love vengeance”

ಒಂದೊಳ್ಳೆ ಕಂಟೆಂಟ್‍ವುಳ್ಳ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಆಲ್ಫಾ#men love vengeance” ಚಿತ್ರ ಈ ಫೆಬ್ರವರಿ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಆನಂದಕುಮಾರ್ ನಿರ್ಮಿಸಿರುವ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ” ಗೀತಾ” ಹಾಗೂ ಧನಂಜಯ್ ನಟನೆಯ “ಗುರುದೇವ ಹೊಯ್ಸಳ” ಚಿತ್ರಗಳ ನಂತರ ವಿಜಯ್ ಅವರು ನಿರ್ದೇಶಿಸಿರುವ ಮೂರನೇ ಚಿತ್ರ “ಆಲ್ಫಾ”

ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ಚಿತ್ರದ ನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಗೋಪಿಕಾ ಸುರೇಶ್ ಹಾಗೂ ಅಯನಾ ನಟಿಸಿದ್ದಾರೆ. ” ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ನಾಗಾರ್ಜುನ ಶರ್ಮ ಬರೆದಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಹೆಸರಾಂತ ಸಂಗೀತ ನಿರ್ದೇಶಕ ಜೆ.ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ, ಅಮರ್ ಕಲಾ ನಿರ್ದೆಶನ ಹಾಗೂ ಭೂಷಣ್ ನೃತ್ಯ ನಿರ್ದೇಶನವಿರುವ ಚಿತ್ರಕ್ಕೆ ಜನಪ್ರಿಯ ಸಂಭಾಷಣೆಗಾರ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳು ಚಿತ್ರದಲ್ಲಿದ್ದು, ವಿಜಯ್, ವಿನೊದ್, ಅರ್ಜುನ್ ರಾಜ್ ಹಾಗೂ ಯೋಗಾನಂದ ಸಾಹಸ ನಿರ್ದೇಶನ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin