ದೇವರಾಜ್ ಕುಮಾರ್- ಸಂಹಿತಾ ವಿನ್ಯಾ ನಟನೆಯ “ಆಯಧ” ಚಿತ್ರ ಮಾರ್ಚ್ 27ಕ್ಕೆ ತೆರೆಗೆ
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ ಆಯುಧ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ದೇವರಾಜ್ ಕುಮಾರ್ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ಚಿತ್ರದಲ್ಲಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಟಿ ಸಂಹಿತಾ ವಿನ್ಯಾ ನಾಯಕಿಯಾಗಿದ್ದು ಮಾರ್ಚ್ 27ರಂದು ಬಿಡುಗಡೆಯಾಗಲಿದೆ.

ಈ ವೇಳೆ ಮಾತಿಗಿಳಿದ ದೇವರಾಜ್ ಕುಮಾರ್ ಮಾತನಾಡಿ ಕಳೆದ ಎರಡು ದಶಕಗಳಿಂದ ಮೇಕಪ್ ಕಲಾವಿದನಾಗಿ ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಯ “ಡೆಂಜರ್ ಜೋನ್” ಚಿತ್ರದ ಮೂಲಕ ನಾಯಕನಾದೆ. ಮೂರು ವರ್ಷಗಳ ಹಿಂದೆ “ತಾಜ್ ಮಹಲ್ 2” ಎಂಬ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದೆ. ಆದರೆ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಡಲಿಲ್ಲ. ಬಹಳ ನಷ್ಟವಾಗಿ ಡಿಪ್ರೆಶನ್ ಗೆ ಹೋದೆ. ಸಿನಿಮಾ ಮಾಡುವುದೇ ಬೇಡ ಅಂದುಕೊಂಡೆ. ಆದರೆ ಈ ನಿರ್ಧಾರ ತುಂಬಾ ದಿನ ಉಳಿಯಲಿಲ್ಲ. ಎರಡು ವರ್ಷಗಳ ಹಿಂದೆ “ಆಯುಧ” ಎಂಬ ಚಿತ್ರದ ನಿರ್ಮಾಣ ಆರಂಭ ಮಾಡಿದೆ ಎಂದರು
ಮೇಕಪ್ ಮಾಡಿ ಬಂದ ಹಣದಿಂದ ಚಿತ್ರ ನಿರ್ಮಾಣ ಮಾಡಿದ್ದೇನೆ. ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮನ್ವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ. ಸ್ಟೀವನ್ ಸತೀಶ್, ಮನದೀಪ್ ಹಾಗೂ ಮಂಜು ಮೂವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಮೂರ್ತಿ ಚಿತ್ರದ ಛಾಯಾಗ್ರಾಹಕರು. ಅಮೃತ ಹಾಗೂ ಸಂಹಿತ ವಿನ್ಯ ನಾಯಕಿಯರು ಎಂದು ಹೇಳಿದರು
ನಾಯಕಿ ಸಂಹಿತಾ ವಿನ್ಯ ಮಾತನಾಡಿ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಮಾರ್ಚ್ 27 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು

ಚಿತ್ರದಲ್ಲಿ ನಟಿಸಿರುವ ಸೂರ್ಯಪ್ರವೀಣ್, ರಘುರಾಜ್ ಮಲ್ನಾಡ್, ಸುನೀಲ್ ಬೀರೂರು, ನಾರಾಯಣ್, ಸುರೇಂದ್ರ ಕುಮಾರ್ ಮುಂತಾದ ಕಲಾವಿದರು, ವಿತರಕ ರಮೇಶ್ ಬಾಬು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

