ಸ್ನೇಹಿತರಿಂದ ಸ್ನೇಹಿತರಿಗಾಗಿ ‘ಮದರ್ ಪ್ರಾಮಿಸ್’ ಡಾಲಿ ಧನಂಜಯ ಅಭಿನಯದ ಹೊಸ ಚಿತ್ರ
ಬಡವರ ಮಕ್ಳು ಬೆಳೀಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಡಿರುವ ನಟ,ನಿರ್ಮಾಪಕ ಡಾಲಿ ಧನಂಜಯ ಬಡವರ ಮಕ್ಕಳ ಜೊತೆಗೆ ತನ್ನೊಂದಿಗೆ ಇರುವ ಗೆಳೆಯರೂ ಬೆಳೀಬೇಕು ಎನ್ನುವ ಕಾಯಕದಲ್ಲಿ ನಂಬಿಕೆ ಇಟ್ಟ ಶರಣ. ಸ್ನೇಹಿತರಿಂದ ಸ್ನೇಹಿತರಾಗಿ ಮಾಡಿದ ಚಿತ್ರ ಇದು

ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಸಿನಿಮಾ ಪ್ರಕಟಿಸಿದ್ದ ಡಾಲಿ ಧನಂಜಯ್, ತಾವೇ ನಟಿಸುತ್ತಿರುವ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶೀರ್ಷಿಕೆ ಏನಿರಬಹುದು ಎನ್ನುವುದನ್ನು ಊಹೆ ಮಾಡಿ ಎಂದು ಸಿನಿಮಾ ಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದ ತಂಡ ಈಗ ಶೀರ್ಷಿಕೆ ಅನಾವರಣ ಮಾಡಿದೆ
ತಾಯಾಣೆ ಎನ್ನುತ್ತಾ ಬಂದ ಡಾಲಿ ಧನಂಜಯ ಮತ್ತು ಗೆಳೆಯರು ಬಡವ ರಾಸ್ಕಲ್ ನಂತರ ಗೆಳೆಯರ ಜೊತೆ ಸೇರಿ ಮಾಡುತ್ತಿರುವ ಹೊಸ ಸಿನಿಮಾ ‘ಮದರ್ ಪ್ರಾಮಿಸ್. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಡಾಲಿ ಗೆಳೆಯ ಹರ್ಷ ಸಿನಿಮಾಗೆ ಬಂಡವಾಳ ಹಾಕಿದ್ದಾರೆ
ಡಾಲಿ ಧನಂಜಯ ಹಾಗೂ ಗೆಳೆಯರು ಸೇರಿ ಮಾಡಿರುವ ಚಿತ್ರ ಮದರ್ ಪ್ರಾಮಿಸ್’. ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಸಿನಿಮಾ ನಿರ್ದೇಶನ ಮಾಡಿದ್ದಾರೆ ಡಾಲಿ ಧನಂಜುಯ ಗೆಳೆಯ ಪೂರ್ಣ ಚಂದ್ರ ಮೈಸೂರು.

ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಆಸಕ್ತಿಕರ ಪೋಸ್ಟರ್ ಬಿಡುಗಡೆ ಮಾಡಿದ್ದರು. ಅದರಲ್ಲಿ ಯಾರ ಮುಖವನ್ನೂ ತೋರಿಸಿರಲಿಲ್ಲ ಬದಲಿಗೆ ನಟರೆಲ್ಲ ಕ್ಯಾಮೆರಾಗಿ ಹಿಮ್ಮುಖವಾಗಿ ನಿಂತಿದ್ದರು. ಸಿನಿಮಾದ ಹೆಸರನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಗಿತ್ತು. ಜೊತೆಗೆ ಸಿನಿಮಾದ ಹೆಸರು ಗೆಸ್ ಮಾಡಿ ಎಂಬ ಸವಾಲನ್ನು ಸಹ ಚಿತ್ರತಂಡ ಪ್ರೇಕ್ಷಕರಿಗೆ ನೀಡಿತ್ತು.
ಈಗ ಸಿನಿಮಾದಲ್ಲಿ ಅಭಿನಯ ಮಾಡಿರುವ ಪ್ರಮುಖ ಪಾತ್ರಧಾರಿಗಳ ಮುಖಗಳನ್ನ ಪರಿಚಯ ಮಾಡಲಾಗಿದೆ.
ಮದರ್ ಪ್ರಾಮಿಸ್ ಇನ್ನುವ ಭಾವನಾತ್ಮಕ ಶೀರ್ಷಿಕೆ ಇಡ್ಟುಕೊಂಡು ಎಮೋಷನಲ್, ಕಾಮಿಡಿ ಹಾಗೂ ಥ್ರಿಲ್ ಇರುವ ಕಥೆಯನ್ನು ತೆರೆ ಮೇಲೆ ತರ್ತಿದ್ದಾರೆ ನಿರ್ದೇಶಕ ಪೂರ್ಣ ಚಂದ್ರ.

ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್ , ಹಿರಿಯ ನಟಿ ವಿನಯಪ್ರಸಾದ್, ಗೀತಾ, ಗುರುದತ್ ಇನ್ನು ಅನೇಕರು ಅಭಿನಯ ಮಾಡಿದ್ದಾರೆ… ಫಸ್ಟ್ ಲುಕ್ ಪೋಸ್ಟರ್ ನಲ್ಲಿಯೇ ಬರೋಬ್ಬರಿ 36 ಮುಖ್ಯ ಕಲಾವಿದರನ್ನ ಪರಿಚಯ ಮಾಡಿದ್ದಾರೆ
ಈ ಸಿನಿಮಾ ಮೂಲಕ ಡಾಲಿ ಧನಂಜಯ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.. ನಿರ್ದೇಶನದ ಜವಾಬ್ದಾರಿ ಪೂರ್ಣ ಚಂದ್ರ ವಹಿಸಿಕೊಂಡಿದ್ದು ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ನಿರ್ದೇಶಕ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.. ರಾಹುಲ್ ರಾಯ್ ಕ್ಯಾಮೆರಾ, ನವನೀತ್ ಶ್ಯಾಮ್ ಸಂಗೀತಾ ನಿರ್ದೇಶನ ಸಿನಿಮಾಗಿದೆ…


