Calender Movie Review : ಸಾಮಾಜಿಕ ಕಳಕಳಿಯ ಮಹಿಳಾ ಪ್ರದಾನ ಚಿತ್ರ ” ಕ್ಯಾಲೆಂಡರ್”
Calender Movie Review : ಸಾಮಾಜಿಕ ಕಳಕಳಿಯ ಮಹಿಳಾ ಪ್ರದಾನ ಚಿತ್ರ ” ಕ್ಯಾಲೆಂಡರ್”
ಚಿತ್ರ ; ಕ್ಯಾಲೆಂಡರ್
ನಿರ್ದೇಶನ : ನವೀನ್ ಶಕ್ತಿ
ತಾರಾಗಣ; ಆದರ್ಶ್ ಗುಂಡೂರಾಜ್, ನಿವಿಷ್ಕಾ ಪಾಟೀಲ್, ಸುಶ್ಮಿತಾ, ಮಾಲಾಶ್ರೀ, ಗುರುನಂದನ್ ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಚಂದ್ರಪ್ರಭ ಮತ್ತಿತರರು
ರೇಟಿಂಗ್ : * 3.5 / 5
ಕನ್ನಡದಲ್ಲಿ ಇತ್ತೀಚೆಗೆ ಸದಭಿರುಚಿಯ ಮತ್ತು ಮಹಿಳಾ ಪ್ರಧಾನ ಚಿತ್ರಗಳ ಆಗೊಮ್ಮೆ..ಹೀಗೊಮ್ಮೆ ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ಕ್ಯಾಲೆಂಡರ್”.
ಮಹಿಳೆಯರ ಋತುಚಕ್ರದ ಹಾಜು ಬಾಜಿನಲ್ಲಿ ನಡೆಯುವ ಅವರ ತುಮುಲ, ತಳಮಳ, ತಲ್ಲಣ ಅದರಿಂದ ಅವರು ಎದುರಿಸುವ ಸಮಸ್ಯೆ ಸವಾಲು, ದೈಹಿಕ ಬದಲಾವಣೆ, ಮಾನಸಿಕ ಯಾತನೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿಕೊಟ್ಟಿರುವ ಚಿತ್ರ ಇದು.
ಋತುಚಕ್ರದ 7 ರಿಂದ 11 ದಿನದ ಸಮಯದಲ್ಲಿ ಮಹಿಳೆಯರ ಮಾನಸಿಕ ಸ್ಥಿತಿಗತಿ ಅದರಿಂದಾಗುವ ಅನಾಹುತ, ಅದಕ್ಕೆ ಪರಿಹಾರ ಹೀಗೆ ಹಲವು ವಿಷಯಗಳನ್ನು ಮನಮುಟ್ಟುವ ರೀತಿ ನಿರ್ದೇಶಕ ನವೀಶ್ ಶಕ್ತಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ನಾಯಕ ನಟನಾಗಿ ಇಡೀ ತೆರೆ ಆವರಿಸಿಕೊಂಡಿರುವ ಆದರ್ಶ್ ಗುಂಡೂರಾಜ್, ಮಹಿಳಾ ಪ್ರದಾನ ಚಿತ್ರದ ಮೂಲಕ ಸಮಾಜಕ್ಕೊಂದು ಸಂದೇಶ ನೀಡುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ಕಥೆ, ಚಿತ್ರದ ಮೂಲಕ ತಿಳಿಸಿರುವ ಮಾಹಿತಿ ಪ್ರಯೋಜನಕಾರಿಯಾಗಿದೆ.
ವೈದ್ಯ ಡಾ. ಆಕಾಶ್ (ಆದರ್ಶ್ ಗುಂಡೂರಾಜ್ ) ಆಸ್ಪತ್ರೆಗಿಂತ ಹೆಚ್ಚಾಗಿ ಕುಡಿತದ ಚಟಕ್ಕೆ ದಾಸನಾಗಿ ಸ್ನೇಹಿತನ. ಬಾರ್ನಲ್ಲಿ ಹೆಚ್ಚು ಸಮಯ ಕಳೆದವ. ಅದಕ್ಕೂ ಕಾರಣವಿದೆ. ಪ್ರೀತಿಸಿದ ಹುಡುಗಿ ನಕ್ಷತ್ರ (ಸುಶ್ಮಿತಾ) ಇದಕ್ಕಿಂತೆ ಮದುವೆ ಮರಿದುಕೊಳ್ಳುತ್ತಾಳೆ. ತನ್ಮದೇ ಆಸ್ಪತ್ರೆಗೆ ಬಂದ ಮಾಳವಿಕ (ನಿವಿಷ್ಕಾ ಪಾಟೀಲ್) ಗಂಡನ ಕೊಲೆ ಪ್ರಕರಣದಲ್ಲಿ ಅಪರಾಧ ಹೊತ್ತವಳು..ಸ್ನೇಹಿತನ ಸಹೋದರಿ ಆತ್ಮಹತ್ಯೆಗೆ ಶರಣಾಗುತ್ತಾಳೆ.. ಸ್ನೇಹಿತನ ಹೆಂಡತಿ ಪತಿಗೆ ಡೈವೋರ್ಸ್ ಕೊಟ್ಟವಳು..
ಕೊಲೆ ಅಪರಾಧ ಬೆನ್ನತ್ತಿದ್ದ ಪೆÇಲೀಸರಿಗೆ ತಲೆ ಕೆಳಗೆ ಮಾಡಿದರೂ ಕಾರಣ ಪತ್ತೆಯಾಗದು. ಈ ಎಲ್ಲಾ ಮಹಿಳೆಯರು ಒಂದೇ ರೀತಿಯ ಸಮಸ್ಯೆಗೆ ಸಿಲುಕಿದವರು. ಅದು ಏನು.. ಬರೀ ಕುಡಿತದ ಚಟಕ್ಕೆ ದಾಸನಾದ ಆಕಾಶ್ ಯಾಕೆ ಹೀಗಾದ ಅದಕ್ಕೆ ಪರಿಹಾರ ಏನು ಮುಂದೇನಾಗಲಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ..
ನಕ್ಷತ್ರ, ಆಕಾಶ, ಸೂರ್ಯನ್ನು ಮುಂದಿಟ್ಟಕೊಂಡು ನಿರ್ದೇಶಕ ನವೀನ್ ಶಕ್ತಿ ಸಾಮಾಜಿಕ ಕಳಕಳಿಯ ಚಿತ್ರವನ್ನು ಜನರ ಮುಂದೆ ಇಟ್ಟಿದ್ದಾರೆ.
ನಟ ಆದರ್ಶ್ ಗುಂಡೂರಾಜ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ, ನಾಯಕನಾಗಿದ್ದರೂ ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಬುದ್ದತೆ ಪ್ರದರ್ಶಿಸಿದ್ಧಾರೆ, ನಾಯಕನಾಗಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ
ನಾಯಕಿಯರಾದ ನಿವಿಷ್ಕಾ ಪಾಟೀಲ್, ಸುಶ್ಮಿತಾ, ಕಲಾವಿದರಾದ ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಚಂದ್ರಪ್ರಭಾ ಮತ್ತಿತರರು ಸಿಕ್ಕ ಪಾತ್ರಕ್ಕ ಜೀವ ತುಂಬಿದ್ದಾರೆ, ಹಿರಿಯ ನಟಿ ಮಾಲಾಶ್ರೀ ಅವರನ್ನು ಚಿತ್ರಕ್ಕೆ ಇನ್ನೂ ಬಳಸಿಕೊಂಡಿದ್ದರೆ ಮತ್ತಷ್ಟು ಚಿತ್ರಕ್ಕೆ ಅನುಕೂಲವಾಗುತ್ತಿತ್ತು
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

