Actor Adarsh ​​Gunduraj's film "Calendar" has been released in Hindi

ನಟ ಆದರ್ಶ್ ಗುಂಡೂರಾಜ್ ನಟನೆಯ “ಕ್ಯಾಲೆಂಡರ್” ಚಿತ್ರ ಹಿಂದಿಯಲ್ಲಿ ಬಿಡುಗಡೆ - CineNewsKannada.com

ನಟ ಆದರ್ಶ್ ಗುಂಡೂರಾಜ್ ನಟನೆಯ “ಕ್ಯಾಲೆಂಡರ್” ಚಿತ್ರ ಹಿಂದಿಯಲ್ಲಿ ಬಿಡುಗಡೆ

ನಟ, ನಿರ್ಮಾಪಕ ಆದರ್ಶ ಗುಂಡುರಾಜ್ ಅಭಿನಯದ “ಕ್ಯಾಲೆಂಡರ್” ಚಿತ್ರ ಕನ್ನಡದಲ್ಲಿ ಏಪ್ರಿಲ್ ಮೊದಲವಾರದಲ್ಲಿ ಬಿಡುಗಡೆಯಾಗಿ ನೋಡುಗರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರ ಏಪ್ರಿಲ್ 24 ರಂದು ಹಿಂದಿ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ

ನಟ , ನಿರ್ಮಾಪಕ ಆದರ್ಶ ಗುಂಡುರಾಜ್ ಮಾತನಾಡಿ ಏಪ್ರಿಲ್ 6 ರಂದು “ಕ್ಯಾಲೆಂಡರ್” ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಮಹಿಳಾ ಪ್ರಧಾನ ಚಿತ್ರದ ಕಂಟೆಂಟ್ ಎಲ್ಲರಿಗೂ ಇಷ್ಟವಾಯಿತು. ಈಗಲೂ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಹೆಸರಾಂತ ವಿ.ಕೆ ಫಿಲಂಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಒಂದೊಳ್ಳೆ ಸಂದೇಶವಿರುವ ಚಿತ್ರ. ನೋಡದೆ ಇರುವವರು ಈಗಲೂ ಚಿತ್ರ ಚಿತ್ರಮಂದಿರಗಳಲ್ಲಿದೆ. ನೋಡಿ. ಓಟಿಟಿ ಹಾಗೂ ವಾಹಿನಿ ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಅದಕ್ಕೂ ಮುನ್ನ ಇದೊಂದು ಯುನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ ಏಪ್ರಿಲ್ 24 ರಂದು ಹಿಂದಿಯಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು

ಬೆಂಗಳೂರು, ಮುಂಬೈ ಮುಂತಾದ ಕಡೆ ಮಲ್ಟಿಪ್ಲೆಕ್ಸ್ ಗಳಲ್ಲಿ ಹಿಂದಿ ಅವತರಣಿಕೆ ಬಿಡುಗಡೆಯಾಗಲಿದೆ. ಈಗಾಗಲೇ ಹಿಂದಿ ಟ್ರೇಲರ್ ಬಿಡುಗಡೆಯಾಗಿದ್ದು, ಜನಪ್ರಿಯವಾಗುತ್ತಿದೆ. ಸದ್ಯದಲ್ಲೇ ವಿದೇಶದಲ್ಲೂ ಸಹ ಈ ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆಯುತ್ತಿದೆ. ಚಿತ್ರ ಆರಂಭದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಮುಂದೆಯೂ ಹೀಗೆ ಇರಲಿ ಎಂದರು

ನಿರ್ದೇಶಕ ನವೀನ್ ಶಕ್ತಿ, ಸಹ ನಿರ್ಮಾಪಕ ಮತ್ತು ನಟ ಶಿವಪ್ರದೀಪ್ ಹಾಗೂ ಸಹ ನಿರ್ದೇಶಕ ಮಹಾಂತೇಶ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin