KVN-Pawan Wadiyar-Shivanna combination film "Bhel" first look unveiled

ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಚಿತ್ರ “ಬೇಲ್ ” ಫಸ್ಟ್ ಲುಕ್ ಅನಾವರಣ - CineNewsKannada.com

ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಚಿತ್ರ “ಬೇಲ್ ” ಫಸ್ಟ್ ಲುಕ್ ಅನಾವರಣ

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನ್ನು ಅಣ್ಣಾವ್ರ ಜನ್ಮೋತ್ಸವದ ಅಂಗವಾಗಿ ಅನಾವರಣ ಮಾಡಲಾಗಿದೆ.

ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ “ಬೇಲ್ ” ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಮಾತನಾಡಿ ಇದು ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಸಿನಿಮಾವಾಗಲಿದೆ. ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದರು.

ನಿರ್ಮಾಪಕ ವೆಂಕಟ್ ಕೋನಂಕಿ ಮಾತನಾಡಿ “ಬೇಲ್’ ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಬಲವಾದ ಕಥೆ ಹೇಳುವಿಕೆ ವಿಶಿಷ್ಟ ಸಿನಿಮೀಯ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸುತ್ತದೆ. ಪವನ್ ಒಡೆಯರ್ ಅವರಂತಹ ಸಾಬೀತಾದ ಕಥೆಗಾರರೊಂದಿಗೆ ಕೈ ಜೋಡಿಸುವುದು ಮತ್ತು ಶಿವಣ್ಣ ಅವರಂತಹ ಐಕಾನ್ ಜೊತೆಗೆ ಕೆಲಸ ಮಾಡುವುದು ಸಂಪೂರ್ಣ ಗೌರವವಾಗಿದೆ ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin