Love genre film “Kirunage” title release: Curiosity increases

ಲವ್ ಜಾನರ್ ಚಿತ್ರ “ಕಿರುನಗೆ” ಶೀರ್ಷಿಕೆ ಬಿಡುಗಡೆ : ಕುತೂಹಲ ಹೆಚ್ಚಳ - CineNewsKannada.com

ಲವ್ ಜಾನರ್ ಚಿತ್ರ “ಕಿರುನಗೆ” ಶೀರ್ಷಿಕೆ ಬಿಡುಗಡೆ : ಕುತೂಹಲ ಹೆಚ್ಚಳ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರ “ಕಿರುನಗೆ” ಸಿನಿಮಾದ ಶೀರ್ಷಿಕೆ ಅನಾವರಣವಾಗಿದೆ. ಡಾ.ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್ ಎ ಗೋವಿಂದರಾಜು ಅವರು ಶೀರ್ಷಿಕೆ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು

ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್.ಕೆ ವಿಶ್ವನಾಥ್, ನಟ ಷಣ್ಮುಖ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಸಹ ಈ ಕ್ಷಣಕ್ಕೆ ಸಾಕ್ಷಿಯಾದರು.

ನಿರ್ದೇಶಕ ಅಶೋಕ್ ಕಡಬ ಮಾತನಾಡಿ, “ಕಿರುನಗೆ” ನನ್ನ ನಿರ್ದೇಶನದ ಆರನೇ ಚಿತ್ರ. ಇದೊಂದು ಲವ್ ಜಾನರ್ ಚಿತ್ರ. ಆದರೆ ತಂದೆ – ತಾಯಿಗಾಗಿ ಮಕ್ಕಳೇ ಪ್ರೀತಿಯನ್ನು ತ್ಯಾಗ ಮಾಡುವ ಕಥಾಹಂದರ ಹೊಂದಿರುವ ಚಿತ್ರ ಹೌದು. ಚಿತ್ರದ ಮೊದಲರ್ಧದ ಕಥೆ ಮದುವೆಮನೆಯಲ್ಲೇ ನಡೆಯುತ್ತದೆ. ನಿರ್ಮಾಪಕಿ ಲತಾಶ್ರೀ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೆÇೀಸ್ಟ್ ಪೆÇ್ರಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ ಎಂದರು

ನೂತನ ಪ್ರತಿಭೆಗಳಾದ ವಿಜಯ್ ರಾಜ್ ಹಾಗೂ ಖುಷ್ಬು ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಶೃತಿ, ಖ್ಯಾತ ನಟ ಅನುಪಮ್ ಖೇರ್ ಸಹೋದರ ರಾಜು ಖೇರ್, ಸಂಗೀತ, ಮೂಗು ಸುರೇಶ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶ್ರೀಶ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್ ರೆಹಮಾನ್ ಬಳಿ ಕಾರ್ಯ ನಿರ್ವಹಿಸಿರುವ ಸುಕೃತ್ ಸಂಗೀತ ನಿರ್ದೇಶನ ಹಾಗೂ ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿರುವ ಈ ಚಿತ್ರದ ಹಾಡುಗಳನ್ನು ನಾಗಾರ್ಜುನ ಶರ್ಮ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು

ನಿರ್ಮಾಪಕಿ ಹಾಗೂ ಕಥೆ ಬರೆದಿರುವ ಲತಾಶ್ರೀ ಡಿ.ಸಿ ಮಾತನಾಡಿ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಸಹಕಾರದಿಂದ ಚಿತ್ರ ನಿರ್ಮಾಣವಾಗಿದೆ. ಪ್ರೀತಿಯನ್ನು ಚಿತ್ರದಲ್ಲಿ ತೋರಿಸಿರುವ ರೀತಿಯೇ ಬೇರೆ. ಹೆಣ್ಣುಮಗಳೊಬ್ಬಳ ಮೇಲೆ ಚಿತ್ರದ ಕಥೆ ಸಾಗುತ್ತದೆ. ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಉತ್ತಮ ಮನೋರಂಜನೆಯುಳ್ಳ ಚಿತ್ರ ಎಂದು ತಿಳಿಸಿದರು.

ನಾಯಕ ವಿಜಯ್ ರಾಜ್ ಮಾಹಿತಿ ನೀಡಿ ಚಿತ್ರದ ಕಥೆ ಬಹಳ ಚಿನ್ನಾಗಿದೆ. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದರು.

ನಾಯಕಿ ಖುಷ್ಬು ಮಾತನಾಡಿ ಅವಕಾಶ ನೀಡಿದವರಿಗೆ ಧನ್ಯವಾದ ತಿಳಿಸಿ, ತಮ್ಮ ಪಾತ್ರದ ಬಗ್ಗೆ ಹಾಗೂ ಪ್ರಮುಖಪಾತ್ರಧಾರಿ ಶ್ರೀಶ ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕ ಸುಕೃತ್, ಛಾಯಾಗ್ರಾಹಕ ಸಿದ್ದು ಕಂಚನಹಳ್ಳಿ, ಹಾಡುಗಳನ್ನು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಕಲಾವಿದರಾದ ಸಂಗೀತ, ಮೂಗು ಸುರೇಶ್ ಮುಂತಾದವರು “ಕಿರುನಗೆ” ಕುರಿತು ಮಾತನಾಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin