Mrtyudevate Movie Review: The Girls' Exchange: A Revenge Story Mrtyudevate

Mrtyudevate Movie Review: ಹುಡುಗಿಯರ ಅದಲು-ಬದಲಿನ ಆವಾಂತರ : ಸೇಡಿನ ಕಥನ ಮೃತ್ಯುದೇವತೆ - CineNewsKannada.com

Mrtyudevate Movie Review: ಹುಡುಗಿಯರ ಅದಲು-ಬದಲಿನ ಆವಾಂತರ : ಸೇಡಿನ ಕಥನ ಮೃತ್ಯುದೇವತೆ

ಚಿತ್ರ: ಮೃತ್ಯುದೇವತೆ
ನಿರ್ದೇಶನ: ನವೀನ್ ಮಹದೇವ್
ತಾರಾಗಣ: ಮಾಹೀನ್ ಕುಬೇರ್, ಮದು ಸೂರ್ಯ, ನವೀನ್ ಮಹದೇವ್,ಸಾರಿಕಾ ರಾವ್, ಡಯಾನ ಜೆಸ್ಸಿಕಾ, ಹಿಮಾ ಮೋಹನ್, ವಿನಯ ಪ್ರಸಾದ್ ಮತ್ತಿತರರು
ರೇಟಿಂಗ್ : *** 3/5

ಹುಡುಗರಿಬ್ಬರು ತಾವು ಪ್ರೀತಿಸಿದ ಹುಡುಗಿಯರನ್ನು ಅದಲು- ಬದಲು ಮಾಡಿಕೊಂಡು ಅದರಿಂದ ಆಗುವ ಅನಾಹುತಗಳನ್ನು ಕುತೂಹಲಕಾರಿಯಾಗಿ ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ ಮೃತ್ಯುದೇವತೆ.

ಕಾಮದ ಹಿಂದೆ ಬಿದ್ದವರಿಗೆ ಮೃತ್ಯುದೇವತೆಯಾಗಿ ಹುಡುಗಿ ಗೋಚರಿಸುತ್ತಾಳೆ ಎನ್ನುವುದನ್ನು ನಿರ್ದೇಶಕ ನವೀನ್ ಮಹದೇವ್ ತೆರೆಗೆ ಕಟ್ಟಿಕೊಟ್ಟಿದ್ದಾರೆ, ಇದಕ್ಕಾಗಿ ಅವರು ಗ್ರಾಮೀಣ ಸೊಗಡು, ಹಳ್ಳಿಪರಿಸರ, ಗಾಂಜಾ ಬೆಳೆ, ಹುಡುಗರ ಮೋಜು-ಮಸ್ತಿಯನ್ನು ಚಿತ್ರದಲ್ಲಿ ಸೇರಿಸಿ ತೆರೆಗೆ ತಂದಿದ್ಧಾರೆ.

ಶ್ರೀಮಂತ ಯುವಕ ಕಿಶೋರ್ (ಮಾಹೀನ್ ಕುಬೇರ್) ಮೋಜು ಮಸ್ತಿಯಲ್ಲಿ ಕಾಲ ಕಳೆದವ, ಅವನಿಗೊಬ್ಬ ಗೆಳೆಯ ಅನೂಶ್ (ಮಧು ಸೂರ್ಯ) ಇರಿಬ್ಬರಿಗೂ ದೀಪಾ (ಡಯಾನ ಜೆಸ್ಸಿಕಾ) ಆರತಿ (ಸಾರಿಕಾ ರಾವ್) ಸ್ನೇಹಿತರು, ದೀಪಾ ಜಾಲಿ ಮೂಡ್‍ನಲ್ಲಿದ್ದರೆ ಆರತಿ ಶಿಸ್ತಿನಿಂದ ಇರುವಾಕೆ, ಕಷ್ಟಪಟ್ಟು ದುಡಿದು ಮೇಲೆ ಬರಬೇಕು ಎನ್ನುವ ಕನಸು ಕಟ್ಟಿಕೊಂಡವಳು.

ಇಬ್ಬರು ಸ್ನೇಹಿತರು ತಮ್ಮ ಹುಡುಗಿಯರನ್ನು ಅದಲು ಬದಲು ಮಾಡಿಕೊಂಡ ನಂತರ ನಡೆಯುವ ಘಟನೆ, ಆವಾಂತರಗಳ ಸರಮಾಲೆ , ಅದರಿಂದ ಪಾರಾಗಲು ಮಾಡುವ ತಂತ್ರಗಳೇನು, ಇಲ್ಲ ಅವರು ಮಾಡಿದ ತಂತ್ರದಲ್ಲಿಯೇ ಸಿಲುಕುತ್ತಾರಾ, ಮೃತ್ಯುದೇವತೆ ಆಗಮನ ಆಗುವುದ ಯಾಕೆ ಎನ್ನುವ ವಿಷಯ ಕುತೂಹಲಕಾರಿ..ಅದನ್ನು ಸಿನಿಮಾದಲ್ಲಿ ನೋಡಿದರೆ ಚೆನ್ನ

ನಿರ್ದೇಶಕ ನವೀನ್ ಮಹಾದೇವ್, ನಿರ್ದೇಶನ, ನಿರ್ಮಾಣ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ, ಈ ಮಟ್ಟಿಗೆ ಅವರು ಖುಷಿಪಡಬಹುದು, ಉಳಿದಂತೆ ಸರಳವಾದ ಎಳೆಯನ್ನು ಮುಂದಿಟ್ಟುಕೊಂಡು ಎರಡೂವರೆ ಗಂಟೆ. ಸೇಡಿನ ಸಿನಿಮಾ ಕಟ್ಟಿಕೊಟ್ಟಿದ್ದಾರೆ

ನಾಯಕರಾದ ಮಾಹೀನ್ ಮತ್ತು ಮಧು ಕುಡಿತದಲ್ಲಿಯೇ ಇಡೀ ಸಿನಿಮಾ ಕಳೆದಿದ್ಧಾರೆ, ಡಯಾನ ಜೆಸ್ಸಿಕಾ, ಸಾರಿಕಾ ರಾವ್ ಪೈಕಿ, ಸಾರಿಕಾಗೆ ಹೆಚ್ಚು ಪಾತ್ರದಲ್ಲಿ ಅವಕಾಶ ನೀಡಲಾಗಿದೆ, ನಿರ್ದೇಶಕ ನವೀನ್ ಮಹದೇವ್, ಹಿರಿಯ ನಟಿ ವಿನಯ ಪ್ರಸಾದ್, ಹಿಮಾ ಮೋಹನ್ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ

ಶಿಯೋಮ್ ಪ್ರಸಾದ್ ಸಂಗೀತ, ಅನಿರುದ್ದ್ ಜೈ ಕುಮಾರ್ ಕ್ಯಾಮರ ಚಿತ್ರಕ್ಕಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin