ModaKavida Vatavarana Movie Review: ವಿಭಿನ್ನ ಪ್ರೇಮಕಥೆಯ ಕುತೂಹಲಕಾರಿ ಚಿತ್ರ
ಚಿತ್ರ: ಮೋಡಕವಿದ ವಾತಾವರ
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ಶೀಲಮ್ ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ, ರೇಖಾ, ರಿಷಿ ಮತ್ತಿತರರು
ರೇಟಿಂಗ್ : *** 3.5/ 5
ನಿರ್ದೇಶಕ ಸಿಂಪಲ್ ಸುನಿ ಪ್ರತಿಭಾರಿಯೂ ಸಿನಿಮಾ ಮಾಡುವಾಗ ವಿಭಿನ್ನ ಕಥೆ ಮತ್ತು ವಿಷಯವನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಜನ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ, ಇದೀಗ ಅವರ ಬತ್ತಳಿಕೆಯಿಂದ ಮೂಡಿಬಂದ ಮತ್ತೊಂದು ಹೊಸ ಬಗೆಯ ಕಥೆ ವಿನೂತನ ಚಿತ್ರ “ಮೋಡಕವಿದ ವಾತಾವರಣ”.
ಸೀಮಿತ ಪಾತ್ರಗಳನ್ನು ಮುಂದಿಟ್ಟುಕೊಂಡು ರಿಸರ್ವ್ ಸ್ಕ್ರೀನ್ ಪ್ಲೇ ಶೈಲಿಯಲ್ಲಿ ಸೈನ್ಸ್ ಪಿಕ್ಷನ್ ಕಥೆಯೊಂದಿಗೆ ಮುದ್ದಾದ ಪ್ರೇಮಕಥೆಯನ್ನು ಜನರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ನಾಯಕ ಮತ್ತು ನಾಯಕಿಯರು ಹಾಗು ಒಂದೆರಡು ಪಾತ್ರಗಳ ಸುತ್ತ ಕುತೂಹಲಕಾರಿ ಕಥೆಯ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ತಾವು ಆಯ್ಕೆ ಮಾಡಿಕೊಂಡ ಕತೆಯನ್ನು ಜನರಿಗೆ ತಲುಪಿಸಲು ಆಯ್ಕೆ ಮಾಡಿಕೊಂಡಿರುವುದು ಸುಂದರ ಪರಿಸರ ಮತ್ತು ಮಳೆಯ ಹಿನ್ನೆಲೆಯನ್ನು. ಪ್ರೇಮಕಥೆಯನ್ನು ಜನರ ಮುಂದಿಡಲು ಸುಂದರ ದೃಶ್ಯಕಾವ್ಯದಂತೆ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ.ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ. ಅದಕ್ಕೆ ಪೂರಕವಾಗಿ ಸಂತೋಷ್ ರೈ ಪಾತಾಜೆ ಕ್ಯಾಮರ ಕೆಲಸ ಚಿತ್ರಕ್ಕೆ ಮತ್ತಷ್ಟು ಫ್ಲಸ್ ಪಾಯಿಂಟ್.
ಆತ ಚೇತನಾ-ಹರೀಶ್ ದಂಪತಿಯ ಪುತ್ರ ಚೆರೀಶ್ ( ಶೀಲಮ್ ಸ್ವಾಮಿ) ಈಕೆ ಸಾತ್ವಿಕಾ (ಸಾತ್ವಿಕಾ) ಶಾಲಾ ದಿನಗಳಿಂದ ಸ್ನೇಹಿತರು, ಪ್ರೀತಿಯ ನಿವೇದನೆ ಮಾಡಿಕೊಂಡು ಅದರಲ್ಲಿ ವಿಫಲರಾದವರು ಆದರೂ ಅವರು ಮಾಡಿಕೊಳ್ಳಬೇಕಾದ ಕೆಲಸ ಮಾಡಿಕೊಂಡವರು.ಯಾವಾಗ ಕಿತ್ತಾಡುತ್ತಾರೆ ಒಂದಾಗುತ್ತಾರೆ ಎನ್ನುವುದೇ ಅವರಿಗೆ ಗೊತ್ತಿಲ್ಲ, ಇಬ್ಬರ ಮದ್ಯ ಇರುವ ಸಮಸ್ಯೆ ಬಗೆಹರಿಸಿಕೊಳ್ಳಲು ರೆಸಾರ್ಟ್ ಬರ್ತಾರೆ.
ಮತ್ತೊಂದೆಡೆ ಅಪ್ಪ-ಅಮ್ಮನ ಮಾತಿಗೆ ಕಟ್ಟುಬಿದ್ದು ಅಪ್ಪನ ಸ್ನೇಹಿತನ ಮಗನ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸೌಪರ್ಣಿಕಾ (ಮೋಕ್ಷಾ ಕುಶಾಲ್) ಅದೇ ರೆಸಾರ್ಟ್ಗೆ ಅದೇ ದಿನ ಬರ್ತಾರೆ, ಅಲ್ಲಿಂದ ಈ ಜೋಡಿ, ಆ ಜೋಡಿ ನಡುವೆ ಮುಂದೇನು.. ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಬೇಟೆ ಮತ್ತು ಬೇಟೆಗಾರ ಜೊತೆಯಾಗಿ ಸಾಗುವ ಕೂತೂಹಲಕಾರಿ ಕಥೆಯಲ್ಲಿ ಬೇಟೆ ಯಾರು, ಬೇಟೆಗಾರ ಯಾರು ಎನ್ನುವುದನ್ನು ಕಡೆತನ ಸಸ್ಪೆನ್ಸ್. ಸಿನಿಮಾ ನೋಡುವ ಮಂದಿಗೆ ಅವರಿರಬಹುದಾ ಇಲ್ಲ ಇವರೇ ಇರಬಹುದಾ ಎನ್ನುವ ಕುತೂಹಲ.
ಕಾಪಾಡಿಕೊಂಡಿದಾರೆ ನಿರ್ದೇಶಕ ಸಿಂಪಲ್ ಸುನಿ, ಅಷ್ಟಕ್ಕೂ ಮಾನಸಿಕ ರೋಗದಿಂದ ಬಳಲುವರು ಯಾರು ಎನ್ನವುದನ್ನು ಚಿತ್ರದಲ್ಲಿಯೇ ನೋಡಬೇಕು. ಹಳೆಬರಿಗೆ ವಿದಾಯ ಹೇಳಿ ಹೊಸಬರನ್ನು ಬರಮಾಡಿಕೊಳ್ಳುವುದು ಆದಾಯ ಎನ್ನುವ ಪ್ರೀತಿಯ ಅಂಶಗಳಿವೆ. ಜೊತೆಗೆ ಕ್ರಿಕೆಟ್ ಮೇಲೆ ಇರುವ ಪ್ರೀತಿಯನ್ನು ಸಮಯ ಸಂದರ್ಭಕ್ಕೆ ಸಂಭಾಷಣೆಯನ್ನು ತಕ್ಕಂತೆ ಬಳಸಿಕೊಂಡಿದ್ದಾರೆ. ಜೊತೆಗೆ ನವಿರಾದ ಕಚಗುಳಿ ಇಡುವ ಸಂಭಾಷಣೆಗಳು ಗಮನ ಸೆಳೆದಿವೆ.
ನಾಯಕ ಶೀಲಮ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ಧಾರೆ, ತಮ್ಮ ಗುರು ಹಾಗು ನಿರ್ದೇಶಕ ಸಿಂಪಲ್ ಸುನಿ ಅವರ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮತ್ತೊಬ್ಬ ಭರವಸೆಯ ನಾಯಕ. ಅಬ್ಬರವಿಲ್ಲದೆ ಮನಸ್ಸಿಗೆ ಇಷ್ಟವಾಗ್ತಾರೆ.
ಇನ್ನೂ ನಾಯಕಿಯರಲ್ಲಿ ಮೋಕಾ ಕುಶಾಲ್, ಎರಡು ವಿಭಿನ್ನ ಶೇಡ್ನಲ್ಲಿ ಗಮನ ಸೆಳೆದಿದ್ದಾರೆ, ನಟಿ ಸಾತ್ವಿಕಾ ಕೂಡ, ಇಬ್ಬರೂ ನಟಿಯರು ಗ್ಲಾಮರ್ ಅಷ್ಟೇ ಅಲ್ಲ ನಟನೆಯಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ
ಹಿರಿಯ ನಟಿ ರೇಖಾ ಹಾಗು ಅತಿಥಿ ಪಾತ್ರದಲ್ಲಿ ರಿಷಿ ತಮ್ಮ ಕೆಲಸ ಮಾಡಿದ್ದಾರೆ. ವಿಭಿನ್ನ ಬಗೆಯ ಸಿನಿಮಾ ಬಯಸುವ ಮಂದಿಗೆ ಮೋಡ ಕವಿದ ವಾತಾರಣ ಹೊಸ ಅನುಭವ ನೀಡಲಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

