“ಪ್ರೇಮದ ಊರಲಿ” ಚಿತ್ರದ ‘ಬಾನಲಿ ಜಾರಿದ..” : ಹಾಡು ಬಿಡುಗಡೆ

ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಸ್ಯಾಂಡಲ್‍ವುಡ್‍ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವಪ್ರೇಮದ ಊರಲಿ’ ಚಿತ್ರದ ಟೈಟಲ್ ಟ್ರ್ಯಾಕ್ ಗಮನ ಸೆಳೆದ ಬೆನ್ನಲ್ಲೇ “ಬಾನಲಿ ಜಾರಿದ…” ಹಾಡು ಬಿಡುಗಡೆಯಾಗಿ ಗಮನ ಸೆಳೆದಿದೆ.

ಸುಮಧುರ ಪ್ರಣಯ ಯುಗಳ ಗೀತೆಯಲ್ಲಿ ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ.

ಚಿತ್ರದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಸಾಥ್ ನೀಡಿದ್ದಾರೆ. ಹಿರಿಯ ನಟ ರಂಗಾಯಣ ರಘು ನಾಯಕನ ತಂದೆಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಮತಾ ದೇವೇಂದ್ರ ಎಂ, ಪ್ರಶಾಂತ ಡಿ.ಎಸ್ ಮತ್ತು ರಮೇಶ ಎನ್ ಚಿತ್ರ ನಿರ್ಮಿಸಿದ್ದು, ರಾಜಕಾಂತ್ ಎಸ್.ಕೆ ಛಾಯಾಗ್ರಹಣ ಮತ್ತು ಹರ್ಷಿತ್ ಪ್ರಭು ಸಂಕಲನವಿರುವ ಸಿನಿಮಾ ಸದ್ಯದಲ್ಲೇ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.

Related Posts

‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ : ಕೆಆರ್ ಜಿ ಸ್ಟುಡಿಯೋಸ್ ವಿತರಣೆ

ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾದ…

ಕದ್ರಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬ್ರೋ ಗೌಡ’ ಪ್ರವೇಶ

ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಕನ್ನಡಿಗರ ಮನೆಮಾತಾಗಿ, ಬಳಿಕ ಲಕ್ಷ್ಮೀ ಬಾರಮ್ಮ’,ಅಗ್ನಿಸಾಕ್ಷಿ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟ ಶಮಂತ್ ಬ್ರೋ ಗೌಡ, ಇದೀಗ ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ರಾಘು’…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581