ಯುವ ನಟ ಮಿಲಿಂದ್ ಗೌತಮ್ ಹೊಸ ಚಿತ್ರಕ್ಕೆ ಚಂಡ್ರಚೂಡ್ ನಿರ್ದೇಶನ
ಮಯೂರ ಮೋಷನ್ ಪಿಕ್ಚರ್ಸ್‍ನ ನಿರ್ಮಾಪಕ ಹಾಗು ವಿತರಕೂ ಆಗಿರುವ ಮಂಜುನಾಥ್ ಡಿ ಅವರು “ಅನ್ ಲಾಕ್ ರಾಘವ “ ಚಿತ್ರದ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಈ ಸಿನೆಮಾಗೆ ಡಿ. ಜೆ. ಚಕ್ರವರ್ತಿ (ಚಂದ್ರಚೂಡ್) ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಖ್ಯಾತಿ, ಚಳುವಳಿ, ಬರಹಗಾರ, ನಿರ್ದೇಶಕ ಚಕ್ರವರ್ತಿ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರ ಹುಟ್ಟುಹಬ್ಬದಂದು ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

“ಅನ್ ಲಾಕ್ ರಾಘವ” ನಂತರ ಮಿಲಿಂದ್ ಗೌತಮ್ ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ.

ಹೊಸ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಂಜುನಾಥ್ ಡಿ, ಇದೇ ತಿಂಗಳ 18ರಂದು ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 ರಂದು ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮಾಡಲಾಗುವುದು.ಅಂದೇ ಚಿತ್ರದ ಇನ್ನಷ್ಟು ಮಾಹಿತಿ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ಲಕ್ಕಿ ನಂಬರ್ ಎನ್ನುವ ಕಾರಣಕ್ಕೆ ಸದ್ಯಕ್ಕೆ 42 ಎನ್ನುವ ನಂಬರ್ ಇಟ್ಟಿದ್ದೇವೆ. ಚಿತ್ರದ ಶೀರ್ಷಿಕೆ, ಕಥೆ, ಯಾವ ಜಾನರ್ ಸಿನಿಮಾ ಎನ್ನುವುದನ್ನು ನಿರ್ದೇಶಕರೇ ಮಾಹಿತಿ ನೀಡುತ್ತಾರೆ. ಚಿತ್ರವನ್ನು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದು ಮಾಹಿತಿ ಹಂಚಿಕೊಂಡರು.
ವೀಕೆಂಡ್, ಮ್ಯಾನ್ ಆಫ್ ದಿ ಮ್ಯಾಚ್, ಉದ್ಘರ್ಷ, ಅನ್ ಲಾಕ್ ರಾಘವ ನಂತರ ಇದು ಐದನೇ ನಿರ್ಮಾಣದ ಚಿತ್ರ ಒಳ್ಳೆಯ ಚಿತ್ರ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮಾಹಿತಿ ನೀಡಿದರು

ಚಿತ್ರದ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ ನಿಮಗೊಂದು ಅಪರೂಪದ ವಿಷಯ ಸಿಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.
ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.

