ಕನ್ನಡದಲ್ಲೊಂದು ಹೊಸ ಪ್ರಯತ್ನದ ಚಿತ್ರ “ಸಿಬಿಲ್ ಸ್ಕೋರ್”
ಕನ್ನಡ ಚಿತ್ರರಂಗದಲ್ಲೀಗ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಮೂಲಕ ರಾಜ್ಯ ಮಾತ್ರವಲ್ಲ ಹೊರ ರಾಜ್ಯ, ಹಾಗು ದೇಶದೆಲ್ಲೆಡೆ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ,
ಕಳೆದ ವರ್ಷ ತೆರೆಕಂಡು ಗಮನ ಸೆಳೆದಿದದ್ “ಶುಗರ್ ಲೆಸ್” ಚಿತ್ರ ನಿರ್ದೇಶನ ಮಾಡಿದ್ದ ಕೆ.ಎಂ ಶಶಿಧರ್ ಇದೀಗ ನಿರ್ಮಾಪಕರೂ ಕೂಡ. ಇದೀಗ ಹೊಸ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಶುಗರ್ ಲೆಸ್ ಜೊತೆಯಲ್ಲಿ ಇದೇ ವರ್ಷ ತೆರೆಕಂಡ “ವೀರಂ” ಸಿನಿಮಾ ಕೂಡ ನಿರ್ಮಾಣ ಮಾಡಿ ಸೈನಿಸಿಕೊಂಡಿದ್ದರು. ಮತ್ತೆ ರಾಮಾಚಾರಿ 2.0 ಸಿನಿಮಾ ಕೂಡ ಶಶಿಧರ್ ಅವರ ಸ್ನೇಹಿತರ ಬಳಗದಿಂದ ಬಂದ ಚಿತ್ರ.
ಸಿನಿಮಾದ ಆಳ ಅಗಲ ಅರಿತಿರುವ ಶ್ರೀಧರ್ ಇದೀಗ ವಿಭಿನ್ನವಾಗಿ ಯೋಚಿಸಿ, ಚಿತ್ರರಸಿಕನ ಮನದಾಳ ಅರಿತು ಕೆಲವು ಕಥೆಗಳಿಗೆ ಜೀವ ತುಂಬಲು ಮುಂದಾಗಿದ್ದಾರೆ. ಅದುವೇ “ಸಿಬಿಲ್ ಸ್ಕೋರ್”. ಚಿತ್ರ. .ಕಥೆಯ ಟೈಟಲ್ ವಿಭಿನ್ನವಾಗಿದ್ರು ಕೂಡ, ಇದು ಸಾಕಷ್ಟು ಅನುಭವವುಳ್ಳ ಟೀಮ್ ನಿಂದ ತಯಾರಾಗಿರುವ ಕಥೆ.
ಇಎಫ್ ಜಿ ಸಂಸ್ಥೆ ಅಡಿಯಲ್ಲಿ , ಶಶಿಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾಗೆ ಕ್ರಿಯೇಟಿವ್ ಪ್ರೆಡ್ಯೂಸರ್ ರಾಗಿ ವಿವೇಕ್ ಶ್ರೀಕಂಠಯ್ಯ, ಎಕ್ಸಿಕ್ಯೂಟಿವ್ ಪ್ರೆಡ್ಯೂಸರ್ ಆಗಿ ವಿಕ್ರಂ ಶಂಕರ್, ಸೇರಿದಂತೆ ಈ ಸಿನಿಮಾದ ಹಿಂದೆ ಹಲವರ ಶ್ರಮ ಇದೆ. ಸದ್ಯದಲ್ಲಿಯೇ ಚಿತ್ರದ ಮತ್ತಷ್ಟು ಮಾಹಿತಿ ನೀಡಲು ನಿರ್ದೇಶಕ ಶಶಿಧರ್ ಮತ್ತವರ ತಂಡ ಮುಂದಾಗಿದೆ.