Cocktail Hero's New Movie “Horihabba”

ಕಾಕ್ಟೈಲ್ ನಾಯಕನ ಹೊಸ ಚಿತ್ರ “ಹೋರಿಹಬ್ಬ” - CineNewsKannada.com

ಕಾಕ್ಟೈಲ್ ನಾಯಕನ ಹೊಸ ಚಿತ್ರ “ಹೋರಿಹಬ್ಬ”

‘ಕಾಕ್ಟೈಲ್’ ಚಿತ್ರ ಯಶಸ್ವಿಗೊಂಡ ಕಾರಣ ನಾಯಕ ವಿರೇನ್ ಕೇಶವಗೆ ಅವಕಾಶಗಳು ಬರುತ್ತಿದೆ. ಅಲ್ಲದೆ ಚಿತ್ರರಂಗದ ‘ನವ ಪ್ರತಿಭೆ ಉತ್ತಮ ಕಲಾವಿದ’ ನೆಂಬ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಹೋರಿ ಹಬ್ಬ’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕರ್ನಾಟಕ ರೈತ ಜನಾಂಗದ ಬಲು ದೊಡ್ಡ ಮನರಂಜನೆ, ರೋಮಾಂಚನದ ಗ್ರಾಮೀಣ ಸೊಗಡಿನ ದೊಡ್ಡ ಹಬ್ಬಕ್ಕೆ ಶೀರ್ಷಿಕೆ ಹೆಸರಿನಲ್ಲಿ ಕರೆಯುತ್ತಾರೆ. ಇದು ನಮ್ಮ ನಾಡಿನ ಸಡಗರ, ಅಭಿಮಾನ, ಪ್ರತಿಷ್ಟೆ, ಭಾವನೆ, ಪ್ರೀತಿ, ಸಾಹಸಗಳ ಹೂರಣ ಹಾಗೂ ಸಿರಿ ಸಂಸ್ಕ್ರತಿ ಸಂಪ್ರದಾಯದ ಹಿರಿಮೆಯಾಗಿರುತ್ತದೆ.

ವಿಜಯಲಕ್ಷೀ ಬ್ಯಾನರ್ ಅಡಿಯಲ್ಲಿ ಡಾ.ಶಿವಪ್ಪ ಮತ್ತು ಧಾರವಾಡದ ಖ್ಯಾತ ವಾಸ್ತುಶಿಲ್ಪಿ ಪಿರೋಜ್ ನದಾಫ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕರ ಹೆಸರನ್ನು ಮುಹೂರ್ತ ಸಂದರ್ಭದಲ್ಲಿ ತಿಳಿಸಲಾಗುವುದೆಂದು ತಂಡವು ಹೇಳಿಕೊಂಡಿದೆ.

ನಾಯಕಿ, ಕಲಾವಿದರು, ತಂತ್ರಜ್ಘರ ವಿವಿರಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ. ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿಕೊಂಡಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಅಲ್ಲದೆ ಇಂಗ್ಲೀಷ್ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವುದು ವಿಶೇಷ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin