Sivakarthikeyan - Murugadoss duo's film titled 'Madrasi

ಶಿವಕಾರ್ತಿಕೇಯನ್ – ಮುರುಗದಾಸ್ ಜೋಡಿಯ ಚಿತ್ರಕ್ಕೆ ಚಿತ್ರಕ್ಕೆ ‘ಮದರಾಸಿ ಶೀರ್ಷಿಕೆ - CineNewsKannada.com

ಶಿವಕಾರ್ತಿಕೇಯನ್ – ಮುರುಗದಾಸ್ ಜೋಡಿಯ ಚಿತ್ರಕ್ಕೆ ಚಿತ್ರಕ್ಕೆ ‘ಮದರಾಸಿ ಶೀರ್ಷಿಕೆ

ಅಮರನ್ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದರಾಸಿ ಎಂಬ ಹೊಸ ಚಿತ್ರ ಘೋಷಣೆಯಾಗಿದೆ

ಮೊದಲ ಬಾರಿಗೆ ಶಿವಕಾರ್ತಿಕೇಯನ್ ಎ.ಆರ್.ಮುರುಗದಾಸ್ ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹೊಸ ಚಿತ್ರಕ್ಕೆ ಮದರಾಸಿ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ..

ಫೆ.17 ಶಿವಕಾರ್ತಿಕೇಯನ್ ಜನ್ಮದಿನ. ಅವರ ಹುಟ್ಟುಹಬ್ಬದ ಪ್ರಯುಕ್ತ ಮದರಾಸಿ ಸಿನಿಮಾದ ಆಕ್ಷನ್ ಪ್ಯಾಕ್ಡ್ ಗ್ಲಿಂಪ್ಸ್ ಅನಾವರಣ ಮಾಡಲಾಗಿದೆ. ಮಾಸ್ ಅವತಾರದಲ್ಲಿ ಶಿವಕಾರ್ತಿಕೇಯನ್ ಅಬ್ಬರಿಸಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಸುದೀಪ್ ಎಲಾಮನ್ ಕ್ಯಾಮೆರಟ ವರ್ಕ್, ರಾಕ್ ಸ್ಟಾರ್ ಅನಿರುದ್ದ್ ರವಿಚಂದರ್ ಗ್ಲಿಂಪ್ಸ್ ಶ್ರೀಮಂತಿಕೆ ಹೆಚ್ಚಿಸಿದೆ.

ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಅಭಿನಯಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಮದರಾಸಿ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin