Tender love story Dono in Rajshree Productions

ರಾಜ್‌ಶ್ರೀ ಪ್ರೊಡಕ್ಷನ್ಸ್‌ದಲ್ಲಿ ನವಿರಾದ ಪ್ರೇಮಕಥೆ ದೋನೊ - CineNewsKannada.com

ರಾಜ್‌ಶ್ರೀ ಪ್ರೊಡಕ್ಷನ್ಸ್‌ದಲ್ಲಿ ನವಿರಾದ ಪ್ರೇಮಕಥೆ ದೋನೊ

75 ವರ್ಷ ಇತಿಹಾಸ ಇರುವ ಬಾಲಿವುಡ್‌ನ ರಾಜ್‌ಶ್ರೀ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಹಲವು ಕಲಾವಿದರು ಪಾದಾರ್ಪಣೆ ಮಾಡಿ, ಖ್ಯಾತರಾಗಿದ್ದಾರೆ.

ಸೂರಜ್.ಆರ್.ಬರ್ಜಾತ್ಯ ನಿರ್ದೇಶನದ ’ಮೈನೆ ಪ್ಯಾರ್ ಕಿಯಾ’ ಚಿತ್ರದಲ್ಲಿ ಸಲ್ಮಾನ್‌ಖಾನ್ ಮತ್ತು ಭಾಗ್ಯಶ್ರೀ ನಟಿಸಿದ್ದು, 1989ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಬರೋಬ್ಬರಿ 3 ದಶಕದ ನಂತರ ಇವರ ಪುತ್ರ ಅವ್ನಿಶ್.ಎಸ್.ಬರ್ಜಾತ್ಯ ಆಕ್ಷನ್ ಕಟ್ ಹೇಳಿರುವ ’ದೋನೊ’ ಸಿನಿಮಾವು ನವಿರಾದ ಪ್ರೇಮಕಥೆಯನ್ನು ಹೊಂದಿದೆ. ಇಬ್ಬರು ಅಪರಿಚಿತರು, ಒಂದು ಗುರಿ ಅಂತ ಇಂಗ್ಲೀಷ್‌ನಲ್ಲಿ ಅಡಿಬರಹವಿದೆ.
ಸನ್ನಿಡಿಯೋಲ್ ಕಿರಿಯ ಪುತ್ರ ರಾಜ್‌ವೀರ್ ಡಿಯೋಲ್ ಮತ್ತು ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ್ದ ನಟಿ ಪೊನಮ್‌ದಿಲ್ಲನ್-ಅಶೋಕ್‌ಥಾಕರಿಯಾ ಪುತ್ರಿ ಪಲೋಮ ಅಭಿನಯಿಸಿರುವುದು ವಿಶೇಷ. ಶೀರ್ಷಿಕೆ ಹೇಳುವಂತೆ ಸಿನಿಮಾವು ಮುಗ್ದತೆ, ಪ್ರೀತಿ ಹಾಗೂ ಜೀವನದ ಕಥೆಯಾಗಿದೆ.


59ನೇ ಚಿತ್ರಕ್ಕೆ ಬಂಡವಾಳ ಹೂಡಿರುವ ರಾಜ್‌ಶ್ರೀ ಸಂಸ್ಥೆ ಜತೆಗೆ ಜಿಯೋ ಸ್ಟುಡಿಯೋಸ್ ಸಹಯೋಗದಲ್ಲಿದೆ. ಕಮಲ್‌ಕುಮಾರ್ ಬರ್ಜಾತ್ಯ, ಲೇಟ್ ರಾಜ್‌ಕುಮಾರ್ ಬರ್ಜಾತ್ಯ ಮತ್ತು ಅಜಿತ್‌ಕುಮಾರ್ ಬರ್ಜಾತ್ಯ ನಿರ್ಮಾಣ ಮಾಡಿದ್ದು, ಸೂರಜ್.ಆರ್.ಬರ್ಜಾತ್ಯ ಕ್ರಿಯೇಟೀವ್ ಹೆಡ್ ಆಗಿರುತ್ತಾರೆ. ಪ್ರಚಾರದ ಮೊದಲ ಹಂತವಾಗಿ 1.11 ನಿಮಿಷದ ಟೀಸರ್‌ನ್ನು ಬಿಡಲಾಗಿದೆ. ಮದುವೆ ಮನೆಯ ಸುಂದರ ದೃಶ್ಯಗಳು, ನಾನು ದೇವ್, ವರನ ಸ್ನೇಹಿತ, ನನ್ನ ಹೆಸರು ಮೇಘನಾ ವಧುವಿನ ಗೆಳತಿ ಅಂತ ಇಬ್ಬರು ಸಮುದ್ರ ಕಡಲ ತೀರದಲ್ಲಿ ಪರಿಚಯ ಮಾಡಿಕೊಳ್ಳುವ ತುಣುಕುಗಳು ಸಿನಿಮಾ ನೋಡುವಂತೆ ಮಾಡಿದೆ. ಈಗಾಗಲೇ ಟೀಸರ್ ವೈರಲ್ ಆಗಿದ್ದು, ಸದ್ಯದಲ್ಲೆ ಚಿತ್ರವು ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin