ತೆಲುಗಿನ “ಆಂಧ್ರ ಕಿಂಗ್ ತಾಲೂಕು” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

ತೆಲುಗಿನ “ಆಂಧ್ರ ಕಿಂಗ್ ತಾಲೂಕು” ಚಿತ್ರದ ಟ್ರೈಲರ್ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ `ಆಂಧ್ರ ಕಿಂಗ್ ತಾಲೂಕ’ ಟ್ರೈಲರ್ ಬಿಡುಗಡೆ ಆಗಿದೆ. ತೆಲುಗು ನಟ ರಾಮ್ ಪೋತಿನೇನಿ ಮತ್ತು ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಸಾಥ್ ಕೊಟ್ಟಿದ್ದಾರೆ.

ನಟ ಉಪೇಂದ್ರ ಮಾತನಾಡಿ, ಎಲ್ಲಾ ಸಿನಿಮಾ ಮಾಡೋದಿಕ್ಕೆ ಒಂದೊಂದು ಕಾರಣ ಇರುತ್ತದೆ. ಸಬ್ಜೆಕ್ಟ್, ಮೆಸೇಜ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣ. ಆದರೆ ಈ ಸಿನಿಮಾ ಮಾಡಿರುವುದು ಅಭಿಮಾನಿಗಳಿಗೋಸ್ಕರ. ಈ ಚಿತ್ರ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ಚಿತ್ರ ನೋಡಿ ಮಾತನಾಡುತ್ತೇನೆ ಎಂದರು.

ನಾಯಕ ರಾಮ್ ಪೋತಿನೇನಿ ಮಾತನಾಡಿ, ಆಂಧ್ರ ಕಿಂಗ್ ತಾಲೂಕು ಸಿನಿಮಾದಲ್ಲಿ ನಾನು ಹೃದಯದಿಂದ ಅಭಿನಯಿಸಿದ್ದೇನೆ. ಅಭಿಮಾನಿ ಹಾಗೂ ನಟ ನಡುವಿನ ಪ್ರೀತಿ ಮಾತ್ರವಲ್ಲದೆ ಈ ಚಿತ್ರದಲ್ಲಿ ಎಮೋಷನ್ ಇದೆ. ಅದು ನಿಮ್ಮನ್ನು ಟಚ್ ಮಾಡುತ್ತದೆ ಎಂದುಕೊಂಡಿದ್ದೇನೆ. ಉಪ್ಪಿ ಸರ್ ಜೊತೆ ನಟಿಸಿರುವುದು ಖುಷಿ ಇದೆ. ಇದೇ ತಿಂಗಳ 27ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಪ್ಪದೇ ನಮ್ಮ ಸಿನಿಮಾ ನೋಡಿ ಎಂದರು.

ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ಆಂಧ್ರ ಕಿಂಗ್ ತಾಲೂಕು ಸಿನಿಮಾ ನಟರಿಗಿಂತ ಇದು ಅಭಿಮಾನಿಗಳಿಗೆ ಕನೆಕ್ಟ್ ಆಗುವ ಸಿನಿಮಾ. ಇದು ಅಭಿಮಾನಿ ಹಾಗೂ ಸ್ಟಾರ್ ನಡುವಿನ ಚಿತ್ರ ಎನ್ನುವುದಕ್ಕಿಂತ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನನಗೆ ಅವಕಾಶ ಕೊಟ್ಟ ಇಡೀ ಚಿತ್ರತಂಡಕ್ಕೆ ಧನ್ಯವಾದ. ನಿರ್ದೇಶಕನಾಗಿ ನನಗೆ ಇದು ಎರಡನೇ ಚಿತ್ರ ಎಂದರು.

ಸಿನಿಮಾನಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕಥೆ.

ಈ ಚಿತ್ರವನ್ನ ಮಹೇಶ್ ಬಾಬು .ಪಿ ಡೈರೆಕ್ಷನ್ ಮಾಡಿದ್ದಾರೆ. ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಇವರದ್ದೆ ಆಗಿದೆ. ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಿಸಿದ್ದಾರೆ. ಇದೇ ತಿಂಗಳ 27ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin