ಆದಿವಾಸಿ ಸಮುದಾಯದ ಕುರಿತ ಚಿತ್ರ “ ಜೋರಮ್” ಡಿಸೆಂಬರ್ 8ಕ್ಕೆ ಬಿಡುಗಡೆ
ತನ್ನ ಅಭಿನಯದ ಮೂಲಕ ಗಮನ ಸೆಳೆದಿರುವ ಬಾಲಿವುಡ್ ನಟ ಪದ್ಮಶ್ರೀ ಮನೋಜ್ ಬಾಜಪೈ ಹೊಸ ಚಿತ್ರ ‘ಜೋರಾಮ್’ ಬಿಡುಗಡೆಗೆ ಸಿದ್ದವಾಗಿದೆ. ಕೊನೆ ಹಂತದ ಪ್ರಚಾರದ ಸಲುವಾಗಿ ತಂಡ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮುಖಾಮುಖಿಯಾಗಿತ್ತು
ತಡವಾಗಿ ಬಂದುದಕ್ಕೆ ಕ್ಷಮೆಯಾಚಿಸಿದ ನಟ ಮನೋಜ್ ಬಾಜಂಪೈ ಬೆಂಗಳೂರು ಸ್ಪಲ್ಪ ಗೊತ್ತಿದೆ. ನನ್ನ ಪೂರ್ವಜರು ಕರ್ನಾಟಕದವರು. ಕನ್ನಡ ಚಿತ್ರರಂಗ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅದರಲ್ಲೂ ‘ಗರುಡ ಗಮನ ವೃಷಭ ವಾಹನ’ ‘ಕಾಂತಾರ’ ಚಿತ್ರಗಳು ನೋಡಿದ್ದೇನೆ. ಅದು ನನ್ನನ್ನು ತುಂಬ ಕಾಡಿದೆ. ಇಂತಹ ಚಿತ್ರಗಳು ನನಗೆ ಧೈರ್ಯ, ಸ್ಪೂರ್ತಿ ತುಂಬುತ್ತದೆ ಎಂದರು.
ಸಿನಿಮಾವು ಆದಿವಾಸ ಜನಾಂಗದ ಕಥೆ ಹೇಳಲಿದೆ. ಒಂದು ದೃಶ್ಯದಲ್ಲಿ ಮೂರು ತಿಂಗಳ ಮಗುವಿನೊಂದಿಗೆ ಓಡುವುದು, ಫೈಟ್ ಮಾಡುವುದು ತುಂಬಾ ಕಷ್ಟವಾಗಿತ್ತು. ಮುಂಬೈನಿಂದ ಜಾರ್ಖಂಡ್ ಕಾಡಿಗೆ ಪಯಣ ಬೆಳೆಸುವುದು. ಭೂಮಿಯನ್ನು ಕಿತ್ತುಕೊಳ್ಳುವ ಅನೈತಿಕತೆಯ ಪ್ರಕ್ಷುಬ್ದ ಅಂಶಗಳು, ಅಪರಾಧ ಮತ್ತು ದು:ಖದ ಆಳವಾದ ಪ್ರಜ್ಘೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಸ್ಥಳೀಯ ಶಾಸಕನ ದಬ್ಬಾಳಿಕೆಯಿಂದ ವ್ಯವಸ್ಥೆಯು ವಿರುದ್ದ ಹೋರಾಡುವ ಸನ್ನಿವೇಶಗಳು ಇರಲಿದೆ. ಇಲ್ಲಿನ ಕಾಲೇಜಿಗೆ ಭೇಟಿ ನೀಡಿದ್ದು ಸಂತಸ ತಂದಿದೆ ಎಂದರು.
ರಚನೆ,ಚಿತ್ರಕಥೆ, ನಿರ್ಮಾಣದಲ್ಲಿ ಪಾಲುದಾರರಾಗಿರುವ ದೇವಶಿಷ್ ಮಖೀಜಾ ಆಕ್ಷನ್ ಕಟ್ ಹೇಳಿದ್ದಾರೆ. ಜೀ ಸ್ಟುಡಿಯೋಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ಪತ್ನಿಯಾಗಿ ತನ್ನಿಷ್ಟ ಚಟ್ಟರ್ಜಿವಾನೋ ಇವರೊಂದಿಗೆ ರಾಜಶ್ರೀದೇಶಪಾಂಡೆ, ಮೊಹ್ಮದ್ಜಿಶಾನ್ ರತ್ನಾಕರ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಮಂಗೇಶ್ ದಾಕ್ಡೆ, ಛಾಯಾಗ್ರಹಣ ಪಿಯೂಷ್ಪೂಟಿ, ಸಂಕಲನ ಆಬ್ರೋ ಬ್ಯಾನರ್ಜಿ ನಿರ್ವಹಿಸಿದ್ದಾರೆ.
ಚಿತ್ರ ಈಗಾಗಲೇ ಸೌತ್ ಕೊರಿಯಾ, ಸಿಡ್ನಿ, ನೆದಲ್ರ್ಯಾಂಡ್ಸ್, ಚಿಕಾಗೋ, ಸೌತ್ ಆಫ್ರಿಕಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ.