Trailer released of 'Murdered Murder': Curious Increase

‘ಕೊಲೆಯಾದವನೆ ಕೊಲೆಗಾರ’ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

‘ಕೊಲೆಯಾದವನೆ ಕೊಲೆಗಾರ’ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ

ಪ್ರತಿಭಾವಂತರ ತಂಡ ಹೊಸ ಕನಸು ಮತ್ತು ಚಿತ್ರರಂಗದಲ್ಲಿ ಸಾಧಿಸುವ ಹಂಬಲದೊಂದಿಗೆ ‘ ಕೊಲೆಯಾದವನೆ ಕೊಲೆಗಾರ” ಚಿತ್ರವನ್ನು ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ತಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಿದೆ.

ಗುಲ್ಬರ್ಗಾದ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು “ ಕೊಲೆಯಾದವನೇ ಕೊಲೆಗಾರ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಯುವ ಪ್ರತಿಭಾನ್ವಿತರ ತಂಡಕ್ಕೆ ಶುಭಹಾರೈಸಿದ್ಧಾರೆ

ದುಷ್ಚಟಗಳಿಗೆ ಬಲಿಯಾಗಿ, ಅಂತರನ್ನೇ ಸ್ನೇಹಿತರನ್ನೇ ಮಾಡಿಕೊಂಡು, ಓದು ಬಿಟ್ಟು, ಕಡೆಯಲ್ಲಿ ಜೀವನವನ್ನೇ ಹಾಳು ಮಾಡಿಕೊಂಡು, ಅಪ್ಪ-ಅಮ್ಮನನ್ನು ಕಳೆದುಕೊಂಡು, ಹೇಗಪ್ಪ ಜೀವನ ಮಾಡುವುದು ಎಂಬ ಸ್ಥಿತಿಗೆ ತಲುಪುವುದೆ ಕೊಲೆಯಾದವನೇ ಕೊಲೆಗಾರ ಸಿನಿಮಾದ ಒನ್ ಲೈನ್ ಸ್ಟೋರಿ

ನಿರ್ಮಾಪಕ, ನಿರ್ದೇಶಕ ಮಲ್ಲಿಕಾರ್ಜುನ ಹೀರೇತನದ್ ಮಾತನಾಡಿ, ಒಂದೊಂದು ವಿಭಿನ್ನ ಕಥೆಗಳನ್ನು ಹೇಳುತ್ತವೆ. ತುಂಬಾ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೀವಿ. ಹುಟ್ಟಿದ್ದು ಹಾವೇರಿಯಲ್ಲಿ, ಬೆಳೆದಿದ್ದೆಲ್ಲಾ ತುಮಕೂರಿನಲ್ಲಿ. ಸಿನಿಮಾದ ಮೇಲಿನ ಆಸಕ್ತಿಯಿಂದ ನಿರ್ದೇಶನ ಮಾಡಿದ್ದೀನಿ. ಬಡವರ ಮನೆ ಮಗ ಬೆಂಗಳೂರಿಗೆ ಬಂದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂದು ತೋರಿಸಿದ್ದೀವಿ. ತಂದೆ-ಮಗಳ ಬಾಂಧವ್ಯವೂ ಇದರಲ್ಲಿದೆ ಚಿತ್ರಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡರು

ನಟ ಸಿದ್ದು ಎನ್ ಆರ್ ಮಾತನಾಡಿ, ಹೀರೋಯಿನ್ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡರೆ ಹೀರೋ ಬಂದು ಕಾಪಾಡ್ತಾನೆ ಎಂಬುದು ತಲೆಯಲ್ಲಿ ಬರುತ್ತೆ. ಆದರೆ ನಮ್ಮ ಸಿನಿಮಾದಲ್ಲಿ ಒಂದೊಂದು ಸೀನ್ ಕೂಡ ಸಸ್ಪೆನ್ಸ್ ಆಗಿದೆ. ಒಂದೊಂದು ಫೋಟೋ ಕೂಡ ಒಂದೊಂದು ಕಥೆ ಹೇಳುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಕಥೆ ಇಷ್ಟವಾಗುತ್ತದೆ. ಇಂಡಸ್ಟ್ರಿಗೆ ಬರಬೇಕೆಂದು ನಾನು ಇಷ್ಟಪಡುತ್ತಿದ್ದೆ. ಅಷ್ಟರಲ್ಲಿ ನಿರ್ದೇಶಕರು ಕೂಡ ಪರಿಚಯವಾಗಿದ್ದರು. ಹೀಗಾಗಿ ಇಬ್ಬರ ವೇವ್ಸ್ ಮ್ಯಾಚ್ ಆಗಿ, ಈ ಸಿನಿಮಾ ಮಾಡಿದ್ದೇವೆ ಸಹಕಾರವಿರಲಿ ಎಂದರು.

ನಟ ಕಿರಣ್ ಸೋಮಣ್ಣ ಮಾತನಾಡಿ,ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ್ದೀನಿ. ವೆಬ್ ಸೀರಿಸ್ ಮಾಡುವಾಗ ನಿರ್ದೇಶಕರ ಪರಿಚಯವಾಯಿತು. ಅಲ್ಲಿಂದ ನಮ್ಮೆಲ್ಲರ ಜರ್ನಿ ಹಾಗೇ ಸಾಗುತ್ತಾ ಇದೆ. ಫ್ರೆಂಡ್ಸ್ ಆಗಿನೇ ಎಲ್ಲರೂ ತೆರೆ ಮೇಲೂ ಕಾಣಿಸಿಕೊಳ್ಳುತ್ತೀವಿ ಎಂದಿದ್ದಾರೆ.

ಎಲ್ಲಾ ಹೊಸಬರು, ಸಿನಿಮಾ ಕ್ರೇಜ್ ಇರುವಂತವರೇ ಸೇರಿಕೊಂಡು ಕೊಲೆಯಾದವನೇ ಕೊಲೆಗಾರ ಎಂಬ ಸಿನಿಮಾವನ್ನು ಸಿದ್ಧ ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಈ ಸಿನಿಮಾವನ್ನು ಅಭಯ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಅತಿಶಯ ಜೈನ್ ಎಂ ಕೆ – ಸಂಗೀತ, ಅರವಿಂದ ರಾಜ್ – ಸಂಕಲನ, ಅಜಯ್ – ಫೈಟ್ ಮಾಸ್ಟರ್ ಆಗಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಕಿರಣ್ ಸೋಮಣ್ಣ, ಸಿದ್ದು ಎನ್ ಆರ್, ಚಂದ್ರಿಕಾ, ಅಜಯ್ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin