Directed by Kichcha Sudeep after a decade: A gift to fans by the film KK

ದಶಕದ ಬಳಿಕ ಕಿಚ್ಚ ಸುದೀಪ್ ನಿರ್ದೇಶನ:ಕೆಕೆ ಚಿತ್ರದ ಮೂಲಕ ಅಭಿಮಾನಿಗಳಿಗೆ ಉಡುಗೊರೆ - CineNewsKannada.com

ದಶಕದ ಬಳಿಕ ಕಿಚ್ಚ ಸುದೀಪ್ ನಿರ್ದೇಶನ:ಕೆಕೆ ಚಿತ್ರದ ಮೂಲಕ ಅಭಿಮಾನಿಗಳಿಗೆ ಉಡುಗೊರೆ

ಮಾಣಿಕ್ಯ ಚಿತ್ರದ ಬಳಿಕ ನಟ ಕಿಚ್ಚ ಸುದೀಪ್ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ, ನಟನೆಯಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅವರನ್ನು ಕೆಆರ್‍ಜಿ ಸ್ಟುಡಿಯೋ ಮತ್ತೆ ನಿರ್ದೇಶನದತ್ತ ಕರೆ ತಂದಿದೆ. ಅದುವೇ “ಕೆಕೆ” ಚಿತ್ರದ ಮೂಲಕ.ದೇವರು ಕ್ಷಮಿಸುತ್ತಾನೆ, ನಾನು ಕ್ಷಮಿಸುವುದಿಲ್ಲ ಅನ್ನುತ್ತಿದ್ದಾರೆ ಕಿಂಗ್ ಕಿಚ್ಚ’

ನಟ ಸುದೀಪ್ ಅವರ 50 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು ಗಮನ ಸೆಳೆದಿದ್ದು ಅಭಿಮಾನಿಗಳ ಕಾತುರತೆ ಹೆಚ್ಚುವಂತೆ ಮಾಡಿದೆ.

ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಾಣಿಕ್ಯ' ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ಕೆಕೆ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

ಸುದೀಪ್ ಅವರಿಗೆ ಸೆಪ್ಟೆಂಬರ್ 2 ರಂದು 50ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರು ನಿರ್ದೇಶನಕ್ಕೆ ಮರಳಿರುವ ವಿಷಯ ಅವರ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಕೆಕೆ ಚಿತ್ರಕ್ಕೆ ”God Forgives, I don’t – King Kichcha” ಎಂಬ ಅಡಿಬರಹವಿದ್ದು, ಈ ಚಿತ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಮೈ ಆಟೋಗ್ರಾಫ್' ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು,ಕೆಕೆ’ ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಹಾಗೆಯೇ, ಇದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . `ರತ್ನನ್ ಪ್ರಪಂಚ’ ಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಗುಣಮಟ್ಟದ ಚಿತ್ರಗಳು ಬಿಡುಗಡೆಯಾಗಲಿಕ್ಕೆ ಸಜ್ಜಾಗಿವೆ.

ಸುದೀಪ್ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುತ್ತಿರುವ ಕುರಿತು ಮಾತನಾಡುವ ಕಾರ್ತಿಕ್ ಗೌಡ, `’ಹುಚ್ಚ’ ಚಿತ್ರದಿಂದ ನಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೊತೆಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಇದೀಗ ನನಸಾಗುತ್ತಿದ್ದು, ಅವರು ನಟನೆಯ ಜೊತೆಗೆ ನಿರ್ದೇಶನ ಸಹ ಮಾಡುತ್ತಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎನ್ನುತ್ತಾರೆ.

ನಟ ಕಿಚ್ಚ ಸುದೀಪ್ ಮತ್ತೆ ನಿರ್ದೇಶನ ಮಾಡುವ ಮೂಲಕ ಅಭಿಮಾನಿಗಳ ಕಾತುರತೆಯನ್ನು ತಣಿಸಲು ಮುಂದಾಗಿದ್ದು ಪೋಸ್ಟರ್ ಮೂಲಕ ಗಮನ ಸೆಳೆದಿದ್ಧಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin