ಪ್ರೀತಿಯಿಂದ ಸಿನಿಮಾ ಮಾಡಬೇಕು : ಅಗ ಮಾತ್ರ ಸಿನಿಮಾ‌ ಜನರಿಗೆ ಇಷ್ಟವಾಗಲಿದೆ ; ಡಾ. ಆರ್.‌ಚಂದ್ರು - CineNewsKannada.com

ಪ್ರೀತಿಯಿಂದ ಸಿನಿಮಾ ಮಾಡಬೇಕು : ಅಗ ಮಾತ್ರ ಸಿನಿಮಾ‌ ಜನರಿಗೆ ಇಷ್ಟವಾಗಲಿದೆ ; ಡಾ. ಆರ್.‌ಚಂದ್ರು

ಚಿತ್ರರಂಗದ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಾವೆಲ್ಲಾ ಪ್ರೀತಿಯಿಂದ ಸಿನಿಮಾ ಮಾಡಬೇಕು. ಹಾಗೆಯೇ ಪ್ರೇಕ್ಷಕ ಮೊದಲು ನಮ್ಮ ಮನೆ ಊಟ (ಸಿನಿಮಾ) ಇಷ್ಟ ಪಡುವಂತೆ ಆಗಬೇಕು… ಆಗ ಮಾತ್ರ ಕನ್ನಡ ಚಿತ್ರಗಳಿಗೂ ಮನ್ನಣೆ ಸಿಗಲಿದೆ…

Rchandru #Rchandru

ಹೀಗಂತ ಹೇಳಿದರು ನಿರ್ಮಾಪಕ‌, ನಿರ್ದೇಶಕ ಆರ್. ಚಂದ್ರು.. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು, ಹಿತೈಷಿಗಳಿಂದ ಶುಭಾಷಯ ಸ್ವೀಕರಿಸಿದ ಬಳಿಕ ಮಾಹಿತಿ ಹಂಚಿಕೊಂಡರು.

ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕಕೊಂಡಿರುವ ‘ಫಾದರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ಮಾಹಿತಿ ನೀಡಲಾಗುವುದು. ಈ ಚಿತ್ರ ತಂದೆ- ಮಗನ ಭಾವನಾತ್ಮಕ‌ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು

ದೊಡ್ಡ ಮಟ್ಟದಲ್ಲಿ ಸಿನಿಮಾ‌ ಮಾಡುವ ಆಲೋಚನೆ ಇದೆ.‌ ಸದ್ಯದಲ್ಲಿಯೇ ಮಾಹಿತಿ ನೀಡಲಾಗುವುದು ಎಲ್ಲರಿಗೂ ಹಿಡಿಸುವ ಮತ್ತು ಇಷ್ಟವಾಗುವ ಸಿನಿಮಾ‌ ನೀಡುವ ಉದ್ದೇಶ ನಮ್ಮದು ಎಂದು ಮಾಹಿತಿ ಹಂಚಿಕೊಂಡರು

ಅಪ್ಪನ‌ ಕನಸು ಈಗ ನನಸು


ಅಪ್ಪ ನನ್ನನ್ನು ಡಾಕ್ಟರ್ ಮಾಡಬೇಕು ಎಂದು ಬಯಸಿದ್ದರು. ಅದು ಸಾದ್ಯವಾಗಲಿಲ್ಲ. ಅದನ್ನು ನನ್ನ ತಮ್ಮ ಈಡೇರಿಸಿದ್ದರು. ಇದೀಗ ಗೌರವ ಡಾಕ್ಟರೇಟ್ ಸಿಕ್ಕಿರುವುದು ಖುಷಿ ಆಗಿದೆ. ಈ ಮೂಲಕ ಅಪ್ಪನ‌ ಕನಸು ಈಗ ನನಸಾಗಿದೆ ಎಂದು ಮಾಹಿತಿ ನೀಡಿದರು ಡಾ.ಆರ್. ಚಂದ್ರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ವೇಳೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಮತ್ತಷ್ಟು ಖುಷಿ ಹೆಚ್ಚು ಮಾಡಿದೆ.
ಡಾಕ್ಟರೇಟ್ ಪಡೆಯುತ್ತೇನೆ ಎಂದು ಅಂದುಕೊಂಡಿರಿಲ್ಲ. ಅನಿರೀಕ್ಷಿತವಾಗಿ ಬಂದ ಗೌರವವನ್ನು ಮನಸಾರೆ ಸ್ಚೀಕಾರ ಮಾಡುವೆ ಎಂದರು.

ಸಿನಿಮಾ ರಂಗದಲ್ಲಿ ಇಷ್ಟ ಆದ್ದರಿಂದ ಇಲ್ಲಿಗೆ ಬಂದೆ. ಮಾಡಿರುವ ಸಿನಿಮಾ ಸೇರಿದಂತೆ ಗೀಡ ನೆಡುವುದು, ನೀರಾವರಿ ಹೋರಾಟ ಹೀಗೆ ಸಮಾಜಪರ ಕೆಲಸಕ್ಕೆ ಈ ಗೌರವ ಡಾಕ್ಟರೇಟ್ ಬಂದಿದೆ. ಈ ಡಾಕ್ಟರೇಟ್ ಬಂದಿದ್ದು ತಂದೆಗೆ ಅರ್ಪಣೆ ಮಾಡುತ್ತೇನೆ. ನನ್ನನ್ನು ಸಿನಿಮಾ ಜೊತೆಗೆ ಕೃಷಿ, ಮೀನುಗಾರಿಕೆ, ತೋಟಗಾರಿಕೆ ಸೇರಿದಂತೆ ಹಲವಾರು ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಡಾಕ್ಟರ್ ಚಂದ್ರು ಆಗಿ ಇರುವ ಬದಲು ಆರ್. ಚಂದ್ರು ಆಗಿಯೇ ಮುಂದುವರೆಯುತ್ತೇನೆ ಎಂದು ಹೇಳಿದರು.

ಎಲ್ಲಾ ಪಕ್ಷಗಳಲ್ಲಿ ನಾಯಕರ ಸಂಪರ್ಕ

ಈ ಮುಂಚೆ ರಾಜಕೀಯಕ್ಕೆ ಬರಬೇಕು ಶಾಸಕನಾಗಬೇಕು ಎನ್ನುವ ಹಂಬಲವಿತ್ತು.‌ಈಗ ಸಿನಿಮಾದಲ್ಲಿಯೇ ಕೆಲಸ‌ ಮಾಡಲು ಕೈ ತುಂಬ ಕೆಲಸವಿದೆ.‌ ಜೊತೆಗೆ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಅವಕಾಶ ಬಂದರೆ ಮುಂದೆ ನೋಡೋಣ. ನ‌ನಗೆ ಎಲ್ಲಾ ಪಕ್ಷಗಳಲ್ಲಿ ನಾಯಕರ ಸಂಪರ್ಕವಿದೆ ಎಂದರು.

ಈ ವೇಳೆ ನಿರ್ಮಾಪಕ ಉದಯ ಮೆಹ್ತಾ, ಜೀಮ್ ರವಿ, ನವರಸನ್ , ನಿರ್ದೇಶಕ ಮಂಜುನಾಥ್ ಮೌರ್ಯಣ ಸೇರಿದಂತೆ ಹಲವು ಗಣ್ಯರು ಆರ್ ಚಂದ್ರುಗೆ ಹುಟ್ಡುಹಬ್ಬದ ಶುಭ ಹಾರೈಸಿದರು.

ಡಾ. ಆರ್. ಚಂದ್ರು ಹಿನ್ನೆಲೆ

ನಿರ್ದೇಶಕ, ನಿರ್ಮಾಪಕನಾಗಿ ಹೆಸರು ಮಾಡಿರುವ ಆರ್. ಚಂದ್ರು ಸದ್ಯ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು 20 ವರ್ಷಗಳ ಹಿಂದೆ 100 ರೂ ಇಟ್ಟುಕೊಂಡು ಬೆಂಗಳೂರಿಗೆ ಬಂದವರು. ರೈಟರ್ ಆಗಿ ಚಿತ್ರರಂಗದಲ್ಲಿ ವೃತ್ತಿ ಪ್ರಾರಂಭ ಮಾಡಿದ ಚಂದ್ರು ನಿರ್ದೇಶನಾಗಿ, ನಿರ್ಮಾಪಕನಾಗಿ ಮೈಲುಗಲ್ಲು ಸೃಷ್ಟಿಸಿದ್ದಾರೆ.

ಬರಿ ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ತಮ್ಮನ್ನು ತ ತೊಡಗಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿ ಹಳ್ಳಿಗೂ ಚಂದ್ರು ಪರಿಚಯ. ಎತ್ತಿನ ಹೊಳೆ ಯೋಜನೆ ಹೋರಾಟ ಸೇರಿದಂತೆ ಹಲವು ಅಭಿವೃದ್ಧಿಪರ ಹೋರಾಟದಲ್ಲಿ ಭಾಗಿಯಾಗಿದ್ದ ಆರ್ ಚಂದ್ರು ಶಿಕ್ಷಣ ಹಾಗೂ ಧಾರ್ಮಿಕವಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಿನಿಮಾ ಜೊತೆಗೆ ಆರ್ ಚಂದ್ರು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಡಲು ಘೋಷಣೆ ಮಾಡಿದೆ.ಹೀಗಾಗಿ ಆರ್. ಚಂದ್ರು ಇನ್ನು ಮುಂದೆ ಡಾ. ಚಂದ್ರು ಆಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin