“ಮುಕ್ತ ಮನಸು” ಚಿತ್ರ ಚಿತ್ರೀಕರಣ ಪೂರ್ಣ, ತೆರೆಗೆ ಬರಲು ಸಜ್ಜು

ಹೊಸಬರೇ ಸೇರಿಕೊಂಡು ‘ಮುಕ್ತ ಮನಸು’ ಸಿನಿಮಾ ಸಿದ್ದಪಡಿಸಿದ್ದಾರೆ. ‘ಕೇಳದೆ ನಿಮಗೀಗ’ ಎಂಬ ಅಡಿಬರಹವಿದೆ. ಮೈಸೂರು ಮೂಲದ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಬೋರೇಗೌಡ ,ಲೋಕೇಶ್‍ಜಿ.ಎನ್.ವೀಣಾ ನಿರ್ಮಾಣದಲ್ಲಿ ಪಾಲುದಾರರು ಚಿತ್ರಕ್ಕೆ ಆರ್.ಸಿ.ರಂಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕ ಕೃಷ್ಣೇಗೌಡ ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ರಂಗಶೇಖರ್, ಮುಕ್ತ ಕಲ್ಮಶ ಇಲ್ಲದ ಪ್ರೀತಿ ಹೇಗೆ ಕೊನೆ ತನಕ ಉಳಿದುಕೊಳ್ತದೆ. ಅದು ಹೇಗಿರುತ್ತದೆ. ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ಆಕೆಗೆ ಪಯಣದಲ್ಲಿ ಒಬ್ಬನೊಂದಿಗೆ ಲವ್ ಬೆಸೆಯುತ್ತದೆ. ಮನೆಯಲ್ಲಿ ವಿರೋದ ಎದುರಾದಾಗ ಮುಕ್ತ ಮನಸುಗಳ ಪ್ರೀತಿ ಯಾವ ಹಂತಕ್ಕೆ ತಲುಪುತ್ತದೆ. ಕೊನೆಗೆ ಇಬ್ಬರು ಒಂದಾಗುತ್ತಾರಾ ಎಂಬುದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ ಎಂದರು.

ಮೋಹನ್ ರಂಗನಾಥ್ ನಾಯಕ. ಮಾನ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಶೋಭರಾಜ್, ರಮೇಶ್‍ಪಂಡಿತ್, ಅಪರ್ಣ, ನಾಗರತ್ನ, ಸೆಂಚೂರಿಗೌಡ, ಜಾನು, ಮಂಜುಬಿಳಿಗೆರೆ, ಮಧು ಮುಂತಾದವರು ನಟಿಸಿದ್ದಾರೆ.ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ ರವಿ, ಸಾಹಸ ಕೌರವವೆಂಕಟೇಶ್, ನೃತ್ಯ ಪ್ರಮೋದ್-ಸತ್ಯ ಅವರದಾಗಿದೆ. ಮೈಸೂರು, ಮಂಡ್ಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‍ನಿಂದ ಪ್ರಶಂಸೆ ಪಡೆದುಕೊಂಡಿರುವ ಚಿತ್ರವು ಏಪ್ರಿಲ್ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.