Raju james Bond is all set to hit the screens by the end of the year

“ರಾಜು ಜೇಮ್ಸ್ ಬಾಂಡ್” ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜು - CineNewsKannada.com

“ರಾಜು ಜೇಮ್ಸ್ ಬಾಂಡ್”  ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜು

ನಟ ಗುರುನಂದನ್ ಅವರ ರಾಜು ಸರಣಿಯ ಮತ್ತೊಂದು ಚಿತ್ರ “ರಾಜು ಜೇಮ್ಸ್ ಬಾಂಡ್ ” ಚಿತ್ರ ಈ ವರ್ಷದ ಅಂತ್ಯದಲ್ಲಿ ರಾಜ್ಯದಾದ್ಯಂತ ಬಿಡುಗಡೆ ಮಾಡಲಿ ತಂಡ ಸಜ್ಜಾಗಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ, “ಫಸ್ಟ್ ರಾಂಕ್ ರಾಜು” ಖ್ಯಾತಿಯ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ.

ಕರ್ಮ ಬ್ರೋಸ್ ಪ್ರೊಡಕ್ಷನ್ಸ್  ತನ್ನ ಅತ್ಯಂತ ನಿರೀಕ್ಷಿತ ಹೊಸ ಸಿನಿಮಾ ಮನಮೋಹಕ ಕಥೆ, ಹಾಸ್ಯ, ಲಂಡನ್‍ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ.

“ರಾಜು ಜೇಮ್ಸ್ ಬಾಂಡ್ ” ಹಾಸ್ಯ ಮತ್ತು ಹೈಸ್ಟ್ ಡ್ರಾಮಾದ ಸಂಯೋಜನೆಯನ್ನು ತೋರಿಸುತ್ತದೆ. ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ನಂತರ ಈ ಚಿತ್ರವು ಈಗಾಗಲೇ ಗಮನಾರ್ಹ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಈ ವರ್ಷದ ಅತ್ಯಂತ ಗಮನಾರ್ಹ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

“ರಾಜು ಜೇಮ್ಸ್ ಬಾಂಡ್ ” ಚಿತ್ರವನ್ನು ಥಿಯೇಟರ್‍ಗಳಿಗೆ ತರುವುದಕ್ಕೆ ಉತ್ಸುಕವಾಗಿದ್ದೇವೆ,” ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಮತ್ತು ಕಿರಣ್ ಭರ್ತೂರು (ಕ್ಯಾನೆಡಾ) ಹೇಳಿದ್ದಾರೆ.

ಪೂರ್ತಿ ಸಿನಿಮಾವನ್ನು ಈವರೆಗೆ ಹಲವಾರು ಭಾರಿ ನೋಡಿದ್ದರೂ ಒಂದು ಸಲಕ್ಕೂ ಬೇಸರವಾಗಿಲ್ಲ ಹಾಗು ಒಂದಿಷ್ಟು ಫಾರ್ವಡ್ ಮಾಡದೇ ಇಡೀ ಸಿನಿಮಾ ನೋಡಿಸಿಕೊಂಡು ಸಾಗಿದೆ. ಹೊಟ್ಟೆ ತುಂಬಾ ನಕ್ಕಿದ್ದೇವೆ, ನಮಗೆ ಕತೆ ಗೊತ್ತಿದ್ದರು ಕೆಲವು ಸನ್ನಿವೇಶಗಳಲ್ಲಿ ಸೀಟಿನ ತುದಿಯಲ್ಲಿ ಕೂತು ಕುತೂಹಲದಿಂದ ನೋಡಿದ್ದೇವೆ. ಹಾಗಾಗಿ ಪ್ರೇಕ್ಷಕರಿಗೂ ಇದೇ ಅನುಭವ ನೀಡುವಲ್ಲಿ ನಮ್ಮ ಸಿನಿಮಾ ಯಶ್ವಸಿಯಾಗುವುದು ಎಂದು ನಂಬಿದ್ದೇವೆ. ನಮ್ಮ ಚಿತ್ರತಂಡವು ಪ್ರೇಕ್ಷಕರನ್ನು ಮನರಂಜಿಸಲು ಮತ್ತು ಆಳವಾಗಿ ಸ್ಪಂದಿಸುವಂತಹ ಚಿತ್ರವನ್ನು ಸೃಷ್ಟಿಸಲು ಶ್ರಮಿಸಿದೆ” ಎಂದು ನಿರ್ಮಾಪಕರು ಸಿನಿಮಾ ಮೇಲಿನ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

“ಯಾವುದೇ ಸಿನಿಮಾದ ಮೊಟ್ಟ ಮೊದಲ ಆದ್ಯತೆ ಪ್ರೇಕ್ಷಕನ ಮನರಂಜನೆ ಆಗಿರಬೇಕೆಂಬುದು ನನ್ನ ಅಭಿಪ್ರಾಯ. ಹಾಗಾಗಿ ಅದನ್ನು ಮುಖ್ಯವಾಗಿ ಪರಿಗಣಸಿ ನಮ್ಮ “ರಾಜು ಜೇಮ್ಸ್ ಬಾಂಡ್” ಸಿನಿಮಾವನ್ನು ಸಿದ್ಧ ಪಡಿಸಲಾಗಿದೆ. ಸಿನಿಮಾದ ರನ್ ಟೈಂ 2:16 ಗಂಟೆಗಳಿದ್ದು ಅದರಲ್ಲಿ ಸುಮಾರು 40 ನಿಮಿಷಗಳು ಥಿಯೇಟರನಲ್ಲಿ ಪ್ರೇಕ್ಷಕರು ನಗುವಿನ ಅಲೆಯಲ್ಲಿ ತೇಲಾಡಲಿದ್ದಾರೆ ಹಾಗು ನಾಲ್ಕು ಹಾಡುಗಳಲ್ಲಿ ಲಂಡನ್ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಚಿತ್ರೀಕರಣವಾಗಿರುವ ಎರಡು ಹಾಡುಗಳು ಪ್ರೇಕ್ಷಕರಿಗೆ ಒಂದೊಳ್ಳೆ ವಿಷ್ಯುಯಲ್ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಸಿನಿಮಾದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ತಮ್ಮ ಸಿನಿಮಾದ ಬಗ್ಗೆ ಪಾಸಿಟಿವ್ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಈಗಾಗಲೇ ಸಿನಿಮಾದ ಸೆನ್ಸಾರ್ ಮುಗಿದಿದ್ದು ಸಿನಿಮಾಗೆ ಯು/ಎ ಸರ್ಟಿಫಿಕೇಷನ್ ದೊರಕಿದೆ. “ರಾಜು ಜೇಮ್ಸ್ ಬಾಂಡ್” ಬಿಡುಗಡೆಗೆ ಸಿದ್ಧವಾಗಿದ್ದು ಸಿನಿಮಾ ತಂಡ ಆದಷ್ಟು ಬೇಗ ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿಸುವ ಟೀಸರ್ ಒಂದನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ

 

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin