Padmavati Bedagi actress Nimika Ratnakar dancing at Hampi festival

ಹಂಪಿ ಉತ್ಸವದಲ್ಲಿ ಪದ್ಮಾವತಿ ಬೆಡಗಿ ನಟಿ ನಿಮಿಕಾ ರತ್ನಾಕರ್ ನೃತ್ಯ - CineNewsKannada.com

ಹಂಪಿ ಉತ್ಸವದಲ್ಲಿ ಪದ್ಮಾವತಿ ಬೆಡಗಿ ನಟಿ ನಿಮಿಕಾ ರತ್ನಾಕರ್ ನೃತ್ಯ

ವಿಜಯನಗರ ಸಾಮ್ರಾಜ್ಯದ ಗತವೈಭವ ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗಧಿ ಮಾಡಿದೆ. ಮೂರು ದಿನಗಳ ಹಂಪಿ ಉತ್ಸವದಲ್ಲಿ ನಾನಾ ಪ್ರಕಾರಗಳ ಕಲಾ ಪ್ರದರ್ಶನ, ಥರ ಥರದ ಕಾರ್ಯಕ್ರಮಗಳು ಈ ಉತ್ಸವದ ಪ್ರಧಾನ ಆಕರ್ಷಣೆ.

ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಅಂಥಾದ್ದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ವಿಶೇಷವೆಂದರೆ, ಈ ಹಾಡೇ ಅವರನ್ನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುವ ನಿಮಿಕಾ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಹಂಪಿ ಎಂದರೇನೇ ಅದೇನೋ ಆಕರ್ಷಣೆ. ನಿಮಿಕಾ ರತ್ನಾಕರ್ ಪಾಲಿಗೂ ಅಂಥಾದ್ದೊಂದು ಸೆಳೆತವಿದೆಯಂತೆ. ಆದರೆ ಈ ವರೆಗೂ ಅಲ್ಲಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿರಲಿಲ್ಲ. ಕೆಲ ಹಾಡುಗಳ ಮೂಲಕವಷ್ಟೇ ಹಂಪಿಯನ್ನು ಕಣ್ತುಂಬಿಕೊಂಡಿದ್ದ ತಮ್ಮ ಪಾಲಿಗೆ ಆ ಪರಿಸರದಲ್ಲಿ ಬೆರೆಯುವ ಅವಕಾಶ ಸಿಕ್ಕಿದ್ಚದು ಖುಷಿ ಕೊಟ್ಟಿದೆ ಎಂಬುದು ನಿಮಿಕಾ ಮನದ ಮಾತು. ಈ ಹಿಂದೆ ನಿಮಿಕಾ ದಸರಾ ಉತ್ಸವದಲ್ಲಿಯೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಪೋಷಕರು ಹಾಜರಿದ್ದು ಖುಷಿಗೊಂಡಿದ್ದರು. ಈ ಬಾರಿಯೂ ಪೋಷಕರೊಂದಿಗೆ ಹಂಪಿ ಉತ್ಸವದಲ್ಲಿ ಭಾಗಿಯಾಗೋ ಇಂಗಿತ ನಿಮಿಕಾರದ್ದು.

ಅಷ್ಟಕ್ಕೂ ಶೇಕ್ ಇಟ್ ಪುಷ್ಪವತಿ ಎಂಬ ಹಾಡು ನಿಮಿಕಾಗೆ ಒಂದಿಡೀ ಕರ್ನಾಟಕಕ್ಕೆ ಪ್ರದಕ್ಷಿಣೆ ಹಾಕುವ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ಅವರು ರಾಜ್ಯದ ನಾನಾ ಪ್ರದೇಶಗಳಲ್ಲಿ ಈ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೀಗ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರೋದು ಅವರ ಪಾಲಿಗೆ ವಿಶೇಷ ಘಳಿಗೆ. ಯಾಕೆಂದರೆ, ಉತ್ತರ ಕರ್ನಾಟಕ ಮಂದಿಯ ಪ್ರೀತಿ, ಅಭಿಮಾನ ಪಡೆದುಕೊಂಡಿರುವ ಅವರಿಗೆ, ಅಭಿಮಾನಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಸುಯೋಗ ಕೂಡಿ ಬಂದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin